Rs 2,000 Notes From Circulation: 2000 ನೋಟು ಬ್ಯಾನ್ ವಿಚಾರದಲ್ಲಿ ಗೊಂದಲ ಆಗುತ್ತಿದೆಯೇ? ಹಾಗಿದ್ರೆ ಚಿಂತೆ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!
Rs 2000 Notes From Circulation: 2000 ರೂ. ಮುಖಬೆಲೆಯ ನೋಟುಗಳನ್ನು(2000rps Notes) ತಕ್ಷಣದಿಂದ ಜಾರಿಗೆ ಬರುವಂತೆ ನೀಡುವುದನ್ನು ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(Reserve bank) ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ.
ಹೌದು, ನೋಟು ನಿಷೇಧದ (Note Ban) ಬಳಿಕ ಹುಟ್ಟು ಪಡೆದಿದ್ದ 2000 ರೂ. ಮುಖ ಬೆಲೆಯ ನೋಟು (Rs 2,000 Currency Note) ಈಗ ಹೆಚ್ಚು ಕಡಿಮೆ ಅಂತ್ಯ ಕಾಣುತ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ʼಕ್ಲೀನ್ ನೋಟ್ʼ ನೀತಿಯ ಅಡಿ 2000 ರೂ. ನೋಟುಗಳ ಚಲಾವಣೆಯನ್ನು ಅಕ್ಟೋಬರ್ 1ರಿಂದ ಸಂಪೂರ್ಣವಾಗಿ ಸ್ಥಗಿತ ಮಾಡುವುದಾಗಿ ಆರ್‌ಬಿಐ (RBI) ಪ್ರಕಟಿಸಿದೆ.
ಅಂದಹಾಗೆ 2000 ರೂ. ನೋಟು (Rs 2000 Notes From Circulation) ಬಳಕೆಗೆ ಸಂಪೂರ್ಣ ನಿಷೇಧ ಹೇರಿಲ್ಲ. ಪಾವತಿ ಮಾಡಲು, ಹಣವನ್ನು ಸ್ವೀಕರಿಸಲು ಬಳಕೆ ಮಾಡಬಹುದು. ಸೆಪ್ಟೆಂಬರ್ 30ರವರೆಗೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ. ಆದರೆ ಹಿಂದಕ್ಕೆ ಪಡೆದ ನಿರ್ಧಾರದ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳು ಏಳುವುದು ಸಹಜ. ಈ ಹಿನ್ನೆಲೆಯಲ್ಲಿ ಗೊಂದಲಗಳನ್ನು ಕಡಿಮೆ ಮಾಡಲು ಇಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ಮಾಹಿತಿಗಳನ್ನು ನೀಡಲಾಗಿದೆ.
ನೋಟು ನಿಷೇಧಕ್ಕೂ, ಹಿಂತೆಗೆದುಕೊಳ್ಳುವುದಕ್ಕೂ ವ್ಯತ್ಯಾಸ ಏನು?
2016ರ ಸೆ.8 ರಂದು 500, 1000 ರೂ. ನೋಟುಗಳ ಬಳಕೆಗೆ ನಿಷೇಧ ಹೇರಲಾಗಿತ್ತು. ಅಂದರೆ 1000, 500 ರೂ. ಕಾನೂನಿನ ಮಾನ್ಯತೆ ರದ್ದಾಗಿತ್ತು. ಆದರೆ ಇಲ್ಲಿ ದಿಢೀರ್ 2000 ರೂ. ರದ್ದಾಗಿಲ್ಲ. ಸೆ.30ರವರೆಗೂ ಬದಲಾಯಿಸಿಕೊಳ್ಳಲು ಅವಕಾಶವಿದೆ.
2000 ರೂ. ನೋಟು ವಾಪಸ್ ಯಾಕೆ?
