KSRTC-Car Accident: ಕೆಎಸ್‌ಆರ್‌ಟಿಸಿ-ಕಾರಿನ ನಡುವೆ ಭೀಕರ ಅಪಘಾತ! ಮೂವರು ಸ್ಥಳದಲ್ಲೇ ಸಾವು!

Accident between KSRTC bus - car

KSRTC-Car Accident: ಕೆಎಸ್‌ಆರ್‌ಟಿಸಿ ಬಸ್ಸೊಂದು ಕಾರಿಗೆ ಡಿಕ್ಕಿಯಾಗಿ (KSRTC-Car Accident) ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಯಾದಗಿರಿಯ ಮದ್ದರಕಿ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದ ನಾಗರಾಜು ಸಜ್ಜನ್‌(59), ಮಹಾದೇವಿ(50) ಹಾಗೂ ರೇಣುಕಾ (45) ಎಂಬುವವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

 

KSRTC-Car Accident

ಯಾದಗಿರಿ ಜಿಲ್ಲೆಯ ಶಹಾಪುರ ಮದ್ದರಕಿ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಕಲಬುರ್ಗಿಯಲ್ಲಿ ಸಂಬಂಧಿಕರೊಬ್ಬರ ಮದುವೆ ಮುಗಿಸಿ ವಾಪಾಸ್ಸಾಗುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿದ್ದ ಐವರು ಈ ಅಪಘಾತದಲ್ಲಿ ಪ್ರಾಣಹಾನಿಯಿಲ್ಲದೆ ಪಾರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಘಟನೆಯಲ್ಲಿ ಮೃತರಾದ ನಾಗರಾಜು ಅವರು ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಈ ದುರಂತ ಘಟನೆ ನಡೆದ ಬಳಿಕ ಚಾಲಕ ಸಾರಿಗೆ ಬಸ್‌ ಬಿಟ್ಟು ಪರಾರಿಯಾಗಿದ್ದಾನೆ ಎಂಬುವುದಾಗಿ ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಭೀಮರಾಯನಗುಡಿ ಠಾಣೆ ಪೊಲೀಸರು ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಇದನ್ನು ಓದಿ: Google Kantar Report: ಭಾರತೀಯರು ಯಾವ ರೀತಿಯ ಸುದ್ದಿಗಳನ್ನು ಓದಲು ಬಯಸುತ್ತಾರೆ? ಇಲ್ಲಿದೆ ಸಮೀಕ್ಷೆಯ ವರದಿ 

Leave A Reply

Your email address will not be published.