Belagavi: ಕಾಂಗ್ರೆಸ್ ಗೆಲುವನ್ನು ಸಂಭ್ರಮಿಸಿ ‘ಪಾಕಿಸ್ತಾನ ಜಿಂದಾಬಾದ್’ ಎಂದ ಕಿಡಿಗೇಡಿಗಳು! ನಾಡಿನಾದ್ಯಂತ ವ್ಯಾಪಕ ಆಕ್ರೋಶ!

Congress victory shout Pakistan Zindabad in Belagavi Karnataka election result

Belagavi VIdeo viral: ರಾಜ್ಯ ವಿಧಾನಸಭಾ ಚುನಾವಣೆಯ (Election) ಫಲಿತಾಂಶ (Result) ಪ್ರಕಟವಾದ ಬೆನ್ನಲ್ಲೇ ಬೆಳಗಾವಿಯಲ್ಲಿ (Belagavi) ಕಿಡಿಗೇಡಿಗಳು ಪಾಕ್ ಪರ ಘೋಷಣೆ ಕೂಗಿ, ಪಾಕಿಸ್ತಾನ್ ಜಿಂದಾಬಾದ್ ಎಂದು ಜೈಕಾರ ಹಾಕಿದ ಘಟನೆ ಬೆಳಕಿಗೆ (Belagavi VIdeo viral) ಬಂದಿದ್ದು, ಎಲ್ಲೆಡೆ ಭಾರೀ ಆಕ್ರೋಶ ವ್ಯಕತ್ತವಾಗುತ್ತಿದೆ.

 

ಹೌದು, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಸೀಫ್ ಸೇಠ್(Asif Seat) ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡ ಕೆಲ ಕಿಡಿಗೇಡಿಗಳು ಬೆಳಗಾವಿಯ ಆರ್‌ಪಿಡಿ ವೃತ್ತದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ.

ಅಂದಹಾಗೆ ಶನಿವಾರ ಮಧ್ಯಾಹ್ನ ಅಸೀಫ್ ಗೆಲುವು ಖಾತ್ರಿ ಆಗುತ್ತಿದ್ದಂತೆಯೇ ಅಪಾರ ಸಂಖ್ಯೆಯ ಯುವಕರು ಮತ ಎಣಿಕೆ ಕೇಂದ್ರದ ಸುತ್ತ ಸೇರಿದ್ದರು. ಬಳಿಕ ಬಣ್ಣಗಳನ್ನು ಎರಚಿ, ಸಂಗೀತ ಹಾಕಿಕೊಂಡು ಗೆಲುವಿನ ಕೇಕೆ ಹಾಕಿದ್ದಾರೆ. ಈ ವೇಳೆ ಈ ವೇಳೆ ಕಾಂಗ್ರೆಸ್‌ ಧ್ವಜ ಹಿಡಿದು ಬಂದ ಕೆಲವರು ‘ಜಿಂದಾಬಾದ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್'(Pakisthan Jindabad) ಎಂದು ಮೂರು ಬಾರಿ ಘೋಷಣೆ ಮೊಳಗಿಸಿದ್ದಾರೆ.

ಅಲ್ಲದೆ ಈ ವೇಳೆ ಹತ್ತಿರದಲ್ಲೇ ಇದ್ದ ಕೆಲವು ಪೊಲೀಸರು ಯುವಕರ ಬಳಿ ಹೋಗಿ ಎಚ್ಚರಿಕೆ ನೀಡಿದ್ದಾರೆ. `ಈ ರೀತಿ ಬೇರೆ ಮಾತು ತೆಗೆದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ’ ಎಂದೂ ಖಡಕ್ ಸೂಚನೆ ನೀಡಿದ ಘಟನೆ ನಡೆದಿದೆ. ಆದರೆ, ಘೋಷಣೆ ಕೂಗಿದ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

https://twitter.com/ShakunthalaHS/status/1657378298589233157?t=BO80Vh2XBZOgzwVregHU6Q&s=08

 

ಇದನ್ನೂ ಓದಿ:Bhatkala: ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿ ಕಾಂಗ್ರೆಸ್ ಗೆಲುವು ಸಂಭ್ರಮಿಸಿದ ಯುವಕರು! ನಾಡಿನಾದ್ಯಂತ ವ್ಯಾಪಕ ಖಂಡನೆ!

 

Leave A Reply

Your email address will not be published.