ಮಂಗಳೂರು: ಮತಪೆಟ್ಟಿಗೆ ಇರುವ ಕೊಠಡಿಯ ಬೀಗ ಮರೆತ ಅಧಿಕಾರಿಗಳು : ಬೀಗ ಒಡೆದು ಒಳಪ್ರವೇಶ

Share the Article

ಮಂಗಳೂರು : ಮತಪೆಟ್ಟಿಗೆ ಇರುವ ಕೊಠಡಿಯ ಬೀಗ ಮರೆತ ಅಧಿಕಾರಿಗಳು : ಬೀಗ ಒಡೆದು ಒಳಪ್ರವೇಶ

ಮಂಗಳೂರು :ಮತಗಟ್ಟೆ ಕೊಠಡಿಯ ಬೀಗ ಮರೆತು ಬಂದದ್ದರಿಂದ ಮತಗಟ್ಟೆ ಕೊಠಡಿಯ ಬೀಗವನ್ನು ಒಡೆದು ಒಳಪ್ರವೇಶಿಸಿದ ವಿಲಕ್ಷಣ ಘಟನೆಗೆ ಮಂಗಳೂರು ಸಾಕ್ಷಿಯಾಯಿತು ಎಂದು ತಿಳಿದುಬಂದಿದೆ.

ಅಂಚೆ ಮತ ಎಣಿಕೆಯಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸುರತ್ಕಲ್ ಎನ್.ಐ.ಟಿ.ಕೆ. ಆವರಣದಲ್ಲಿ ನಡೆಯುತ್ತಿರುವ ಮತ ಎಣಿಕೆಗಾಗಿ ಎಲ್ಲರೂ ಬಂದು ಸೇರಿದ್ದರು. ಅಷ್ಟರಲ್ಲಿ ಅಧಿಕಾರಿಯೋರ್ವರು ಕೀ ಮರೆತು ಬಂದಿರುವುದು ಬೆಳಕಿಗೆ ಬಂದಿತು. ಪುನಃ ಹಿಂದಿರುಗಿ ಕೀ ತರುವಷ್ಟು ಸಮಯ ಇಲ್ಲದೇ ಇರುವುದರಿಂದ ಬಾಗಿಲಿನ ಕೀಯನ್ನು ಮುರಿದು ಒಳಪ್ರವೇಶಿಸಲಾಯಿತು. ಬಳಿಕ ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು ಎಂದು ಹೇಳಲಾಗಿದೆ.

Leave A Reply