Trevor Daniel Jacob: ಹೆಚ್ಚು ವ್ಯೂವ್ಸ್ ಗಾಗಿ ವಿಮಾನವನ್ನೇ ಪತನಗೊಳಿಸಿದ ಈ ಯೂಟ್ಯೂಬರ್; ತಗಲಾಕೊಂಡು 20 ವರ್ಷ ಜೈಲು ಶಿಕ್ಷೆಗೆ ಗುರಿಯಾದ!

Trevor Daniel Jacob the YouTuber crashed his plane for more views

Trevor Daniel Jacob: ಇಂದು ಯೂಟ್ಯೂಬ್(You tube)ಮೂಲಕ ಹಣಗಳಿಸೋರೆ ಹೆಚ್ಚೆನ್ನಬಹುದು. ಬೇರೆ ಬೇರೆ ಕಡೆಗಳಿಗೆ ಹೋಗಿ ಇಲ್ಲ ಕೂತಲ್ಲೇ ಯಾವುದೋ ಹೊಸ ವಿಚಾರಗಳನ್ನು ಹೇಳುತ್ತಾ ಅಡಿಗೆ ಮಾಡುತ್ತಾ ಜನರನ್ನು ಸೆಳೆದು ಸಂಪಾದನೆಯ ದಾರಿಯನ್ನು ಕಂಡುಕೊಂಡವರು ಅನೇಕರಿದ್ದಾರೆ. ಕೆಲವು ಯೂಟ್ಯೂಬರ್ಸ್(Youtubers) ತಮ್ಮ ವಿಡಿಯೋಗಳಿಗೆ ಅತಿ ಹೆಚ್ಚು ವೀವ್ಸ್(Views) ತರಲು ಏನೇನೋ ಕಸರತ್ತು ಮಾಡುತ್ತಾರೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಹೆಚ್ಚು ವೀವ್ಸ್ ತರಲು ಒಂದು ವಿಮಾನವನ್ನೇ ಪತನ(plane crash) ಮಾಡಿದ್ದಾನೆ.

 

ಹೌದು, ಅಮೇರಿಕಾ(America) ಮೂಲದ ಟ್ರೆವರ್‌ ಜಾಕೋಬ್‌(Trevor Jacob) ಎಂಬಾತನೇ ಈ ದುಸ್ಸಾಹಸ ಮಾಡಿದ ಪುಣ್ಯಾತ್ಮ. ತನ್ನ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್(Upload) ಮಾಡುವ ಸಲುವಾಗಿ, ವಿಮಾನದಿಂದ ತಾನು ಹಾರಿ ಅದನ್ನು ಅಪಘಾತಕ್ಕೆ ಒಳಪಡಿಸಿ ವಿಡಿಯೋ ಚಿತ್ರೀಕರಿಸಿದ್ದಾನೆ. ಸದ್ಯ ಈತನ ವಿರುದ್ಧ ಈಗ ಕೇಸು ದಾಖಲಾಗಿದ್ದು, 20 ವರ್ಷ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.

ಅಂದಹಾಗೆ ಟ್ರೆವರ್, ವಿಮಾನ ಹಾರಿಸುತ್ತಿದ್ದ ಈತ ಆಗಸದ ಮಧ್ಯದಲ್ಲಿ ಎಂಜಿನ್‌(Engi) ಹಾಳಾಗಿದೆ ಎಂದು ಅದನ್ನು ಇಳಿಸುವ ಬದಲು ಅಲ್ಲೇ ಬಿಟ್ಟು ಪ್ಯಾರಶೂಟ್‌ನಿಂದ ಚಿಗಿದಿದ್ದಾನೆ. ಬಳಿಕ ವಿಮಾನ ಪತನವಾಗಿದೆ. ಈ ಘಟನೆಯನ್ನು ಆತ ಚಿತ್ರೀಕರಿಸಿಕೊಂಡಿದ್ದು, ವಿಡಿಯೋವನ್ನು ಯೂಟ್ಯೂಬ್‌ಗೆ ಹಾಕಿ ಹೆಚ್ಚು ಹಿಟ್ಸ್‌ ಬರಲು ಹೀಗೆ ಮಾಡಿದ್ದಾನೆ.

