of your HTML document.

Dolo 650 Shashirekha: ಡೋಲೋ 650 ಮಾತ್ರೆ, ಬಿಸಿ ರಾಗಿ ಹಿಟ್ಟಿನಿಂದ ಫೇಮಸ್‌ ಆದ ಶಶಿರೇಖಾ ಗೊತ್ತಿದ್ಯಾ? ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಮಿಂಚಿಂಗ್!

Dolo 650 Shashirekha instagram new photos

Dolo 650 Shashirekha: ಕೋವಿಡ್ (Covid) ಸಮಯದಲ್ಲಿ ಎಲ್ಲರೂ ಭೀತಿಯಿಂದ ಮನೆಗಳಲ್ಲಿ ಕುಳಿತಿರಬೇಕಾದರೆ ವೈರಲ್ ಆದಂತಹ ಮಹಿಳೆ ಶಶಿರೇಖಾ. ‘ಡೋಲೊ 650 ಮಾತ್ರೆ, ಬಿಸಿ ರಾಗಿ ಹಿಟ್ಟು..ಕೊರೊನಾದೋರಿಗೆ ಅದೇಯಾ!!.’ ಎಂದು ಹೇಳಿದ್ದ ಮೈಸೂರಿನ ಶಶಿರೇಖಾ ರಾತ್ರೋರಾತ್ರಿ ಸ್ಟಾರ್ ಆದ್ರೂ ಎಂದರೆ ತಪ್ಪಾಗಲಾರದು. ಯಾಕಂದ್ರೆ ಎಲ್ಲಾರ ಬಾಯಲ್ಲೂ ಅದೇ ಗುಣಗಾನ. ಆಕೆಯ ಡೈಲಾಗ್ ನ ರೀಲ್ಸೋ ರೀಲ್ಸ್!! ಒಟ್ಟಾರೆ ಅಂದು ಫೇಮಸ್ ಆದ ಡೋಲೊ 650 ಶಶಿರೇಖಾ (Dolo 650 Shashirekha) ಇಂದಿಗೂ ಸೋಷಿಯಲ್ ಮೀಡಿಯಾ ಸ್ಟಾರ್‌!. ಇದೀಗ ಶಶಿರೇಖಾ ಏನ್ ಮಾಡ್ತಿದಾರೆ ಗೊತ್ತಾ?

ಅಂದು ರಸ್ತೆಬದಿಯಲ್ಲಿ ಬಿದಿರಿನಬುಟ್ಟಿ ಹೆಣೆಯುತ್ತಾ ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದ ಶಶಿರೇಖಾ (Shashirekha), ಬಡವರಿಗೆ ಕೊರೊನಾ ಬಂದರೆ ಅವರು ಏನು ಮಾಡುತ್ತಾರೆ, ಸರ್ಕಾರ ಬಡವರನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಹೇಗೆ ನೋಡಿಕೊಳ್ಳುತ್ತಿದೆ ಎಂದು ಆ ವಿಡಿಯೊದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ‘ಹೊದವರ್ಷ ಎಲ್ಲಾ ಆಂಟಿದೀರ್ಗೆ ಬಂತು, ಈ ವರ್ಷ ಎಲ್ಲಾ ಹುಡುಗ್ರುಗೆ ಬಂತು, ಈಗ ಹೈಕ್ಲುಗೆ. ಆಮೇಲೆ ಎಲ್ಲಾ ಹೊಟ್ಟೆಯೊಳಗೆ ಇರುತ್ತಲ ಆ ಕೂಸ್ಗೆ; ಅದು ನಾಲ್ಕನೇ ಅಲೆ’ ಎಂದು ಹೇಳಿದ್ದರು. ಈ ಡೈಲಾಗ್ ಸಖತ್ ವೈರಲ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ಇವರದೇ ಹವಾ ಆಗಿಬಿಟ್ಟಿತ್ತು. ಹಲವು ಟ್ರೋಲ್ ಗಳನ್ನು ಎದುರಿಸಿದರಾದರೂ, ಕೆಲವು ಟಿ.ವಿ ಚಾನೆಲ್‌ ಅವರೂ ಶಶಿರೇಖಾ ಅವರನ್ನು ಸಂದರ್ಶನ ಕೂಡ ಮಾಡಿದ್ದರು.

