DK Shivakumar: ಹೆಲಿಕಾಪ್ಟರ್ ಸಮೀಪ ಬೆಂಕಿ, ಡಿಕೆಶಿ ಪಾರು; ಗರುಡ ಶಾಪಕ್ಕೆ ತುತ್ತಾದ್ರಾ ಡಿಕೆ ಶಿವಕುಮಾರ್ ?!

DK Shivakumar: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹೊನ್ನಾವರ ಸಮೀಪದ ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಿದ್ದಂತೆಯೇ ಹೆಲಿಪ್ಯಾಡ್‌ನ ಹೊರಗಡೆ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಕೇವಲ ಎರಡು ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಬಡಿದು ಬಿಟ್ಟಿತ್ತು. ಅದೃಷ್ಟವಶಾತ್ ಡಿಕೆ ಶಿವಕುಮಾರ್ ಅವರು ಅಪಾಯದಿಂದ ಪಾರಾಗಿದ್ದರು.

ಇದೀಗ ಎರಡೇ ದಿನದ ಒಳಗೆ ಡಿಕೆಶಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸಮೀಪ ಮತ್ತೊಂದು ಅನಾಹುತ ಉಂಟಾಗಿದೆ. ಈ ಬಾರಿ ಅವರಿಗೇನೂ ತೊಂದರೆ ಆಗಿಲ್ಲವಾದರೂ, ಹೆಲಿಕಾಪ್ಟರ್ ಸುತ್ತಲಿನ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಡಿಕೆಶಿ ಪಾಲಿಗೆ ಇದೆಲ್ಲಾ ಅಪಶಕುನದ ವಿಚಾರಗಳೇ.

ಡಿ.ಕೆ. ಶಿವಕುಮಾರ್ ಅವರು ಇಂದು ಗುರುವಾರ ಮಧ್ಯಾಹ್ನ ಚುನಾವಣಾ ಪ್ರಚಾರಕ್ಕಾಗಿ ಉತ್ತರ ಕನ್ನಡಕ್ಕೆ ಆಗಮಿಸಿ, ಕುಮಟಾ-ಅಂಕೋಲ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿರುವ ನಿವೇದಿತ್‌ ಆಳ್ವ ಅವರ ಪರವಾಗಿ ಅವರು ಪ್ರಚಾರ ನಡೆಸುವವರಿದ್ದರು. ಡಿಕೆಶಿ ಪ್ರಯಾಣಿಸಿದ ಹೆಲಿಕಾಪ್ಟರ್ ಇಳಿದ ಹೊನ್ನಾವರ ರಾಮತೀರ್ಥ ಗುಡ್ಡದಲ್ಲಿ ಬೆಂಕಿ ಅನಾಹುತ ನಡೆದಿದೆ.

ಎರಡು ದಿನಗಳ ಇದರಿಂದ ಸಂಭಾವ್ಯ ದೊಡ್ಡ ಅವಘಡವೊಂದು ತಪ್ಪಿತ್ತು. ಹಿಂದೆ ಡಿ.ಕೆ. ಶಿವಕುಮಾರ್ ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗುತ್ತಿದ್ದ ಹೆಲಿಕಾಪ್ಟರ್‌ಗೆ ಮಾರ್ಗ ಮಧ್ಯೆ ರಣಹದ್ದೊಂದು ಬಡಿದು ವಿಂಡ್ ಶೀಲ್ಡ್ ಒಡೆದೇ ಹೋಗಿತ್ತು. ಪೈಲಟ್ ತಕ್ಷಣವೇ ಸಮಯಪ್ರಜ್ಞೆಯಿಂದ ಹೆಲಿಕಾಪ್ಟರನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರು. ಅದಾದ ಬಳಿಕ ಅವರು ತುಮಕೂರಿನ ನೊಣವಿನಕೆರೆಯ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದರು.

ಡಿಕೆ ಶಿವಕುಮಾರ್ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿಯಾಗಿದ್ದ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಯೋಧ್ಯೆಯ ರಾಮ ಶ್ರೀ ವಿಷ್ಣುವಿನ ಅವತಾರ. ವಿಷ್ಣುವಿನ ವಾಹನ ಗರುಡ. ರಾಮ ಭಕ್ತ ಹನುಮಂತನನ್ನು ಅವಮಾನಿಸಿ ಬಜರಂಗದಳವನ್ನು ನಿಷೇಧಿಸಲು ಹೊರಟ ಕಾಂಗ್ರೆಸ್ ಮೇಲೆ ಗರುಡ ಮುನಿಸಿಕೊಂಡಿದ್ದಾನೆ. ಆದುದರಿಂದ ವಾಯುಪುತ್ರ ಹನುಮಂತನ ಅಂದರೆ ಭಜರಂಗಿಯ ಕಾರಣದಿಂದ ಡಿಕೆಶಿಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ಅದು ಕೂಡ ವಾಯುಪುತ್ರ ಹನುಮಂತ ಸಂಚರಿಸುವ ವಾಯುಮಾರ್ಗದಲ್ಲಿ ! ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಘಟನೆ ಸಂಭವಿಸಿದ್ದರಿಂದ ಎರಡಕ್ಕೂ ಥಳಕು ಹಾಕಲಾಗಿದೆ. ವಾಯುಪುತ್ರ ಸಂಘಟನೆ ನಿಷೇಧಿಸ ಹೊರಟವರಿಗೆ ವಿಷ್ಣುವಿನ ವಾಹನ ಎಚ್ಚರಿಕೆ ನೀಡಿದ್ದಾನೆ ಎಂಬ ಸಂದೇಶಗಳನ್ನು ಅನೇಕರು ಪೋಸ್ಟ್ ಮಾಡಿ ಟ್ರೊಲ್ ಮಾಡಿದ್ದಾರೆ.

 

ಇದನ್ನು ಓದಿ: Yogi Adityanath: ಮೇ 6 ರಂದು ಪುತ್ತೂರಿಗೆ ಯೋಗಿ ಆದಿತ್ಯನಾಥ್ ಭೇಟಿ ; ರೋಡ್ ಶೋ ಸಂಪೂರ್ಣ ಮಾಹಿತಿ ಇಲ್ಲಿದೆ 

Leave A Reply

Your email address will not be published.