SBI Rules: ಎಸ್ಬಿಐನ ವಿವಿಧ ಕ್ರೆಡಿಟ್ ಕಾರ್ಡ್ಗಳಲ್ಲಿ ನಿಯಮಗಳು ಬದಲಾಗಿವೆ! ಇಲ್ಲಿದೆ ಡಿಟೇಲ್ಸ್!
SBI Credit Card; Rules have changed in SBI credit cards
SBI Credit Card Rules: ಪ್ರಸ್ತುತ ಜನರು ನಗದು ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ನಗದುರಹಿತ ವಹಿವಾಟು ಮಾಡುವುದು ಹೆಚ್ಚಾಗಿದ್ದು, ಆನ್‌ಲೈನ್ (online ), ಯುಪಿಐ(UPI) ವಹಿವಾಟು ಹಾಗೂ ಎಟಿಎಂ ಕಾರ್ಡ್‌ಗಳ (ATM card ) ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ.
ಮುಖ್ಯವಾಗಿ ಎಸ್ಬಿಐನ ವಿವಿಧ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಹಣ ಪಾವತಿಸುವುದರಿಂದ ಒಂದಿಷ್ಟು ಕ್ಯಾಷ್ಬ್ಯಾಕ್, ರಿವಾರ್ಡ್ ಪಾಯಿಂಟ್ಗಳು ಸಿಗುತ್ತವೆ. ಈ ಸೇವೆಯಲ್ಲಿ ಈ ವರ್ಷ ಕೆಲ ಬದಲಾವಣೆಗಳನ್ನು (SBI Credit Card Rules )ಮಾಡಲಾಗಿದೆ. ಕೆಲ ಪಾವತಿಗಳಿಗೆ ಕ್ಯಾಷ್ಬ್ಯಾಕ್ ಕಡಿಮೆ ಆಗಿದೆ, ಕೆಲವಕ್ಕೆ ರಿವಾರ್ಡ್ ಪಾಯಿಂಟ್ಸ್ ಹೆಚ್ಚಾಗಿದ್ದು, ಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಸದ್ಯ ಏಪ್ರಿಲ್ 1ರಿಂದ ಭಾರತದಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗಿದೆ. 2023-24ರ ವರ್ಷ ಹಲವು ಬದಲಾವಣೆಗಳೊಂದಿಗೆ ಹಣಕಾಸು ನಿಯಮಗಳು ಬಂದಿವೆ.
ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಮತ್ತು ಪೇಮೆಂಟ್ ಸೇವೆಗಳಲ್ಲಿ ಒಂದಿಷ್ಟು ಮಹತ್ವದ ಬದಲಾವಣೆಗಳಾಗಿವೆ. ಅದಲ್ಲದೆ ವೈಯಕ್ತಿಕ ತೆರಿಗೆ, ಹೂಡಿಕೆಗಳಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ಬ್ಯಾಂಕುಗಳ ಬಡ್ಡಿ ದರದಲ್ಲಿ ವ್ಯತ್ಯಯಗಳಾಗಿವೆ. ಈ ತಿಂಗಳು ಮೇ 1ರಿಂದಲೇ ಈ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳ ಬಗ್ಗೆ ಎಸ್‌ಬಿಐ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ.
ಕ್ಯಾಷ್ಬ್ಯಾಕ್ ಎಸ್‌ಬಿಐ ಕಾರ್ಡ್ನಲ್ಲಿ ಒಡವೆ, ಶಾಲೆ ಹಾಗು ಶೈಕ್ಷಣಿಕ ಸೇವೆ, ಯುಟಿಲಿಟಿ ಬಿಲ್, ಇನ್ಷೂರೆನ್ಸ್ ಸರ್ವಿಸ್ ಇತ್ಯಾದಿ ಪಾವತಿಗೆ ಇನ್ಮುಂದೆ ಯಾವುದೇ ಕ್ಯಾಷ್ಬ್ಯಾಕ್ ಆಫರ್ ಇರುವುದಿಲ್ಲ. ಗಿಫ್ಟ್ಗಳು, ಸೌಂದರ್ಯವರ್ಧಕಗಳು, ರೈಲ್ವೇಸ್ ಇತ್ಯಾದಿ ಖರೀದಿಗೂ ಕ್ಯಾಷ್ಬ್ಯಾಕ್ ಸಿಗುವುದಿಲ್ಲ.
ಎಸ್ಬಿಐನ AURUM ಕ್ರೆಡಿಟ್ ಕಾರ್ಡ್ ಮೂಲಕ ಸಿಗುತ್ತಿದ್ದ ಈಜಿಡೈನರ್ ಪ್ರೈಮ್ (EazyDiner Prime) ಮತ್ತು ಲೆನ್ಸ್ಕಾರ್ಟ್ ಗೋಲ್ಡ್ (LensKart Gold) ಮೆಂಬರ್ಶಿಪ್ ಸೌಲಭ್ಯ ಇನ್ಮುಂದೆ ಸಿಗುವುದಿಲ್ಲ.
AURUM ಕ್ರೆಡಿಟ್ ಕಾರ್ಡ್ ಹೊಂದಿರುವವರು ಒಂದು ವರ್ಷಕ್ಕೆ 5,00,000 ರೂ ಮೈಲ್ಸ್ಟೋನ್ ಸ್ಪೆಂಡ್ಗೆ ಆರ್ಬಿಎಲ್ನಿಂದ 5,000 ರೂ ಮೌಲ್ಯದ ಕೂಪನ್ ಸಿಗುತ್ತಿತ್ತು. ಈಗ ಆರ್ಬಿಎಲ್ ಲುಕ್ಸ್ನಿಂದ (RBL Luxe) ಈ ಕೂಪನ್ ಸಿಗಲ್ಲ. ಅದರ ಬದಲು ಟಾಟಾ ಕ್ಲಿಕ್ ಲಕ್ಷುರಿಯಿಂದ (Tata CliQ Luxury) ಕೂಪನ್ ಸಿಗುತ್ತದೆ.
