Madhyapradesh: ಅಂಬ್ಯುಲೆನ್ಸ್ ಇಲ್ಲದೆ, ಮಗಳ ಮೃತದೇಹವನ್ನು ಬೈಕ್ ನಲ್ಲೇ ಕೊಂಡೊಯ್ದ ತಂದೆ!

Father takes daughter body on bike after hospital denies ambulance in Madhya Pradesh

Madhya pradesh: ಪ್ರತಿ ಆಸ್ಪತ್ರೆಯಲ್ಲೂ ಆಂಬುಲೆನ್ಸ್ (ambulance) ಸೇರಿದಂತೆ ರೋಗಿಯ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳೂ ಇರುತ್ತವೆ. ಆದರೆ, ಇಲ್ಲೊಂದು ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದೆ, ಮಗಳ ಮೃತದೇಹವನ್ನು ತಂದೆ ಬೈಕ್’ನಲ್ಲೇ ಕೊಂಡೊಯ್ದಿದ್ದಾರೆ. ಹೌದು, ಆಸ್ಪತ್ರೆಯವರು ಆ್ಯಂಬುಲೆನ್ಸ್ ಒದಗಿಸದ ಕಾರಣ ತಂದೆಯು ಮಗಳ ಮೃತದೇಹವನ್ನು ಬೈಕ್ ನಲ್ಲೇ ತಮ್ಮ ಗ್ರಾಮಕ್ಕೆ ಸಾಗಿಸಿದ ಮನಕಲಕುವ ಘಟನೆ ಮಧ್ಯಪ್ರದೇಶದಲ್ಲಿ (Madhya pradesh) ನಡೆದಿದೆ.

ಇಲ್ಲಿನ ನಿವಾಸಿ ಲಕ್ಷ್ಮಣ್ ಸಿಂಗ್ ಅವರು ತಮ್ಮ ಮಗಳು ಮಾಧುರಿಯನ್ನು ಅನಾರೋಗ್ಯದ ಹಿನ್ನೆಲೆ ಶಹದೋಲ್ ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ, ಯುವತಿಯು ಸೋಮವಾರ ರಾತ್ರಿ ರಕ್ತ ಹೀನತೆಯಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ವೇಳೆ ಮಗಳ ಮೃತದೇಹವನ್ನು ಗ್ರಾಮಕ್ಕೆ ಸಾಗಿಸಲು ವಾಹನ ವ್ಯವಸ್ಥೆ ನೀಡುವಂತೆ ಲಕ್ಷ್ಮಣ್ ಆಸ್ಪತ್ರೆ ಅಧಿಕಾರಿಗಳಲ್ಲಿ ಕೇಳಿದ್ದು, ಇದಕ್ಕೆ ಅವರು ನಮ್ಮಲ್ಲಿ 15 ಕಿ.ಮೀ. ವ್ಯಾಪ್ತಿಗೆ ಮಾತ್ರವೇ ಆ್ಯಂಬುಲೆನ್ಸ್ ಸೌಲಭ್ಯವಿದೆ. ಅದಕ್ಕಿಂತ ಹೆಚ್ಚಿನ ದೂರಕ್ಕೆ ಆ್ಯಂಬುಲೆನ್ಸ್ ನೀಡಲಾಗುವುದಿಲ್ಲ. ನಿಮ್ಮ ಗ್ರಾಮ 70 ಕಿ.ಮೀ. ದೂರದಲ್ಲಿದೆ. ಮೃತದೇಹ ಸಾಗಿಸಲು ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಆ್ಯಂಬುಲೆನ್ಸ್ ವ್ಯವಸ್ಥೆಗೆ ಹಣದ ಕೊರತೆ ಇದ್ದದ್ದರಿಂದ ಲಕ್ಷ್ಮಣ್ ಸುಮಾರು 70 ಕಿ.ಮೀ. ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಬೈಕ್ ನಲ್ಲಿಯೇ ಮಗಳ ಮೃತದೇಹ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ :ಸಿಇಟಿ ವಿದ್ಯಾರ್ಥಿಗಳೇ, ಅರ್ಜಿ ತಿದ್ದುಪಡಿಗೆ ಕೊನೆ ಅವಕಾಶ ; ಸಂಪೂರ್ಣ ಮಾಹಿತಿ ಇಲ್ಲಿದೆ

Leave A Reply

Your email address will not be published.