Ration Card Big Update: ಪಡಿತರ ಚೀಟಿದಾರರೇ ಜೂನ್ 30ರೊಳಗೆ ಈ ಕೆಲಸ ಮಾಡಿ; ಇಲ್ಲವಾದರೆ ಉಚಿತ ರೇಷನ್ ಸಿಗಲ್ಲ, ಪಡಿತರ ಚೀಟಿ ರದ್ದಾಗುತ್ತದೆ!!

Ration Card Big Update

Ration Card Big Update : ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಇದೀಗ ಪಡಿತರ ಚೀಟಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿಯೊಂದು (Ration Card Big Update) ಹೊರಬಿದ್ದಿದೆ. ಹೌದು, ಕೇಂದ್ರ ಸರ್ಕಾರವು ಪಡಿತರ ಚೀಟಿಯೊಂದಿಗೆ (Ration Card) ಆಧಾ‌ರ್ ಕಾರ್ಡ್ ಲಿಂಕ್ ಮಾಡಲು ಸೂಚನೆ ನೀಡಿದೆ. ಜೂನ್ 30ರೊಳಗೆ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌’ಗೆ ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ರದ್ದಾಗುತ್ತದೆ ಎಂದು ಹೇಳಲಾಗಿದೆ.

ಜುಲೈ 1ರಿಂದ ಪಡಿತರಕ್ಕೆ ಸಿಗುವ ಉಚಿತ ಅಕ್ಕಿ (Free ration) ಸಿಗುವುದಿಲ್ಲ. ನಕಲು ಪಡಿತರ ಚೀಟಿಗಳು ಬರುತ್ತಿದ್ದು, ಸುಳ್ಳು ಹೇಳಿ ಜನರು ಪಡಿತರ ಚೀಟಿ ಪಡೆಯುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಆಯಾ ರಾಜ್ಯ ಸರ್ಕಾರಗಳು ಕೂಡ ಹೊಸ ಅರ್ಜಿಗಳನ್ನು ಸ್ವೀಕರಿಸಿ ನಿಯಮಾನುಸಾರ ಹೊಸ ಪಡಿತರ ಚೀಟಿಯನ್ನು ಜಾರಿಗೊಳಿಸುತ್ತಿವೆ. ಹಾಗಾಗಿ ಎಲ್ಲರೂ ಒಂದೇ ಆಧಾರ್ ಕಾರ್ಡ್‌ನೊಂದಿಗೆ (Aadhar card) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಜೊತೆಗೆ ಅರ್ಹರಿಗೆ ಮಾತ್ರ ಗ್ಯಾಸ್ (Gas Cylinder) ಅಥವಾ ಸಬ್ಸಿಡಿ (Subsidy) ದೊರೆಯುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ಸಮಯಪ್ರಜ್ಞೆ;ದಾರಿಮಧ್ಯೆ ಬಸ್ಸಿನಲ್ಲೇ ಗರ್ಭಿಣಿ ಮಹಿಳೆಗೆ ಹೆರಿಗೆ

Leave A Reply

Your email address will not be published.