IRDAI: IRDAI ಯಿಂದ ಬಾಡಿಗೆ ತಾಯಂದಿರಿಗೆ ಸಿಹಿಸುದ್ದಿ! ಇಲ್ಲಿದೆ ಮಾಹಿತಿ

Good news for surrogate mothers from IRDAI

Share the Article

IRDAI: ಬಾಡಿಗೆ ತಾಯಂದಿರಿಗೆ ಸಿಹಿ ಸುದ್ದಿ ಒಂದು ನೀಡಲಾಗಿದೆ. ಬಾಡಿಗೆ ತಾಯ್ತನ ಪಡೆಯುವವರ ಎಲ್ಲ ವೆಚ್ಚವನ್ನು ಭರಿಸುವ ವಿಮೆಯನ್ನು ಪಡೆಯಲು ಹೊಸ ಯೋಜನೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೀಡಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮೇ 10ರಂದು ಈ ಬಗ್ಗೆ ಒಂದು ಸುತ್ತೊಲೆಯನ್ನು ಬಿಡುಗಡೆ ಮಾಡಲಾಗಿತ್ತು. ಬಾಡಿಗೆ ತಾಯಿ ಆಗುವವರು ವಿಮಾ ಕಂಪನಿ ಅಥವಾ IRDAI ನಿಂದ ಗುರುತಿಸಲ್ಪಟ್ಟ ಏಜೆಂಟ್‌ನಿಂದ 36 ತಿಂಗಳ ಅವಧಿಗೆ ಬಾಡಿಗೆ ತಾಯಿಯ ಪರವಾಗಿ ಸಾಮಾನ್ಯ ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿಸಬೇಕು ಎಂದು ಕಡ್ಡಾಯಗೊಳಿಸಿದೆ.

ಯಾರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಬೇಕು ಎಂದು ಬಯಸುತ್ತಾರೆ, ಅವರು ಬಾಡಿಗೆ ತಾಯಿಗೆ ವೈದ್ಯಕೀಯ ವೆಚ್ಚದಿಂದ ಹಿಡಿದು, ಭವಿಷ್ಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಮೆಯನ್ನು ನೀಡಬೇಕು ಎಂದು ಹೇಳಿದೆ. ಇದರಿಂದ ಬಾಡಿಗೆ ತಾಯಿ ಆಗಲು ಹೆಚ್ಚು ಜನ ಮುಂದೆ ಬರುತ್ತಾರೆ ಎಂಬ ಕಾರಣಕ್ಕೆ ಈ ಕ್ರಮವನ್ನು ತರಲಾಗಿದೆ. ಅದಕ್ಕಾಗಿ 18-20 ಲಕ್ಷ ವಿಮೆ ಯೋಜನೆಯನ್ನು ಜಾರಿ ತರಲಾಗಿದೆ.

ವಿಮಾ ಕಂಪನಿಗಳು ದಂಪತಿಗಳಿಗೆ ಪಾಲಿಸಿಯನ್ನು ಹೇಗೆ ಒದಗಿಸಬಹುದು ಎಂಬುದನ್ನು ತಿಳಿಸಿದೆ.
ಪ್ಲಮ್ ಇನ್ಶೂರೆನ್ಸ್‌ನ ಕಾರ್ಯತಂತ್ರದ ಮುಖ್ಯಸ್ಥ ಆದಿತ್ಯ ಬಗರ್ಕಾ ಹೇಳಿರುವಂತೆ “ಆಸ್ಪತ್ರೆ, ಡೇ ಕೇರ್ ಚಿಕಿತ್ಸೆಗಳು, ಹೆರಿಗೆ ಮತ್ತು ಸಹಾಯಕ ಸಂತಾನೋತ್ಪತ್ತಿ ತಂತ್ರಗಳು (ARTs) ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ಕನಿಷ್ಠ ಮಾತೃತ್ವ ಮಿತಿಯವರೆಗೆ ಕವರೇಜ್ ಅನ್ನು ವಿಸ್ತರಿಸಲು ಕಂಪನಿಗಳು ವಿಮಾದಾರರಿಗೆ ನೀಡಬೇಕು ಎಂದು ಹೇಳಿದೆ.

ಅದಲ್ಲದೆ ಬಾಡಿಗೆ ತಾಯಿಯ ಗರ್ಭಧಾರಣೆ ಸಮಯದಲ್ಲಿ ಆಗುವ ತೊಂದರೆ ಮತ್ತು ಹೆರಿಗೆ ಸಮಯದಲ್ಲಿ ಆಗುವ ತೊಡಕುಗಳಿಗೆ ಎಲ್ಲಾ ವೆಚ್ಚವನ್ನು ಈ ವಿಮೆಯಲ್ಲಿ ನೀಡಲಾಗುವುದು ಎಂದು ಹೇಳಿದೆ. ಗರ್ಭಧಾರಣೆಗೆ ಓಸೈಟ್ ದಾನಿಗಳಿಗೆ 12 ತಿಂಗಳ ವಿಮಾ ರಕ್ಷಣೆಯನ್ನು ಒದಗಿಸಬೇಕು ಎಂದು ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ.

ಐಆರ್‌ಡಿಎಐನ ಈ ಸುತ್ತೋಲೆಯು ಒಂದು ಒಳ್ಳೆಯ ಕ್ರಮವಾಗಿದೆ, ತಾಯಿ ಮತ್ತು ಬಾಡಿಗೆ ತಾಯಿಯಿಂದ ಪಡೆದ ಮಗುವಿನ ಕುಟುಂಬಕ್ಕೂ ಒಳ್ಳೆಯದು ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್‌ನ ಆರೋಗ್ಯ ಆಡಳಿತ ತಂಡದ ಮುಖ್ಯಸ್ಥ ಭಾಸ್ಕರ್ ನೆರೂರ್ಕರ್ ಹೇಳಿದ್ದಾರೆ.

 

ಇದನ್ನು ಓದಿ: Randeep Singh Surjewala: ಸಿಎಂ ಹುದ್ದೆಯ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ, ಸುಳ್ಳು ಊಹಾಪೋಹಗಳಿಗೆ ಕಿವಿಗೊಡಬೇಡಿ : ಸುರ್ಜೇವಾಲ ಕಿಡಿ 

Leave A Reply