ಆರ್‌ಬಿಐ 2 ಸಾವಿರ ರೂ. ನೋಟನ್ನು ವಾಪಸ್ ಪಡೆದಿದೆಯೇ ಹೊರತು ನಿಷೇಧ ಮಾಡಿಲ್ಲ. ಭಾರೀ ಹಗರಣ ಮತ್ತು ನಕಲಿ ನೋಟುಗಳ ಹಾವಳಿ ತಡೆಯಲು ಈ ನಿರ್ಧಾರ ಮಾಡಲಾಗಿದೆ. ಬಡವರು, ಶ್ರೀಸಾಮಾನ್ಯರು ಹೆಚ್ಚಾಗಿ ಈ ಹಣವನ್ನು ಬಳಸುತ್ತಿಲ್ಲ.
ಯಾವಾಗ ಬದಲಾಯಿಸಬಹುದು? ಕೊನೆಯ ದಿನಾಂಕ ಯಾವುದು?
ಮೇ 23 ರಿಂದ ಆರಂಭಗೊಂಡು ಸೆ. 30ರವರೆಗೆ ಬದಲಾವಣೆಗೆ ಸಮಯಾವಕಾಶ ಇದೆ.
ಶುಲ್ಕ ಪಾವತಿಸಬೇಕೇ?
ಹಣ ಬದಲಾವಣೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಉಚಿತವಾಗಿಯೇ ಸೌಲಭ್ಯ ಪಡೆದುಕೊಳ್ಳಬಹುದು.
ಅಕೌಂಟ್ ಇಲ್ಲದೇ ಇದ್ದರೂ ಬದಲಿಸಬಹುದೇ?
ಹೌದು. ಅಕೌಂಟ್ ಇಲ್ಲದೇ ಇದ್ದರೂ ಯಾವುದೇ ಬ್ಯಾಂಕಿನಲ್ಲಿ ಗರಿಷ್ಠ ಒಂದು ದಿನದಲ್ಲಿ 20 ಸಾವಿರ ರೂ. ಹಣವನ್ನು ಬದಲಿಸಿಕೊಳ್ಳಬಹುದು. ಆರ್‌ಬಿಐ 19 ಪ್ರಾದೇಶಿಕ ಕಚೇರಿಗಳಲ್ಲಿ ನೋಟ್ ಬದಲಾವಣೆಗೆ ಅವಕಾಶವಿದೆ.
ಒಂದು ದಿನದಲ್ಲಿ ಎಷ್ಟು ರೂಪಾಯಿ ಬದಲಾಯಿಸಬಹುದು?
ದಿನವೊಂದಕ್ಕೆ ಗರಿಷ್ಠ 20 ಸಾವಿರ ರೂ. ಹಣವನ್ನು ಯಾವುದೇ ಬ್ಯಾಂಕಿನಲ್ಲಿ ಬದಲಾಯಿಸಬಹುದು.
20 ಸಾವಿರಕ್ಕಿಂತಲೂ ಜಾಸ್ತಿ ಹಣ ಇದ್ದರೆ ಏನು?
20 ಸಾವಿರ ರೂ.ಗಿಂತಲೂ ಜಾಸ್ತಿ ಹಣ ಇದ್ದರೂ ಯಾವುದೇ ಸಮಸ್ಯೆ ಇಲ್ಲ. ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಠೇವಣಿ ಇಡಬಹುದು. ಠೇವಣಿಗೆ ಯಾವುದೇ ಮಿತಿಯನ್ನು ಹೇರಿಲ್ಲ. ಆದರೆ ಕೆವೈಸಿ ಮತ್ತು ಇತರೇ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಹಿಂದೆಯೇ ಹೇಳಿತ್ತು:
ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ 2019ರ ಜನವರಿಯಲ್ಲಿ ಮಾಹಿತಿ ನೀಡಿತ್ತು. ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ 2000 ರೂ. ಚಲಾವಣೆಗೆ ತಂದಿತ್ತು.