Retirement Age: ಇನ್ನು ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು 5 ವರ್ಷ ಹೆಚ್ಚಳ ; ಕಾರಣವೇನು?!

government employees retirement age extended to 5 years

Retirement Age: ಕೇಂದ್ರ ಸರ್ಕಾರಿ ನೌಕರರು (Government employee) ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಸರ್ಕಾರಕ್ಕೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಇದೀಗ ಈ ಬೇಡಿಕೆ ಪರಿಪೂರ್ಣವಾಗಿದೆ. ಹೌದು, ಹಲವು ರಾಜ್ಯ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು (Retirement Age) ಹೆಚ್ಚಿಸಿವೆ.

ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಕೂಡ ಒಂದು. ಪಶ್ಚಿಮ ಬಂಗಾಳದಲ್ಲಿ ವೈದ್ಯರ ನಿವೃತ್ತಿ ವಯಸ್ಸನ್ನು ಸರ್ಕಾರವು 5 ವರ್ಷ ಹೆಚ್ಚಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಉಂಟಾಗಿರುವ ವೈದ್ಯರ ಕೊರತೆಯನ್ನು ನೀಗಿಸಲು ಪಶ್ಚಿಮ ಬಂಗಾಳ ಸರ್ಕಾರ ವೈದ್ಯರ ನಿವೃತ್ತಿ ವಯಸ್ಸನ್ನು 5 ವರ್ಷ ಹೆಚ್ಚಿಸಲು ನಿರ್ಧರಿಸಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವೈದ್ಯರ ನಿವೃತ್ತಿ ವಯಸ್ಸನ್ನು 5 ವರ್ಷಗಳವರೆಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದೆ.

ಇದೀಗ ವೈದ್ಯರ (doctor) ನಿವೃತ್ತಿ ವಯಸ್ಸು 62 ವರ್ಷವಾಗಿದೆ. ಅದನ್ನು 5 ವರ್ಷ ಏರಿಸುವ ಮೂಲಕ ನಿವೃತ್ತಿ ವಯಸ್ಸನ್ನು 67 ವರ್ಷಕ್ಕೆ ಏರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲಾಖೆಯ ಅಧಿಕಾರಿಗಳ ಪ್ರಕಾರ, ನಿವೃತ್ತಿ ನಂತರ 70 ವರ್ಷಗಳವರೆಗೆ ವೈದ್ಯರ ಸೇವಾವಧಿಯನ್ನು ಸಹ ನವೀಕರಿಸಬಹುದು ಎನ್ನಲಾಗಿದೆ.

ರಾಜ್ಯ ಸರ್ಕಾರದ ಈ ಕ್ರಮಕ್ಕೆ ಕೆಲ ವೈದ್ಯರು ಒಪ್ಪಿಗೆ ನೀಡಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದಕ್ಕಿಂತ ನೇಮಕಾತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ.

ಇದನ್ನೂ ಓದಿ:Serial Actress: ಈ ಕಿರುತೆರೆ ಜನಪ್ರಿಯ ನಟಿ ಯಾರು ಗೊತ್ತಾ? ಸಾಧ್ಯವಾದ್ರೆ ಕಂಡುಹಿಡಿಯಿರಿ!!

Leave A Reply

Your email address will not be published.