ದಿಟ್ಟ ಮಹಿಳೆಯ ಮಾತುಗಾರಿಕೆ, ನೇರ ನುಡಿ, ಸಮಾಜದ ಬಗೆಗಿನ ಕಾಳಜಿ ಕಂಡು ಹಲವು ಸಂಘ ಸಂಸ್ಥೆಗಳು ವೇದಿಕೆ ಕಾರ್ಯಕ್ರಮಕ್ಕೆ ಅವರನ್ನು ಕರೆತಂದು ಸನ್ಮಾನಿಸಿವೆ. ಇದೀಗ ಚುನಾವಣಾ (Karnataka election) ಪ್ರಚಾರದಲ್ಲಿಯೂ ಶಶಿರೇಖಾ ತೊಡಗಿಸಿಕೊಂಡಿದ್ದಾರೆ. ಖಾಲಿ ಕೈಯಲ್ಲಿ ಇದ್ದ ಶಶಿರೇಖಾ ತಮ್ಮ ದಿಟ್ಟತನದಿಂದ ಇದೀಗ ಫೇಮಸ್ ಆಗಿದ್ದು, ಎಲ್ಲದರಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ.

ಅಲ್ಲದೆ, ಇದೀಗ ಈ ಶಶಿರೇಖಾ ಸೋಷಿಯಲ್‌ ಮೀಡಿಯಾದಲ್ಲಿ ಕ್ರಿಯೇಟರ್‌ ಆಗಿ ಗುರುತಿಸಿಕೊಂಡಿದ್ದಾರೆ. Dolo 650 ಇಂದಲೇ ಫೇಮಸ್ ಆದ ಶಶಿರೇಖಾ ಅದೇ ಹೆಸರನ್ನಿಂದ Dolo 650 Shashirekha ಹೆಸರಿನ ಇನ್‌ಸ್ಟಾಗ್ರಾಂ (instagram) ಖಾತೆ ತೆರೆದರು. ಇದೀಗ ಲಕ್ಷಾಂತರ ಮಂದಿ ಫಾಲೋವರ್ಸ್ ಕೂಡ ಹೊಂದಿದ್ದಾರೆ. ಪ್ರತಿದಿನ ಸಾಕಷ್ಟು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಮಹಿಳೆಯ ಧೈರ್ಯ ಕಂಡು ಹಲವಾರು ಮೆಚ್ಚಿಕೊಂಡಿದ್ದಾರೆ. ಕೆಲವರು ‘ಬಡವರ ಮಕ್ಕಳು ಬೆಳಿಬೇಕು’ ಎಂದು ಕಾಮೆಂಟ್ ಮೂಲಕ ಸಂತಸ ವ್ಯಕ್ತಪಡಿಸುತ್ತಾರೆ.

ಶಶಿರೇಖಾಗೆ ಕೆಲವು ಬ್ಯೂಟಿ ಕೇರ್‌ಗಳು ಮುಂದೆ ಬಂದು ಮೇಕ್‌ ಓವರ್‌ ಮಾಡಿವೆ. ಹಳೇ ಲುಕ್‌ ಸರಿಸಿ ಹೊಸ ಅವತಾರ ನೀಡಿವೆ. ಸೀರೆ, ಸತ್ಯಾಕರ್ಷಕ ಹೇರ್‌ಸ್ಟೈಲ್‌, ಮೇಕಪ್‌ ಮೂಲಕವೇ ಶಶಿರೇಖಾ ಅವರನ್ನು ಬದಲಾಯಿಸಿವೆ. ಇದೀಗ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಅವರ ಹೊಸ ಲುಕ್‌ನ ವಿಡಿಯೋಗಳೂ ವೈರಲ್ ಆಗಿವೆ. ಇನ್ಸ್ಟಾಗ್ರಾಮ್ ನಲ್ಲಿ ಕನ್ನಡ ಸಿನಿಮಾಗಳ ಹಾಡಿಗೆ ರೀಲ್ಸ್‌ ಮಾಡಿ ಅಪ್ಲೋಡ್ ಮಾಡುತ್ತಾರೆ. ಏನೂ ಇಲ್ಲದೆ ಬಂದ ಶಶಿರೇಖಾ ಇಂದು ಸೋಷಿಯಲ್‌ ಮೀಡಿಯಾದಲ್ಲಿ ತನ್ನತನವನ್ನು ಕಂಡುಕೊಂಡಿದ್ದಾರೆ. ಡೋಲೋ 650 ಮಾತ್ರೆಯಿಂದ ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ಕಂಡರೂ, ಈಗಲೂ ನಿತ್ಯದ ಕೂಲಿಯನ್ನೇ ನಂಬಿ ಶಶಿರೇಖಾ ಜೀವನ ಸಾಗಿಸುತ್ತಿದ್ದಾರೆ.

 

ಇದನ್ನು ಓದಿ: Congress Manifesto: ಬಜರಂಗದಳ ನಿಷೇಧ ವಿಚಾರ! ಕಾಂಗ್ರೆಸ್‌ ಸಮೀಕ್ಷೆ ಏನು ಹೇಳುತ್ತಿದೆ? 

Leave A Reply

Your email address will not be published.