Mohammed Shami: ವೇಶ್ಯೆಯರ ಜೊತೆ ಲೈಂಗಿಕ ಸಂಬಂಧ- ಖ್ಯಾತ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ ಪತ್ನಿ ಹಸಿನ್!

Mohammed shami would have divorce hasin jahan

Mohammed Shami : ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ (Mohammed Shami) ವಿರುದ್ಧ ಪತ್ನಿ ದೂರು ನೀಡಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಶಮಿ ವಿರುದ್ಧ, ವರದಕ್ಷಿಣೆಗೆ ಬೇಡಿಕೆ ಮತ್ತು ವೇಶ್ಯಯರೊಂದಿಗೆ ಅಕ್ರಮ ವಿವಾಹೇತರ ಸಂಬಂಧಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾನೆ ಎಂದು ದೂರು ನೀಡಲಾಗಿತ್ತು.

ಈ ಕುರಿತು ಬಂಧನದ ವಾರೆಂಟ್‌ಗೆ ಸ್ಥಳೀಯ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದ ಕಲ್ಕತ್ತಾ ಆದೇಶದ ವಿರುದ್ಧ ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಪತ್ನಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ಕಳೆದ 4 ವರ್ಷಗಳಿಂದ ಪ್ರಕರಣ ಯಾವುದೇ ಪ್ರಗತಿ ಕಂಡಿಲ್ಲ ಎಂದೂ ಮನವಿಯಲ್ಲಿ ಆಪಾದಿಸಿದ್ದಾರೆ.

ಪಶ್ಚಿಮ ಬಂಗಾಳದ ಸೆಷನ್ಸ್ ಕೋರ್ಟ್ ಶಮಿ ವಿರುದ್ಧ ಆದೇಶ ನೀಡಿದ್ದ ಬಂಧನ ವಾರಂಟ್‌ಗೆ ತಡೆ ನೀಡಿತ್ತು. ಸೆಷನ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಮನವಿಯನ್ನು
ಹೈಕೋರ್ಟ್ ನಲ್ಲಿ ವಜಾಗೊಳಿಸಲಾಗಿದೆ.

ಇದೀಗ ಪತ್ನಿ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ, ಶಮಿ ತನ್ನಿಂದ ವರದಕ್ಷಿಣೆಗೆ ಬೇಡಿಕೆಯಿಡುತ್ತಿದ್ದರು. ವೇಶ್ಯಯರೊಂದಿಗೆ ಅಕ್ರಮ ವಿವಾಹೇತರ ಸಂಬಂಧಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

ಅರ್ಜಿಯ ಪ್ರಕಾರ, ಆಗಸ್ಟ್ 29, 2019 ರಂದು ಅಲಿಪುರದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಶಮಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದಾರೆ. ಮೊಹಮ್ಮದ್ ಶಮಿ ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯದ ಮುಂದೆ ಪ್ರಶ್ನಿಸಿದರು, ಇದು ಸೆಪ್ಟೆಂಬರ್ 9, 2019 ರಂದು ಬಂಧನ ವಾರಂಟ್ ಮತ್ತು ಕ್ರಿಮಿನಲ್ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಗಳಿಗೆ ತಡೆ ನೀಡಿದೆ.

ಈ ಹಿನ್ನೆಲೆಯಲ್ಲಿ ಶಮಿ ಅವರ ಪತ್ನಿ ಜಹಾನ್​, ವಕೀಲರಾದ ದೀಪಕ್ ಪ್ರಕಾಶ್, ನಚಿಕೇತ ವಾಜಪೇಯಿ ಮತ್ತು ದಿವ್ಯಾಂಗ್ನಾ ಮಲಿಕ್ ವಾಜಪೇಯಿ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ, ಮೊಹಮದ್​ ಶಮಿ ಕ್ರಿಕೆಟರ್​ ಎಂಬ ಕಾರಣಕ್ಕಾಗಿ ವಿಚಾರಣೆ ನಡೆಸಲು ವಿಳಂಬ ಮಾಡಲಾಗುತ್ತಿದೆ. ಸೆಲೆಬ್ರಿಟಿಗಳಿಗೆ ಕಾನೂನಿನಲ್ಲಿ ರಿಯಾಯಿತಿ ನೀಡಬಾರದು. ಇದು ತ್ವರಿತ ವಿಚಾರಣೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೈಕೋರ್ಟ್​ ನೀಡಿದ ಆದೇಶ ಆಕ್ಷೇಪಾರ್ಹವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ. ಗಮನಾರ್ಹವಾಗಿ, ಕಳೆದ 4 ವರ್ಷಗಳಿಂದ ವಿಚಾರಣೆಯು ಪ್ರಗತಿ ಕಂಡಿಲ್ಲ. ವಿನಾಕಾರಣ ತಡೆಹಿಡಿಯಲಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಈ ಬಾರಿ ಸಾಧಕರ ಕುರ್ಚಿಯನ್ನು ಯಾರು ಅಲಂಕರಿಸಲಿದ್ದಾರೆ? ಇವರೇ ನೋಡಿ!

Leave A Reply

Your email address will not be published.