Home latest ಸಿದ್ದರಾಮಯ್ಯ ಸಿಎಂ ಆಗುವುದು ಕನ್ಫರ್ಮ್‌: ವಿಕ್ಟರಿ ಸಿಂಬಲ್‌ ತೋರಿಸಿ ಪುಷ್ಪ ಅಮರನಾಥ್‌ ಸ್ಪಷ್ಟನೆ

ಸಿದ್ದರಾಮಯ್ಯ ಸಿಎಂ ಆಗುವುದು ಕನ್ಫರ್ಮ್‌: ವಿಕ್ಟರಿ ಸಿಂಬಲ್‌ ತೋರಿಸಿ ಪುಷ್ಪ ಅಮರನಾಥ್‌ ಸ್ಪಷ್ಟನೆ

Pushpa Amarnath

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫೈನಲ್‌ ಆಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿಯ ರಾಹುಲ್‌ ನಿವಾಸದ ಬಳಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಮಾತನಾಡಿ, ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಸಿಎಂ ಆಗುವುದು ಕನ್ಫರ್ಮ್‌ಆಗಿದೆ. ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಹೆಸರು ಘೋಷಣೆ ಮಾಡುತ್ತಾರೆ. ರಾಹುಲ್‌ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುವುದು ಕನ್ಫರ್ಮ್‌ ಆಗಿದೆ ನಾವೆಲ್ಲರೂ ಸಿದ್ದರಾಮಯ್ಯಗೆ ಶುಭಾಶಯವನ್ನು ತಿಳಿಸಿದ್ದೇವೆ ಸಿದ್ದರಾಮಯ್ಯ ಅವರು ತುಂಬಾ ಸಂತೋಷವಾಗಿದ್ದಾರೆ. ಡಿಕೆ.ಶಿವಕುಮಾರ್‌ ನಾಯಕರನ್ನು ಭೇಟಿಯಾಗುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಬಗ್ಗೆ ಮಾಹಿತಿ ಗೊತ್ತಿಲ್ಲ ಗೊತ್ತಿಲ್ಲದೇ ನಾವು ಮಾಹಿತಿ ನೀಡಲ್ಲ ಎಂದು ತಿಳಿಸಿದ್ದಾರೆ

ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದ್ದು, ಕಾಂಗ್ರೆಸ್‌ ಭಾರೀ ಬಹು ಮತದೊಂದಿಗೆ ಗೆಲುವನ್ನು ಸಾಧಿಸಿದೆ. ಈ ಬೆನ್ನಲ್ಲೆ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ‍& ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಸ್‌ ನಡೆಯಿತು. ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫಿಕ್ಸ್‌ ಆಗಿದ್ದು ಹೈಕಮಾಂಡ್‌ ಘೋಷಣೆಯೊಂದೆ ಬಾಕಿಯಿದ್ದು ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸಿದ್ದರಾಮಯ್ಯ ನಿವಾಸಕ್ಕೆ ಅಭಿಮಾನಿಗಳ ದಂಡು ಹರಿದು ಬಂದಿದ್ದು , ಕುಮಾರಕೃಪ ನಿವಾಸದಲ್ಲಿಅಭಿಮಾನಿಗಳ ಸಂಭ್ರಮಾಚರಣೆ ಭರಾಟೆ ಹೆಚ್ಚಾಗಿದ್ದು, ಪೊಲೀಸ್ ಭದ್ರತೆ ನೀಡಲಾಗಿದೆ.