ನವಂಬರ್ 24, 2021ರಂದು ಜಾಕೋಬ್ (Trevor Daniel Jacob) ತನ್ನ ವಿಮಾನದಲ್ಲಿ ಲೊಂಪೋಕ್ ಸಿಟಿ ವಿಮಾನ ನಿಲ್ದಾಣದಿಂದ ಮ್ಯಾಮತ್ ಲೇಕ್ಸ್‌ಗೆ ಹೊರಟಿದ್ದ. ಈ ವೇಳೆ ತಾನು ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹಾರಿದ್ದು, ವಿಮಾನ ಅಪಘಾತಕ್ಕೀಡಾಗಿದೆ ಎಂದು ಮನವಿ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದಾನೆ. ವಿಮಾನ ಹಾರಾಟ ನಡೆಸುವ ಮೊದಲು ವಿಮಾನದ ವಿವಿಧ ಭಾಗಗಳಲ್ಲಿ ವಿಡಿಯೋ ಕ್ಯಾಮರಾಗಳನ್ನು ಅಳವಡಿಸಿ ಬಳಿಕ ಪ್ಯಾರಾಚೂಟ್ ಸಹಾಯದಿಂದ ಹಾರಿ ಸೆಲ್ಫಿ ಸ್ಟಿಕ್‌ನಲ್ಲಿ ಅಳವಡಿಸಲಾಗಿದ್ದ ವಿಡಿಯೋ ಕ್ಯಾಮರಾ ಮೂಲಕ ವಿಮಾನ ಅಪಘಾತಕ್ಕೀಡಾಗುವ ವಿಡಿಯೋವನ್ನು ಮಾಡಲಾಗಿದೆ. ಆತನ ಹಾರಾಟದ ವಿಡಿಯೋ ರೆಕಾರ್ಡ್‌ಗಳು ಮತ್ತು ವಿಮಾನ ಪತನದ ಡೇಟಾವನ್ನು ಪಡೆದು ತನಿಖೆ ನಡೆಸಲಾಗಿತ್ತು.

ನವಂಬರ್ 26ರಂದು ಜಾಕೋಬ್ ವಿಮಾನ ಪತನದ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (NTSB) ಮಾಹಿತಿಯನ್ನು ನೀಡಿದ್ದಾನೆ. ವಿಮಾನ ಪತನದ ಬಗ್ಗೆ ಎನ್‌ಟಿಎಸ್‌ಬಿ ತನಿಖೆ ಆರಂಭಿಸಿದೆ. ಅಲ್ಲದೇ ಜಾಕೋಬ್‌ಗೆ ವಿಮಾನ ಪತನದ ಅವಶೇಷಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಹೇಳಿತ್ತು. ವಿಮಾನ ಪತನದ ವಿಡಿಯೋಗಳು ಹಾಗೂ ಅಪಘಾತದ ಸ್ಥಳವನ್ನು ತೋರಿಸಲು ಜಾಕೋಬ್ ಒಪ್ಪಿಕೊಂಡಿದ್ದ. ಇದಾದ ಮೂರು ದಿನಗಳ ನಂತರ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ವಿಮಾನ ಪತನದ ಬಗ್ಗೆ ತನ್ನದೇ ಆದ ತನಿಖೆಯನ್ನು ಪ್ರಾರಂಭಿಸಿತು.

