Rahul Gandhi: ಅಲ್‌ದಿ ಬೆಸ್ಟ್‌ ಸಿದ್ದರಾಮಯ್ಯ ಜಿ, ಮತ್ತೆ ಸಿಎಂ ಸ್ಥಾನ ಸೂಕ್ತವಾಗಿ ನಿಭಾಯಿಸಿ :ಶುಭಹಾರೈಸಿದ ರಾಹುಲ್‌ ಗಾಂಧಿ

All the best Siddaramaiha ji wishes from Rahul Gandhi

Rahul Gandhi wish : ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ ಭೇಟಿಯಾದ ಸಂದರ್ಭದಲ್ಲಿ ಅಲ್‌ದಿ ಬೆಸ್ಟ್‌ ಸಿದ್ದರಾಮಯ್ಯ ಜಿ (All The Best Siddaramaiah G, ಮತ್ತೆ ಸಿಎಂ ಸ್ಥಾನ ಸೂಕ್ತವಾಗಿ ನಿಭಾಯಿಸಿ ಎಂದು ರಾಹುಲ್‌ ಶುಭ ಹಾರೈಸಿದ್ದಾರೆ (Rahul Gandhi wish).

ರಾಜ್ಯ ರಾಜಕೀಯದಲ್ಲಿ ಬೆಳವಣಿಗೆ ಮುಂದುವರಿದಿದ್ದು, ಸೋನಿಯಾ ಗಾಂಧಿ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ರಾಹುಲ್ ಗಾಂಧಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಳಿಕ ಸುಮಾರು 20 ನಿಮಿಷಗಳ ಕಾಲ ಸಿದ್ದು ಚರ್ಚೆ ನಡೆಸಿ, ಅಲ್‌ದಿ ಬೆಸ್ಟ್‌ ಸಿದ್ದರಾಮಯ್ಯ ಜಿ,ಮತ್ತೆ ಸಿಎಂ ಸ್ಥಾನ ಸೂಕ್ತವಾಗಿ ನಿಭಾಯಿಸಿ ಎಂದಿದ್ದು, ನಿವಾಸದ ಗೇಟ್ ವರೆಗೆ ಬಂದು ಬೀಳ್ಕೊಟ್ಟಿದ್ದಾರೆ. ಕರ್ನಾಟಕದ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಹೆಸರು ಬಹುತೇಕ ಫಿಕ್ಸ್ ಆಗಿದ್ದು, ಕಾಂಗ್ರೆಸ್ ಹೈಕಮಾಂಡ್ ನಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಾಗಿದೆ.

ದೆಹಲಿಯ ರಾಹುಲ್‌ ನಿವಾಸದ ಬಳಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಮಾತನಾಡಿ, ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಸಿಎಂ ಆಗುವುದು ಕನ್ಫರ್ಮ್‌ಆಗಿದೆ. ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಹೆಸರು ಘೋಷಣೆ ಮಾಡುತ್ತಾರೆ. ರಾಹುಲ್‌ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುವುದು ಕನ್ಫರ್ಮ್‌ ಆಗಿದೆ ನಾವೆಲ್ಲರೂ ಸಿದ್ದರಾಮಯ್ಯಗೆ ಶುಭಾಶಯವನ್ನು ತಿಳಿಸಿದ್ದೇವೆ ಸಿದ್ದರಾಮಯ್ಯ ಅವರು ತುಂಬಾ ಸಂತೋಷವಾಗಿದ್ದಾರೆ. ಡಿಕೆ.ಶಿವಕುಮಾರ್‌ ನಾಯಕರನ್ನು ಭೇಟಿಯಾಗುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಬಗ್ಗೆ ಮಾಹಿತಿ ಗೊತ್ತಿಲ್ಲ ಗೊತ್ತಿಲ್ಲದೇ ನಾವು ಮಾಹಿತಿ ನೀಡಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ,ಈ ಗೆಲುವು ನನ್ನದಲ್ಲ,ಕಾರ್ಯಕರ್ತನ ಗೆಲುವು – ಅಶೋಕ್ ಕುಮಾರ್ ರೈ

Leave A Reply

Your email address will not be published.