Karnataka Election: ಮೇ.10ರಂದು ಮತದಾನ ಮಾಡದವರಿಗೆ ಪ್ರವಾಸಿ ತಾಣಕ್ಕೆ ಪ್ರವೇಶ ಇಲ್ಲ
New Rules for those who did not vote in Karnataka Election
Karnataka Election: ಮೇ.10ರಂದು ರಾಜ್ಯ ವಿಧಾನಸಭಾ ಚುನಾವಣೆ ( Karnataka Assembly Election 2023 ) ಹಿನ್ನೆಲೆ, ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ, ಸಂಘ-ಸಂಸ್ಥೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ, ಸರ್ಕಾರ ಎಲ್ಲಾ ನೌಕರರಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ.
ಮುಖ್ಯವಾಗಿ ಮತದಾನದ ಮಹತ್ವವವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಮತದಾನ ಪೋಲಾಗದಂತೆ, ಮತದಾನ ಮಾಡದವರಿಗೆ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧವನ್ನು ಜಿಲ್ಲಾಡಳಿತ ಆದೇಶಿಸಿದೆ. ಈ ಕುರಿತಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ.
ಸದ್ಯ, ಮೇ.10ರಂದು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಾದಂತ ಕೆ ಆರ್ ಎಸ್, ಬೃಂದಾವನ ಗಾರ್ಡನ್, ಮುತ್ತತ್ತಿ, ಶಿವನಸಮುದ್ರ, ರಂಗನತಿಟ್ಟು, ಬಲಮುರಿ, ದರಿಯಾ ದೌಲತ್ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡದೇ ಬರುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಮೇ.10ರ ಮತದಾನ ದಿನದಂದು ಮತದಾನ ಮಾಡಿರುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪ್ರವೇಶಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ.
ಮುಖ್ಯವಾಗಿ ಆದೇಶ ದಿನಾಂಕ 10-05-2023ರ ಮತದಾನ ದಿನದಂದು ಮತದಾನ ಮಾಡದೇ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅನ್ವಯಿಸುತ್ತದೆ.
ಹಾಗೆಯೇ ಇನ್ನು ಉಳಿದ ಜಿಲ್ಲೆಗಳಲ್ಲಿ ಕೂಡ, ಮತದಾನ ಮಾಡದೇ ಇದ್ದಲ್ಲಿ ಪ್ರವೇಶ ನಿರ್ಬಂಧ ಆದೇಶವನ್ನು ಜಿಲ್ಲಾಡಳಿತಗಳು ಹೊರಡಿಸಲಿವೆ ಎಂಬ ಮಾಹಿತಿ ಇದೆ.