Pregnant women: ಗರ್ಭಿಣಿಯರೇ ಎಚ್ಚರ.! ಗರ್ಭಾವಸ್ಥೆಯಲ್ಲಿ ಈ ಆಹಾರ ಸೇವಿಸಿದ್ರೆ ಭ್ರೂಣಕ್ಕೆ ಅಪಾಯವೇ? ಇಲ್ಲಿದೆ ಓದಿ

If pregnant women eat this food is it dangerous

Pregnant women: ಗರ್ಭಾವಸ್ಥೆಯಲ್ಲಿ ಮಹಿಳೆಯರು ಬಹಳ ಜಾಗರೂಕರಾಗಿರಬೇಕು. ಆಹಾರ ಸೇವನೆಗೆ ವಿಶೇಷ ಗಮನ ನೀಡಬೇಕು. ಭ್ರೂಣ ಮತ್ತು ಮಗುವಿಗೆ ಹಾನಿ ಮಾಡುವ ಆಹಾರಗಳನ್ನು ತಪ್ಪಿಸುವುದು ಉತ್ತಮ. ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಆಹಾರವನ್ನು ತಪ್ಪಿಸಬೇಕು ಎಂಬುದನ್ನು ಸೂಕ್ತ ಮಾಹಿತಿ ಇಲ್ಲಿ ತಿಳಿಯಿರಿ.

ಪಾದರಸ ಹೆಚ್ಚಿರುವ ಮೀನುಗಳನ್ನು ತಿನ್ನಬೇಡಿ. ಈ ರೀತಿಯ ಮೀನು ಗರ್ಭಾವಸ್ಥೆಯಲ್ಲಿ ನಿಮ್ಮ ಭ್ರೂಣಕ್ಕೆ ಹಾನಿ ಮಾಡುತ್ತದೆ

ಗರ್ಭಾವಸ್ಥೆಯಲ್ಲಿ (Pregnant women) ಸಂಸ್ಕರಿಸಿದ ಮಾಂಸವನ್ನು ತಿನ್ನಬೇಡಿ. ಬದಲಿಗೆ ನೀವು ತಾಜಾ ಚಿಕನ್ ಅಥವಾ ಮಟನ್ ಕರಿಯನ್ನು ತಿನ್ನಬಹುದು.

ಹೆಚ್ಚು ಮೊಟ್ಟೆಗಳನ್ನು ತಿನ್ನಬೇಡಿ. ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ತಿನ್ನುವುದರಿಂದ ಭ್ರೂಣಕ್ಕೆ ಹಾನಿ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಆದ ಕಾರಣ.. ಬೇಯಿಸಿದ ಮೊಟ್ಟೆಯನ್ನು ಸಾಧ್ಯವಾದಷ್ಟು ತಿನ್ನುವುದು ಉತ್ತಮ.

ಗರ್ಭಾವಸ್ಥೆಯಲ್ಲಿ ಸಾಧ್ಯವಾದಷ್ಟು ಕಾಫಿ ಕುಡಿಯುವುದನ್ನು ತಪ್ಪಿಸಿ. ಕೆಫೀನ್ ಹೊಂದಿರುವ ಆಹಾರಗಳು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಗರ್ಭಿಣಿಯರು ಜಂಕ್ ಫುಡ್ ನಿಂದ ದೂರವಿರುವುದೇ ಉತ್ತಮ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ವಿಪರೀತ ಜಂಕ್ ಫುಡ್ ಸೇವನೆಯೂ ಅಪಾಯಎಂದು ತಜ್ಞರು ಸೂಚಿಸುತ್ತಾರೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳನ್ನು ತಿನ್ನದಿರುವುದು ಉತ್ತಮ. ಇವು ಮಗು ಮತ್ತು ತಾಯಿ ಇಬ್ಬರಿಗೂ ಹಾನಿ ಮಾಡಬಹುದು.

ತಾಯ್ತನವನ್ನು ಅನುಭವಿಸುವ ಮಹಿಳೆಯರು ಪಪ್ಪಾಯವನ್ನು ತಿನ್ನುವುದು ಒಳ್ಳೆಯದಲ್ಲ. ಪಪ್ಪಾಯ ಕಾಯಿಯ ಪದಾರ್ಥಗಳನ್ನು ತಿಂದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಣ್ಣಿನಲ್ಲಿರುವ ಕಿಣ್ವ ಕಣಗಳು ಗರ್ಭಾಶಯವನ್ನು ಕುಗ್ಗಿಸುವುದಲ್ಲದೆ, ಗರ್ಭಪಾತವನ್ನು ಉಂಟು ಮಾಡಬಹುದು.

ಗರ್ಭಾವಸ್ಥೆಯ ಸಂದರ್ಭದಲ್ಲಿ ಅನಾನಸ್- ಪೈನಾಪಲ್ ಹಣ್ಣು ತಿನ್ನುವುದು ಉತ್ತಮವಲ್ಲ.

ಗರ್ಭಿಣಿ ಮಹಿಳೆಯರು ಹಸಿ ಮೊಟ್ಟೆ ಸೇವಿಸಲೇಬಾರದು. ಇದರಿಂದ ಸಹ ಗರ್ಭಪಾತ ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ ಮೆಯೊನಿಸ್​ಗಳಲ್ಲೂ ಮೊಟ್ಟೆ ಪದಾರ್ಥಗಳನ್ನು ಬಳಸುವುದರಿಂದ ಇದನ್ನು ಸೇವಿಸುವುದು ಕೂಡ ಅಪಾಯಕಾರಿ.

ಗರ್ಭಿಣಿಯರು ದ್ರಾಕ್ಷಿಯನ್ನು ಸೇವಿಸಬಾರದು. ಇದು ಗರ್ಭಾಶಯದಲ್ಲಿರುವ ಮಗುವಿಗೆ ಹಾನಿಕಾರಕವಾಗಿದೆ. ಇದರಿಂದ ಮಗುವಿನ ಬೆಳವಣಿಗೆ ಮೇಲೆ ಅಪಾಯ ಉಂಟು ಮಾಡಬಹುದು. ಹೀಗಾಗಿ ದ್ರಾಕ್ಷಿ ಹಣ್ಣಿನಿಂದ ದೂರ ಇರುವುದು ಉತ್ತಮ.

ರ್ಭಿಣಿ ಮಹಿಳೆಯರು ಯಾವುದೇ ಕಾರಣಕ್ಕೂ ಅಲೋವೆರಾವನ್ನು ಸೇವಿಸಬಾರದು. ಸೇವಿಸಿದರೆ ರಕ್ತಸ್ರಾವಕ್ಕೆ ಉಂಟಾಗಬಹುದು ಕ್ರಮೇಣ ಗರ್ಭಪಾತಕ್ಕೆ ಕಾರಣವಾಗಬಹುದು.

 

ಇದನ್ನು ಓದಿ: Rs 2,000 Notes From Circulation: 2,000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ 

Leave A Reply

Your email address will not be published.