SimplyCLICK ಎಸ್‌ಬಿಐ ಕಾರ್ಡ್ ಮತ್ತು SimplyCLICK ಅಡ್ವಾಂಟೇಜ್ ಎಸ್‌ಬಿಐ ಕಾರ್ಡ್ ಬಳಸಿ ಆನ್‌ಲೈನ್ ಮೂಲಕ ಬಾಡಿಗೆ ಪಾವತಿಸಿದರೆ ಒಂದಿಷ್ಟು ರಿವಾರ್ಡ್ ಪಾಯಿಂಟ್ ಸಿಗುತ್ತಿತ್ತು. ಈ ರಿವಾರ್ಡ್ ಪಾಯಿಂಟ್ಗಳನ್ನು ಐದು ಹಂತಗಳಷ್ಟು ಇಳಿಸಲಾಗಿದೆ. ಅಂದರೆ 5 ಅಂಕಗಳು ಸಿಗುತ್ತಿದ್ದರೆ ಈಗ 1 ಅಂಕ ಮಾತ್ರ ಸಿಗುತ್ತದೆ.
SimplyCLICK ಎಸ್‌ಬಿಐ ಕಾರ್ಡ್ ಮತ್ತು SimplyCLICK ಅಡ್ವಾಂಟೇಜ್ ಎಸ್‌ಬಿಐ ಕಾರ್ಡ್ ಮೂಲಕ ಲೆನ್ಸ್ಕಾರ್ಟ್ನಿಂದ ಏನಾದರೂ ಖರೀದಿಸಿದರೆ ರಿವಾರ್ಡ್ ಪಾಯಿಂಟ್ ಸಿಗುತ್ತಿತ್ತು. ಏಪ್ರಿಲ್ 1ರಿಂದ ಒಂದನೇ ಹತ್ತು ಭಾಗದಷ್ಟು ರಿವಾರ್ಡ್ ಪಾಯಿಂಟ್ ಇಳಿಸಲಾಗಿದೆ. 10 ಅಂಕ ಪಡೆಯುತ್ತಿದ್ದವರಿಗೆ 1 ಅಂಕವಷ್ಟೇ ಸಿಗುತ್ತದೆ.
ಆದರೆ, ಅಪೋಲೋ 24/7 ಮತ್ತು ಬುಕ್ ಮೈ ಶೋನಲ್ಲಿ ಈ ಎರಡು ಎಸ್‌ಬಿಐ ಕಾರ್ಡ್ ಉಪಯೋಗಿಸಿ ಹಣ ಪಾವತಿಸಿದರೆ 10 ಪಟ್ಟು ಹೆಚ್ಚು ರಿವಾರ್ಡ್ ಪಾಯಿಂಟ್ಸ್ ಸಿಗಲಿದೆ. ಕ್ಲಿಯರ್ಟ್ರಿಪ್, ಈಜಿಡೈನರ್ ಮತ್ತು ನೆಟ್ಮೆಡ್ಸ್ ಮೊದಲಾದವುಗಳಲ್ಲಿ ಪಾವತಿಗಳಿಗೂ 10 ಪಟ್ಟು ರಿವಾರ್ಡ್ ಪಾಯಿಂಟ್ಸ್ ದೊರಕುತ್ತದೆ.
ಎಸ್‌ಬಿಐ ಕಾರ್ಡ್ ಮೂಲಕ ಪಾವತಿಸುವ ಬಾಡಿಗೆಗೆ ಶುಲ್ಕ ಹೆಚ್ಚಳ
ಎಸ್ಬಿಐನ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಬಾಡಿಗೆ ಪಾವತಿಸುತ್ತಿದ್ದರೆ 99 ರೂ ಹಾಗೂ ತೆರಿಗೆ ಪಾವತಿಸಬೇಕಿತ್ತು. ಈಗ ಈ ಪ್ರೋಸೆಸಿಂಗ್ ಶುಲ್ಕವನ್ನು 199 ರೂಗೆ ಹೆಚ್ಚಿಸಲಾಗಿದೆ. ಶೇ. 18ರಷ್ಟು ಜಿಎಸ್ಟಿಯನ್ನೂ ತೆರಬೇಕಾಗುತ್ತದೆ. ಮಾರ್ಚ್ 17ರಿಂದಲೇ ಹೊಸ ಶುಲ್ಕ ಜಾರಿಗೆ ಬಂದಿದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿದಾಗ ಪ್ರಸ್ತುತ ಎಸ್‌ಬಿಐ ಶುಲ್ಕವನ್ನ ಹೆಚ್ಚಿಸುತ್ತಿದ್ದರೂ, ಹೊಸ ಕಾರ್ಡ್‌ಗಳ ವಿತರಣೆಯಲ್ಲಿ ಎಸ್‌ಬಿಐ ಅಗ್ರಸ್ಥಾನದಲ್ಲಿದೆ.
ಇದನ್ನು ಓದಿ: Actor Darshan: ದರ್ಶನ್ ಎದೆಯ ಮೇಲಿರೋ ‘ನನ್ನ ಪ್ರೀತಿಯ ಸೆಲೆಬ್ರಿಟೀಸ್’ ಟ್ಯಾಟೂ ಹಾಕಿದ್ದಕ್ಕೆ ನಟ ಕೊಟ್ಟ ಮೊತ್ತವೆಷ್ಟು?