Free Ration: ಪಡಿತರ ಚೀಟಿದಾರರಿಗೆ ಗುಡ್ ​ ನ್ಯೂಸ್! ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್!

Good news for ration card holders

Free Ration: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಮೇ ತಿಂಗಳಲ್ಲಿ ಪಡಿತರರಿಗೆ ಎರಡು ಬಾರಿ ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಬಡ ಕುಟುಂಬಗಳಿಗೆ ಸಾಕಷ್ಟು ಸಹಾಯವಾಗಲಿದೆ.

ಹರಿಯಾಣ ಸರ್ಕಾರ ಇದುವರೆಗೆ ಏಪ್ರಿಲ್ ತಿಂಗಳ ಪಡಿತರವನ್ನು ಬಡ ಕುಟುಂಬಗಳಿಗೆ ನೀಡಿಲ್ಲ, ಇದರಿಂದ ಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ಎರಡು ತಿಂಗಳ ಪಡಿತರವನ್ನು (Free Ration) ಮೇ ತಿಂಗಳಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ.

ರಾಜ್ಯ ಸರ್ಕಾರ ಹೊರಡಿಸಿದ ಸೂಚನೆಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಪಡಿತರ ಪ್ರಯೋಜನವನ್ನು ಪಡೆಯದ ಎಲ್ಲಾ ಫಲಾನುಭವಿಗಳಿಗೆ ಡಬಲ್ ಪಡಿತರ ಸಿಗುತ್ತದೆ ಎನ್ನಲಾಗಿದೆ.

ಇದೇ ವೇಳೆಗೆ ಏಪ್ರಿಲ್ ತಿಂಗಳ ಪಡಿತರ ದಾಸ್ತಾನು ಕೂಡ ಪಡಿತರ ಡಿಪೋಗೆ ಬಂದಿದೆ. ಬಿಪಿಎಲ್ ಮತ್ತು ಎಎವೈ ಕಾರ್ಡ್ ಹೊಂದಿರುವವರಿಗೆ ಮಾತ್ರ ಇದರ ಲಾಭ ಸಿಗಲಿದೆ.

ಹರಿಯಾಣದ ಪಡಿತರ ಚೀಟಿದಾರರು ಏಪ್ರಿಲ್ ತಿಂಗಳ ಪಡಿತರವನ್ನು ಮೇ 8 ರವರೆಗೆ ಪಡೆಯಬಹುದು. ಆಹಾರ ಮತ್ತು ಸರಬರಾಜು ಇಲಾಖೆಯಿಂದ ಆದೇಶ ಹೊರಡಿಸಿದ ನಂತರ ಡಿಪೋದಾರರು ಮತ್ತು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಪಡಿತರ ವಿತರಣೆ ವಿಳಂಬಕ್ಕೆ ಪಡಿತರ ಡಿಪೋದಾರರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಪಡಿತರ ವಿತರಣೆಯ ಅವಧಿಯನ್ನು ಇಲಾಖೆ ವಿಸ್ತರಿಸಿದೆ.

ಇದನ್ನೂ ಓದಿ: Go First Flight ಮೇ 12 ರವರೆಗೆ ರದ್ದು! ಮರುಪಾವತಿ ಶೀಘ್ರ!!!

Leave A Reply

Your email address will not be published.