Heart Attack: ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದ ವ್ಯಕ್ತಿ ಹಠಾತ್ ಹೃದಯಾಘಾತ! ವೀಡಿಯೋ ವೈರಲ್

Man dies of heart attack while dancing at wedding in Chhattisgarh video viral

Heart Attack: ಜನನ – ಮರಣ ಯಾವ ಸಂದರ್ಭದಲ್ಲಿ ನಡೆಯಬಹುದು ಎನ್ನಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಜೀವನದಲ್ಲಿ ಮರಣ ಎಂಬ ಹಂತ ತಲುಪಿದ ಮೇಲೆ ಎಲ್ಲವೂ ಶೂನ್ಯ. ಹಾಗೆಯೇ ಇಲ್ಲೊಂದು ಕಡೆ ಮದುವೆ ಮನೆಯಲ್ಲಿ ಮರಣ ಸೂತಕ ಆವರಿಸಿದೆ.

 

ಹೌದು, ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರ್‌ಗಢದಲ್ಲಿ ಮದುವೆಯೊಂದರಲ್ಲಿ ಈ ಘಟನೆ ನಡೆದಿದ್ದು, ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ ದಿಲೀಪ್ ರೌಜ್ಕರ್ ಛತ್ತೀಸ್‌ಗಢದ ಬಲೋದ್ ಜಿಲ್ಲೆಯ ನಿವಾಸಿಯು, ಮದುವೆಯ ಖುಷಿಯಲ್ಲಿ ನೃತ್ಯ ಮಾಡುತ್ತಲೇ ಪ್ರಾಣಬಿಟ್ಟಿದ್ದಾರೆ. ಮೇ 4 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಸೊಸೆಯ ಮದುವೆಯಲ್ಲಿ ನೃತ್ಯ ಮಾಡುವಾಗ ಹೃದಯಾಘಾತಕ್ಕೆ (Heart Attack) ಒಳಗಾಗಿ ಕೊನೆ ಉಸಿರು ಎಳೆದಿದ್ದಾರೆ.

ಮದುವೆ ಮನೆಯಲ್ಲಿ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಆನಂದ್ ಪನ್ನ ಎಂಬ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ನೋಡಬಹುದಾಗಿದೆ.

ವಿಡಿಯೋದಲ್ಲಿ, ವ್ಯಕ್ತಿ ಮೊದಲು ವೇದಿಕೆಯೊಂದರಲ್ಲಿ ಇತರ ಕೆಲವರೊಂದಿಗೆ ಉತ್ಸಾಹಭರಿತವಾಗಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು, ತಕ್ಷಣ ಇದ್ದಕ್ಕಿದ್ದಂತೆ ನೃತ್ಯ ಮಾಡುವುದನ್ನು ನಿಲ್ಲಿಸಿ ವೇದಿಕೆಯ ಮೇಲೆ ಕುಳಿತರು.

ಆದರೆ ಕೆಲ ಕ್ಷಣಗಳ ನಂತರ ಕುಸಿದು ಬಿದ್ದಿದ್ದಾರೆ. ಕೂಡಲೇ ದಿಲೀಪ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅದಾಗಲೇ ದಿಲೀಪ್ ಅವರು ಮೃತ ಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ODI World Cup 2023: ಭಾರತ-ಪಾಕಿಸ್ತಾನ ಮ್ಯಾಚ್‌ ಬಿಗ್‌ ಅಪ್ಡೇಟ್‌ ರಿವೀಲ್‌! ಇಲ್ಲಿದೆ ಎಲ್ಲಾ ವಿವರ

Leave A Reply

Your email address will not be published.