Home Interesting Alok Mohan: ನೂತನ ಡಿಜಿ, ಐಜಿಪಿಯಾಗಿ `ಅಲೋಕ್ ಮೋಹನ್’ ಅಧಿಕಾರ ಸ್ವೀಕಾರ

Alok Mohan: ನೂತನ ಡಿಜಿ, ಐಜಿಪಿಯಾಗಿ `ಅಲೋಕ್ ಮೋಹನ್’ ಅಧಿಕಾರ ಸ್ವೀಕಾರ

Alok Mohan

Hindu neighbor gifts plot of land

Hindu neighbour gifts land to Muslim journalist

Alok Mohan: ಕರ್ನಾಟಕ ರಾಜ್ಯದ ನೂತನ ಡಿಜಿ, ಐಜಿಪಿಯಾಗಿ ಅಧಿಕೃತವಾಗಿ `ಅಲೋಕ್ ಮೋಹನ್’ (Alok Mohan) ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಅಧಿಕೃತವಾಗಿ `ಅಲೋಕ್ ಮೋಹನ್’ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಲ್ಲದೇ ನಿರ್ಗಮಿತ ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರು ಬ್ಯಾಟನ್ ಅಲೋಕ್ ಮೋಹನ್ ಗೆ ಹಸ್ತಾಂತ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಗಿದೆ. ಬಿಹಾರ ಮೂಲದ ಡಾ. ಅಲೋಕ್ ಮೋಹನ್ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. 1987ನೇ ಬ್ಯಾಚ್​​ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಡಾ. ಅಲೋಕ್ ಮೋಹನ್ ಅಗ್ನಿಶಾಮಕ ದಳ, ತುರ್ತು ಸೇವೆಗಳ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರಾಗೃಹ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ನೂತನ ಡಿಜಿ, ಐಜಿಪಿಯಾಗಿಅಲೋಕ್ ಮೋಹನ್ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಕರ್ನಾಟಕದಲ್ಲಿ
ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು, ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಕ್ರೈಮ್​​ಗೆ ಬೇಕ್‌ ಹಾಕೋದಕ್ಕೆ ಮುಂದಾಗುವೆ ಎಂದಿದ್ದಾರೆ.

 

ಇದನ್ನು ಓದಿ: Police Jobs: 1420 ಲೇಡಿ ಕಾನ್ಸ್​​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ ₹ 58,500 ವೇತನ ನಿಮ್ಮದಾಗಲಿದೆ!