ಮನವಿ ಒಪ್ಪಂದದ ಪ್ರಕಾರ, ಅವಶೇಷಗಳ ಸ್ಥಳವು ತನಗೆ ತಿಳಿದಿಲ್ಲ ಎಂದು ಜಾಕೋಬ್ ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿದ್ದಾನೆ. ಆದರೆ ವಾಸ್ತವವಾಗಿ ಜಾಕೋಬ್ ತನ್ನ ಸ್ನೇಹಿತನೊಂದಿಗೆ ಹೆಲಿಕಾಪ್ಟರ್(Helicopter)ಮೂಲಕ ವಿಮಾನ ಪತನವಾದ ಸ್ಥಳಕ್ಕೆ ಹೋಗಿ ಅಲ್ಲಿದ್ದ ಅವಶೇಷಗಳನ್ನು ಟ್ರಕ್‌ನ ಟ್ರೈಲರ್‌ಗೆ ಲೋಡ್ ಮಾಡಿ ಅಲ್ಲಿಂದ ಲ್ಯಾಂಪೋಕ್ ಸಿಟಿ ವಿಮಾನನಿಲ್ದಾಣದ ಹ್ಯಾಂಗರ್‌ನಲ್ಲಿ ಇಳಿಸಿದ್ದಾನೆ. ಬಳಿಕ ಅದರ ಅವಶೇಷಗಳನ್ನು ವಿಮಾನ ನಿಲ್ದಾಣದ ಕಸದ ತೊಟ್ಟಿ ಸೇರಿದಂತೆ ಹಲವೆಡೆ ಹಾಕಿ ನಾಶಪಡಿಸಲಾಗಿದೆ. ಇದು ಫೆಡರಲ್ ಅಧಿಕಾರಿಗಳ ತನಿಖೆಯನ್ನು ಅಡ್ಡಿಪಡಿಸುವ ಸಲುವಾಗಿ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದ.

ಅದೇ ವರ್ಷ ಡಿಸೆಂಬರ್(December)23ರಂದು ಜಾಕೋಬ್ ತನ್ನ ಯೂಟ್ಯೂಬ್‌ನಲ್ಲಿ ‘ಐ ಕ್ರ್ಯಾಶ್ಡ್ ಮೈ ಏರೋಪ್ಲೇನ್’(Crashed my airplane) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ. ಆ ವಿಡಿಯೋ ವಾಲೆಟ್ ಪ್ರಚಾರವನ್ನು ಒಳಗೊಂಡಿದ್ದು, ವಿಮಾನದಿಂದ ಪ್ಯಾರಾಚೂಟ್ ಮೂಲಕ ಹಾರುವುದು ಮತ್ತು ವಿಮಾನ ಪತನವಾಗುವ ದೃಶ್ಯವನ್ನು ಒಳಗೊಂಡಿದೆ. ವಿಡಿಯೋ ಮೂಲಕ ಹಣ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಮಾಡಿರುವುದಾಗಿ ಜಾಕೋಬ್ ಒಪ್ಪಿಕೊಂಡಿದ್ದಾನೆ.

ಇನ್ನು ಕಳೆದ ವರ್ಷ ಅವರ ಪೈಲಟ್ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಒಟ್ಟಾರೆ, ಈ ಘಟನೆ ಅಮೆರಿಕ ನಾಗರಿಕ ವಿಮಾನಯಾನ ಪ್ರಾಧಿಕಾರದ ಕೆಂಗಣ್ಣಿಗೆ ಗುರಿಯಾಗಿದ್ದು ಈಗ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಲ್ಲಿದ್ದಾನೆ.

ಅಂದಹಾಗೆ 29 ವರ್ಷದ ಟ್ರೆವರ್ ಜಾಕೋಬ್ ಡಿಸೆಂಬರ್ 2021 ರಲ್ಲಿ ವಿಮಾನ ಅಪಘಾತದ ವಿಡಿಯೋವನ್ನು ಯೂಟ್ಯೂಬ್‌ಗೆ ಪೋಸ್ಟ್ ಮಾಡಿದ್ದು, ಇದು ಅಪಘಾತ ಎಂದು ಸೂಚಿಸುತ್ತದೆ. ಇದು ಇಲ್ಲಿಯವರೆಗೆ 2.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಇದನ್ನು ಅಪಘಾತ ಎನ್ನಲಾಯಿತಾದ್ರೂ, ಉತ್ಪನ್ನ ಪ್ರಾಯೋಜಕತ್ವದ ಒಪ್ಪಂದದ ಭಾಗವಾಗಿ ವಿಡಿಯೋ ಚಿತ್ರೀಕರಿಸೋದಾಗಿಯೂ ಹೇಳಿದ್ದಾರೆ.

 

ಇದನ್ನು ಓದಿ: Randeep Singh Surjewala: ಸಿಎಂ ಹುದ್ದೆಯ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ, ಸುಳ್ಳು ಊಹಾಪೋಹಗಳಿಗೆ ಕಿವಿಗೊಡಬೇಡಿ : ಸುರ್ಜೇವಾಲ ಕಿಡಿ 

Leave A Reply

Your email address will not be published.