Spear entered the throat: ವ್ಯಕ್ತಿಯೋರ್ವನ ಕುತ್ತಿಗೆಗೆ ನುಗ್ಗಿದ 4 ಅಡಿ ಈಟಿ ! ಸತತ 5 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಉಳಿಯಿತು ಜೀವ

4 feet spear entered in the throat of the person

Spear entered the throat: ಕೋಲ್ಕತ್ತಾ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಯುವಕನೋರ್ವನ ಕುತ್ತಿಗೆಗೆ ನಾಲ್ಕು ಅಡಿ ಉದ್ದದ ಈಟಿ ನುಗ್ಗಿದ್ದು, ತೀವ್ರವಾದ ರಕ್ತಸ್ತಾವವಾಗುತ್ತಿತ್ತು. ಈತನನ್ನು ನೋಡಿದರೆ ಈತ ಬದುಕುಳಿಯಲ್ವೇನೋ ಎನ್ನೋ ರೀತಿ ಇತ್ತು. ಆದರೆ ಆಯಸ್ಸು ಗಟ್ಟಿ ಇದ್ದರೆ ಏನೇ ಆದರೂ ಆಗುವುದಿಲ್ಲ ಎಂಬ ಮಾತೆಂಬಂತೆ ಗಾಯಗೊಂಡ ಯುವಕನನ್ನು ಕುಟುಂಬದವರು ಬಂಕುರಾ ಸಮ್ಮಿಲಾನಿ ಮೆಡಿಕಲ್‌ ಕಾಲೇಜಿಗೆ ದಾಖಲಿಸಿದ್ದಾರೆ. ನಂತರ ಗಂಟೆಗಟ್ಟಲೆ ಶ್ರಮಪಟ್ಟ ವೈದ್ಯರು ಯುವಕನ ಕೊರಳಿಗೆ ಸಿಲುಕಿದ್ದ ಈಟಿಯನ್ನು ಹೊರತೆಗೆದಿದ್ದಾರೆ.

 

ಮಾಹಿತಿ ಪ್ರಕಾರ, ಭಾನುವಾರ ಹೇಮಂತ್ ಬೆಸ್ರಾ ಎಂಬ ಯುವಕನ ಗಂಟಲಲ್ಲಿ ಈಟಿ ಸಿಕ್ಕಿಕೊಂಡಿತ್ತು(Spear entered the throat) . ಐದು ಗಂಟೆಗಳ ನಿರಂತರ ಅಪರೇಷನ್‌ನಿಂದ ಯುವಕನ ಗಂಟಲಿನಿಂದ ಈಟಿಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಭಾನುವಾರ ಬಂಕುರಾದ ಸಾರಂಗ ಸಮೀಪದ ಸರುಲಿಯಾ ಅರಣ್ಯದಲ್ಲಿ ಪುರುಲಿಯಾ ನಿವಾಸಿ 23 ವರ್ಷದ ಯುವಕ ಹೇಮಂತ್ ಬೆಸ್ರಾ ಅವರ ಕುತ್ತಿಗೆಯಲ್ಲಿ ಈಟಿ ಸಿಲುಕಿಕೊಂಡಿತ್ತು. ಗಂಟಲಿನಲ್ಲಿ ಈಟಿ ಬಿದ್ದಿದ್ದು, ಯುವಕನನ್ನು ಮೊದಲು ಸಾರೆಂಗಾ ಬ್ಲಾಕ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.

ರೋಗಿಯನ್ನು ಬಂಕುರಾ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ ನಂತರ, ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯು ಕೂಡಲೇ ವೈದ್ಯರ ತಂಡವನ್ನು ರಚನೆ ಮಾಡಿತು. ಆ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ, ಈಟಿ ಪಡೆದ ಯುವಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ವೈದ್ಯರ ಪರಿಶ್ರಮವು ಗಾಯಗೊಂಡ ಯುವಕನ ಜೀವ ಉಳಿಸಿದೆ ಎಂದೇ ಹೇಳಬಹುದು. ವೈದ್ಯರು ಹೇಳಿರುವ ಪ್ರಕಾರ, ಮೊದಲು ಈಟಿಯ ಬ್ಲೇಡ್ ಅನ್ನು ವೆಲ್ಡಿಂಗ್ ಯಂತ್ರದಿಂದ ದೇಹದ ಹೊರಗೆ ಕತ್ತರಿಸಿ, ನಂತರ ವೈದ್ಯರು ಕುತ್ತಿಗೆಯಲ್ಲಿ ರಂಧ್ರ ಮಾಡಿ ಉಳಿದ ಈಟಿಯ ಬ್ಲೇಡ್ ಅನ್ನು ಹೊರತೆಗೆದಿದ್ದಾರೆ. ಹಾಗೆನೇ ವೈದ್ಯರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂಬ ಮಾತನ್ನು ಕೂಡಾ ಹೇಳಿದ್ದಾಗಿ ವರದಿಯಾಗಿದೆ. ಕ್ಲಿಷ್ಟಕರವಾದ ಈ ಶಸ್ತ್ರಚಿಕಿತ್ಸೆಯ ಯಶಸ್ಸಿನಿಂದ ವೈದ್ಯರು, ಶುಶ್ರೂಷಾ ಸಿಬ್ಬಂದಿಯಿಂದ ಹಿಡಿದು ರೋಗಿಯ ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ: Lal Salaam movie poster got trolled: ಯರ್ರಾಬಿರ್ರೀ ಟ್ರೋಲ್ ಆಯ್ತು ರಜನಿಕಾಂತ್ ‘ಲಾಲ್ ಸಲಾಂ’ ಪೋಸ್ಟರ್! ರಜನಿ ಮಗಳ ನಿರ್ದೇಶನಕ್ಕೆ ಗರಂ ಆದ ಫ್ಯಾನ್ಸ್ 

Leave A Reply

Your email address will not be published.