Home Karnataka State Politics Updates Fight for DCM seat: ಕಾಂಗ್ರೆಸ್‌ನಲ್ಲಿ ಡಿಸಿಎಂ ಪಟ್ಟಕ್ಕೆ ಜೋರಾಯ್ತು ಫೈಟ್‌ : ಹಿರಿಯ ನಾಯಕರಲ್ಲಿ...

Fight for DCM seat: ಕಾಂಗ್ರೆಸ್‌ನಲ್ಲಿ ಡಿಸಿಎಂ ಪಟ್ಟಕ್ಕೆ ಜೋರಾಯ್ತು ಫೈಟ್‌ : ಹಿರಿಯ ನಾಯಕರಲ್ಲಿ ಭುಗಿಲೆದ್ದ ಅಸಮಾಧಾನ

Fight for DCM seat

Hindu neighbor gifts plot of land

Hindu neighbour gifts land to Muslim journalist

Fight for DCM seat: ನವದೆಹಲಿ : ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಸಂಧಾನ ಯಶಸ್ವಿಯಾದ ಬೆನ್ನಲ್ಲೆ ಮತ್ತೆʻ ಕೈ ʼ ಪಾಳಯದಲ್ಲಿ ಡಿಸಿಎಂ ಪಟ್ಟಕ್ಕಾಗಿ (Fight for DCM seat) ಲಾಭಿ ನಡೆಯುತ್ತಿದ್ದು, ರಹಸ್ಯ ಸ್ಥಳಗಳಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯನ್ನು ನಡೆಸುತ್ತಿದ್ದಾರೆಂದು ವರದಿಯಾಗಿದೆ.

ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕಳೆದ ನಾಲ್ಕೈದು ದಿನಗಳಿದಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ. ಸಿದ್ದರಾಮಯ್ಯಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆ ಅಧಿಕಾರ ಹಂಚಿಕೆ ಮೂಲಕ ಡಿಕೆ ಶಿವಕುಮಾರ್ ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಯಶಸ್ವಿಯಾಗಿದೆ.

ಈ ಬೆನ್ನಲ್ಲೆ ಇದೀಗ ಉಪಮುಖ್ಯಮಂತ್ರಿ ಸ್ಥಾನಕ್ಕೆ ಗದ್ದಲ ಶುರುವಾಗಿದ್ದು, ಡಿ.ಕೆ.ಶಿವಕುಮಾರ್‌ಗೆ ಮಾತ್ರ ಉಪಮುಖ್ಯಮಂತ್ರಿ ಹುದ್ದೆ ವಿಚಾರಕ್ಕೆ ಕಾಂಗ್ರೆಸ್‌ ಹಿರಿಯ ನಾಯಕರಲ್ಲಿ ಅಸಮಾಧಾನ ಭುಗಿಲೆದಿದೆ . ಈ ಕಾರಣಕ್ಕಾಗಿ ಮುನಿಯಪ್ಪ, ಎಂಬಿ ಪಾಟೀಲ್‌, ಜಮೀರ್‌ ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದಾರೆ. ಕೆಲವೆ ಕೆಲವು ಅಧಿಕಾರಿಗಳು ಅಧಿಕಾರದಲ್ಲಿರಬೇಕೆಂದು ಸರಿಯಲ್ಲ. ಎಲ್ಲ ಪ್ರಮುಖ ಸಮುದಾಯದ ಹಿರಿಯ ನಾಯಕರಿಗೂ ಡಿಸಿಎಂ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಒತ್ತಡ ಮಾಡಲಾಗುತ್ತಿದೆ. ಮತ್ತೆ ಮೂರು ಡಿಸಿಎಂ ಸ್ಥಾನ ಸೃಷ್ಟಿಗೆ ಹೈಕಮಾಂಡ್‌ ಒತ್ತಾಯ ಮಾಡಲಾಗಿದೆ. ಅದಲ್ಲೂ ಮುಖ್ಯವಾಗಿ ಮುಸ್ಲಿಂ, ದಲಿತ, ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಹುದ್ದೆನೀಡಬೇಕೆಂದು ಕಾಂಗ್ರೆಸ್‌ ಹಿರಿಯ ನಾಯಕರ ಪ್ರತ್ಯೇಕ ಸಭೆ ನಡೆಸಿದ್ದು, ಕೈ ಪಾಳಯದಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಡಿಸಿಎಂ ಹುದ್ದೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಡಾ. ಜಿ ಪರಮೇಶ್ವರ್‌ ಮಾತನಾಡಿ, ಎಲ್ಲ ಸಮುದಾಯವನ್ನು ಪರಿಗಣಿಸಿ ಡಿಸಿಎಂ ಹುದ್ದೆ ನೀಡಲಿ ನಾನು ಹುದ್ದೆಯ ಆಕಾಂಕ್ಷಿ. ಎಲ್ಲರ ನಾಯಕತ್ವದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ ಎಂದು ಡಾ. ಜಿ ಪರಮೇಶ್ವರ ಕಿಡಿ ಕಾರಿದ್ದಾರೆ.

 

ಇದನ್ನು ಓದಿ: Puttur: ಪುತ್ತೂರು : ಪೊಲೀಸ್ ದೌರ್ಜನ್ಯ ,ಪುತ್ತೂರು ಡಿವೈಎಸ್ಪಿ,ಸಂಪ್ಯ ಎಸೈ ,ಸಿಬಂದಿ ಹರ್ಷಿತ್ ವಿರುದ್ಧ ಪ್ರಕರಣ ದಾಖಲು ,ಎಸೈ ,ಸಿಬಂದಿ ಅಮಾನತು