KSRTC Staff: ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ಸಮಯಪ್ರಜ್ಞೆ;ದಾರಿಮಧ್ಯೆ ಬಸ್ಸಿನಲ್ಲೇ ಗರ್ಭಿಣಿ ಮಹಿಳೆಗೆ ಹೆರಿಗೆ
Punctuality of KSRTC staff Pregnant woman gives birth in bus on the way
KSRTC Staff: ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ (KSRTC Staff) ಸಮಯಪ್ರಜ್ಞೆಯಿಂದ ಪ್ರಾಣಹಾನಿಯೊಂದು ತಪ್ಪಿದ್ದು,ರಸ್ತೆ ಮಧ್ಯೆಯೇ ಪ್ರಸವ ವೇದನೆಗೊಳಗಾದ ಗರ್ಭಿಣಿ ಮಹಿಳೆಯೊಬ್ಬರಿಗೆ ಯಶಸ್ವಿ ಹೆರಿಗೆ ಮಾಡಿಸಿದ ಮಹಿಳಾ ಸಿಬ್ಬಂದಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಚಿಕ್ಕಮಗಳೂರು ಘಟಕದ ಬಸ್ಸು ಇದಾಗಿದ್ದು, ಎಂದಿನಂತೆ ಬೆಂಗಳೂರು-ಚಿಕ್ಕಮಗಳೂರು ರಸ್ತೆಯಲ್ಲಿ ಸಂಚರಿಸುತ್ತಿತ್ತು. ಬಸ್ಸು ಉದಯಪುರ ಕೃಷಿ ಕಾಲೇಜು ಬಳಿ ತಲುಪುತ್ತಿದ್ದಂತೆ ಬಸ್ಸಿನಲ್ಲಿದ್ದ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಕೂಡಲೇ ಬಸ್ಸಿನ ಸಿಬ್ಬಂದಿಗಳು ಆಸ್ಪತ್ರೆಗೆ ಸಾಗಿಸುವ ಯತ್ನ ನಡೆಸಿದ್ದು, ಆ ದಾರಿಯಲ್ಲಿ ಸುಮಾರು 10 ಕಿಲೋ ಮೀಟರ್ ದೂರಕ್ಕೆ ಯಾವುದೇ ಆಸ್ಪತ್ರೆ ಇಲ್ಲ ಎನ್ನುವುದು ಗಮನಕ್ಕೆ ಬರುತ್ತಿದ್ದಂತೆ ಬಸ್ಸು ರಸ್ತೆ ಬದಿ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ ಮಹಿಳಾ ಸಿಬ್ಬಂದಿ ತಾನೇ ಮುಂದೆ ನಿಂತು ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.ಸದ್ಯ ಈ ವಿಚಾರ ಸುದ್ದಿಯಾಗಿದ್ದು, ಆಂಬುಲೆನ್ಸ್ ನಲ್ಲಿ ಹೆರಿಗೆ ಆಗುವ ಸುದ್ದಿ ಕೇಳಿದ್ದ ಜನ ಬಸ್ಸಿನಲ್ಲಿ ಹೆರಿಗೆ ಮಾಡಿಸಿದ ಹಾಗೂ ಮಹಿಳಾ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲೊಂದು ಮಹಿಳೆಯ ಭೀಕರ ಕೊಲೆ, ಬೆಚ್ಚಿಬಿದ್ದ ಜನ, ಅತ್ಯಾಚಾರ ಮಾಡಿ ಕೊಲೆ ಶಂಕೆ!!!