Uddhav Thackeray: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೆ ಹಿನ್ನಡೆ, ಮಹಾ ವಿಕಾಸ್‌ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಲಾಗದು ಎಂದ ಸುಪ್ರೀಂ !

MVA govt can't be restored in Maharashtra since Uddhav Thackeray resigned

Uddhav Thackeray : ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಬೇಕು ಎನ್ನುವ ಉದ್ಧವ್ ಠಾಕ್ರೆ ಬಣಕ್ಕೆ ಮತ್ತೆ ಹಿನ್ನಡೆಯಾಗಿದೆ. ಮಹಾ ವಿಕಾಸ್‌ ಅಘಾಡಿ ಸರ್ಕಾರವನ್ನು ಮರು ಸ್ಥಾಪನೆ ಮಾಡಲು ಸಾಧ್ಯವಿ‌ಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ.

ಕಳೆದ ವರ್ಷ ಶಿವಸೇನೆಯ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಬಹುಸಂಖ್ಯಾತ ಶಾಸಕರೆಲ್ಲ ಬಂಡಾಯ ಎದ್ದು, ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದರು. ಅಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ಅಸ್ವಸ್ಥಕ್ಕೆ ಬಂದಿತ್ತು. ಅಷ್ಟೇ ಅಲ್ಲದೆ ತಮ್ಮದೇ ನಿಜವಾದ ಶಿವ ಸೇನೆ ಎಂದು ಏಕನಾಥ ಶಿಂಧೆ ಬಾಣ ಹೇಳಿಕೊಂಡಿತ್ತು. ಈ ಪ್ರಕರಣ ಸಂಬಂಧ ಏಕನಾಥ ಶಿಂಧೆ ಹಾಗೂ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು, ಮಹಾವಿಕಾಸ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಬೇಕು ಎಂದು ಕೋರಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಇದರ ಬಗ್ಗೆ ಇಂದು ಗುರುವಾರ ಪ್ರಕರಣ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್‌, ಉದ್ಧವ್‌ ಠಾಕ್ರೆ (Uddhav Thackeray) ವಿಶ್ವಾಸಮತ ಸಾಬೀತು ಪಡಿಸದೆ ರಾಜೀನಾಮೆ ನೀಡಿದ್ದರಿಂದ ಸರ್ಕಾರವನ್ನು ಮರುಸ್ಥಾಪಿಸಲಾಗದು ಎಂದು ಹೇಳಿದೆ.

ಅಲ್ಲದೇ ಉದ್ಧವ್‌ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ನಿರ್ಧಾರಕ್ಕೆ ಬಂದಿದ್ದು ಹಾಗೂ ಬಹುಮತ ಸಾಬೀತಿಗೆ ಸೂಚಿಸಿದ ನಿರ್ಧಾರ ಕೂಡಾ ತಪ್ಪು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಶಿವಸೇನಾ ಪಕ್ಷದ ಮುಖ್ಯ ಸಚೇತಕರಾಗಿ ಗೋಗಾವಾಲೆ (ಶಿಂಧೆ ಗುಂಪು) ಅವರನ್ನು ನೇಮಿಸುವ ಸ್ಪೀಕರ್ ನಿರ್ಧಾರ ಕಾನೂನುಬಾಹಿರ ಎಂದು ಹೇಳಿದೆ.

ಏಕನಾಥ್ ಶಿಂಧೆ ಬಣದ ಬಂಡಾಯದ ನಂತರ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಮನವಿಗಳ ಸಂಬಂಧ ನಡೆದ ತೀರ್ಪಿನಲ್ಲಿ ಸುಪ್ರೀಂ ಕೋರ್ಟು ಸರ್ವಾನುಮತದ ನಿರ್ಣಯ ನೀಡಿದೆ. ಸುಪ್ರೀಂ ಬ್ಯಾಚ್‌ನ ಸರ್ವಾನುಮತದ ತೀರ್ಪಿನಲ್ಲಿ, ಮುಖ್ಯ ನ್ಯಾಯಮೂರ್ತಿ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಶಿವಸೇನೆಯ ವಿಪ್ ಆಗಿ ಶಿಂಧೆ ಬಣದ ಭರತ್ ಗೊಗವಾಲೆ ಅವರನ್ನು ನೇಮಿಸುವ ಸದನ ಸ್ಪೀಕರ್ ನಿರ್ಧಾರವು “ಕಾನೂನುಬಾಹಿರ” ಎಂದು ಭಾರತದ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಇದನ್ನೂ ಓದಿ:‘ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ’ ಅಂತ ಸ್ಟೇಟಸ್ ಹಾಕಿದ ಯುವಕ !

Leave A Reply

Your email address will not be published.