Difference in KGF Babu serial no: ಚುನಾವಣಾ ಆಯೋಗದಿಂದ ಮಹಾ ಎಡವಟ್ಟು! KGF ಬಾಬು ಕ್ರಮಸಂಖ್ಯೆಯಲ್ಲಿ ವ್ಯತ್ಯಾಸ ಮಾಡಿದ ಚುನಾವಣಾಧಿಕಾರಿಗಳು!

Election Officers made difference KGF Babu in serial number

KGF Babu serial number: ಪಕ್ಷೇತರ ಅಭ್ಯರ್ಥಿ(Independent Candidate) ಕೆಜಿಎಫ್‌ ಬಾಬು(KGF Babu serial number) ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಿ, ರಾಜ್ಯ ಚುನಾವಣಾ ಆಯೋಗ(Election Commition) ಮಹಾ ಎಡವಟ್ಟು ಮಾಡಿಕೊಂಡಿದೆ.

 

ಹೌದು, ಬೆಂಗಳೂರಿನ(Bangalore) ಚಿಕ್ಕಪೇಟೆ(Chikkapete) ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರೋ ಕೆಜಿಎಫ್ ಬಾಬು ಅವರ ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಿ, ಮತಗಟ್ಟೆಯ ಬಳಿ ಚುನಾವಣಾ ಅಧಿಕಾರಿಗಳು ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

ಚುನಾವಣಾ ಅಧಿಕಾರಿಗಳು(election Officer’s) ಮತಗಟ್ಟೆಯ ಹೊರಭಾಗದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ, ಹೆಸರು, ಚಿಹ್ನೆಯನ್ನು ಗೋಡೆಯ ಮೇಲೆ ಅಂಟಿಸಿರುತ್ತಾರೆ. ಆದರೆ, ಬ್ಯಾಲೆಟ್‌ ಪೇಪರ್‌(Balet Paper) ನಲ್ಲಿ ಇರುವ ಕ್ರಮಸಂಖ್ಯೆಗೂ(Serial Number)ಹಾಗೂ ಗೋಡೆಯ ಮೇಲೆ ಅಂಟಿಸಲಾದ ಕ್ರಮಸಖ್ಯೆಯಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿದೆ. ಇದರಿಂದಾಗಿ ಕೆಜಿಎಫ್ ಬಾಬು ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗವು ಸ್ಪಷ್ಟನೆ ಕೊಡಲಾಗದೇ ತಪ್ಪು ಒಪ್ಪಿಕೊಂಡಿದೆ.

ಅಂದಹಾಗೆ ಕಾಂಗ್ರೆಸ್‌(Congress) ನಿಂದ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿರುವ, ಸಾವಿರಾರು ಕೋಟಿ ಒಡೆಯ, ಕೆಜಿಎಫ್ ಬಾಬು ಕಾಂಗ್ರೆಸ್‌, ಬಿಜೆಪಿ(BJP) ಹಾಗೂ ಜೆಡಿಎಸ್‌(JDS) ಅಭ್ಯರ್ಥಿಗಳಿಗೆ ಟಾಂಗ್‌ ಕೊಡಲು ಸಿದ್ಧವಾಗಿದ್ದರು. ಆದರೆ ಈಗ ಈ ಕೆಜಿಎಫ್ ಬಾಬು ವಿಚಾರದಲ್ಲೇ ಚುನಾವಣಾ ಆಯೋಗ ಎಡವಟ್ಟು ಮಾಡಿರೋದು ವಿಚಿತ್ರ ಎನಿಸಿದೆ.

 

ಇದನ್ನು ಓದಿ: Election: ಮತದಾನದ ವೇಳೆ ಕುಸಿದು ಬಿದ್ದು ವೃದ್ಧೆ ಮೃತ್ಯು! 

Leave A Reply

Your email address will not be published.