Freezer murder: ಅಬ್ಬಬ್ಬಾ! 2 ವರ್ಷ, ವೃದ್ಧನ ಹೆಣವನ್ನು ಫ್ರೀಜರ್​ನಲ್ಲಿಟ್ಟು ಪಿಂಚಣಿ ದುಡ್ಡಲ್ಲಿ ಮಜಾ ಮಾಡ್ತಿದ್ದ ಈ ಭೂಪ! ಅಷ್ಟಕ್ಕೂ ನಡೆದದ್ದೇನು ಗೊತ್ತಾ?

kept the old man's body in the freezer and enjoying in his pension

Freezer murder: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ದಂಗುಬಡಿಸಿತ್ತು. ಆದರೆ ಇದೀಗ ಮತ್ತೆ ಅದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಈ ಘಟನೆ ಮಾತ್ರ ಅದಕ್ಕಿಂತಲೂ ಭಯಾನಕವಾಗಿದ್ದು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ಯಾಕೆಂದ್ರೆ ಇಲ್ಲೊಬ್ಬ ವ್ಯಕ್ತಿ ವೃದ್ಧರೊಬ್ಬರ ಮೃತದೇಹವನ್ನು ಎರಡು ವರ್ಷಗಳ ಕಾಲ ಫ್ರೀಜರ್​ನಲ್ಲಿ(Freezer murder)ಇರಿಸಿದ್ದಾನೆ!

 

ಹೌದು, ಯುಕೆಯಲ್ಲಿ ಜಾನ್​ ವೈನ್​ರೈಟ್​(71) ಎಂಬುವವರು 2018ರ ಸೆಪ್ಟೆಂಬರ್​ನಲ್ಲಿ ನಿಧನರಾಗಿದ್ದರು. ಆದರೆ ಅವರ ದೇಹವನ್ನು 2020ರ ಆಗಸ್ಟ್ 22ರವರೆಗೆ ಡೇಮಿಯನ್ ಜಾನ್ಸನ್ ಎಂಬ, 52 ವರ್ಷದ ವ್ಯಕ್ತಿಯೊಬ್ಬ ಫ್ರೀಜರ್​ನಲ್ಲಿ ಇರಿಸಿ, ಅವರ ಪಿಂಚಣಿ ಹಣದಲ್ಲಿ ಶಾಪಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದನು. ಸದ್ಯ ಈ ಆರೋಪವನ್ನು ಈಗ ಒಪ್ಪಿಕೊಂಡಿರುವ ಈತ ವೃದ್ಧರ ಮೃತದೇಹವನ್ನು ಫ್ರೀಜರ್​ನಲ್ಲಿರಿಸಿ ಅವರ ಹಣವನ್ನು ನಾನು ಉಪಯೋಗಿಸುತ್ತಿದ್ದೆ, ಶಾಪಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಇನ್ನು ವೈನ್​ರೈಟ್ ಅವರ ಸಾವಿಗೆ ಏನು ಕಾರಣ ಎಂದು ಇನ್ನೂ ಬಹಿರಂಗವಾಗಿಲ್ಲ. ಇಬ್ಬರೂ ಬರ್ಮಿಂಗ್‌ಹ್ಯಾಮ್‌ನ ಡೌನ್‌ಟೌನ್ ಕ್ಲೀವ್‌ಲ್ಯಾಂಡ್ ಟವರ್, ಹೋಲಿವೆಲ್ ಹೆಡ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾಗ ಅಪರಾಧ ನಡೆದಿದೆ ಎಂದು ಅಂದಾಜಿಸಲಾಗಿದೆ.

ಅಂದಹಾಗೆ ಇದೇ ರೀತಿಯ ಪ್ರಕರಣ ಈ ಹಿಂದೆ ನಮ್ಮ ಭಾರತದ ಕೊಲ್ಕೊತ್ತದಲ್ಲಿ ನಡೆದಿದ್ದು, 43 ವರ್ಷದ ವ್ಯಕ್ತಿಯೊಬ್ಬರು ತಮ್ಮ ಹೆಬ್ಬೆರಳಿನ ಗುರುತನ್ನು ಬಳಸಿಕೊಂಡು ಪ್ರತಿ ತಿಂಗಳು ಪಿಂಚಣಿ ಸಂಗ್ರಹಿಸಲು ಸುಮಾರು ಮೂರು ವರ್ಷಗಳ ಕಾಲ ತನ್ನ ಮೃತ ತಾಯಿಯ ಶವವನ್ನು ಡೀಪ್ ಫ್ರೀಜರ್‌ನಲ್ಲಿ ಇರಿಸಿ ಬಂಧನಕ್ಕೊಳಗಿದ್ದರು.

 

ಇದನ್ನೂ ಓದಿ:  ಮದುವೆಯಾಗದ ಯುವಕರಿಗೆ ಮದುವೆ ಭಾಗ್ಯ ಗ್ಯಾರಂಟಿ- ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆ ಫುಲ್ ವೈರಲ್!

Leave A Reply

Your email address will not be published.