Bhajarang dal issue: ಸಿದ್ದು ಕಾರಿನ ಮೇಲೆ ಕೂತ ಕಾಗೆಗೂ, ಡಿಕೆಶಿ ಹೆಲಿಕಾಪ್ಟರ್​ಗೆ ಗುದ್ದಿದ ರಣಹದ್ದಿಗೂ ಇದೆಯಾ ಸಂಬಂಧ! ಭಜರಂಗದಳ ನಿಷೇದಿಸೋದಾಗಿ ಹೇಳಿದ್ದಕ್ಕೆ ಸಿಕ್ಕ ಫಲನಾ ಇದು?

Karnataka assembly election Bajarang Dal Ban issue social media errupts

Bhajarang dal issue: ಕಾಂಗ್ರೆಸ್(Congress) ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ತನ್ನ ಪ್ರಣಾಳಿಕೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ನಿಷೇದ(Bhajarang dal issue) ಮಾಡುವುದಾಗಿ ಘೋಷಿಸಿ ನಾಡಿನಾದ್ಯಂತ ಹಿಂದೂ ಸಂಘಟನೆ ಹಾಗೂ ಹನುಮ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆ ಘೋಷಿಸಿದ ಬೆನ್ನಲ್ಲೇ ಕೆಲವೇ ಗಂಟೆಗಳಲ್ಲಿ ಡಿಕೆ ಶಿವಕುಮಾರ್(DK Shivkumar) ದೊಡ್ಡ ಅನಾಹುತವನ್ನೇ ಎದುರಿಸುವಂತಾಗಿದೆ. ಹೀಗಾಗಿ ಅನೇಕರು ಈ ಘಟನೆಯನ್ನು ನಾನಾ ರೀತಿಯಲ್ಲಿ ವಿಮರ್ಶಿಸುತ್ತಿದ್ದಾರೆ.

ಹೌದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ಗೆ ರಣಹದ್ದು ಬಡಿದು ಗಾಜು ಪುಡಿ ಪುಡಿಯಾಗಿ, ಕೂದಲೆಳೆ ಅಂತರದಲ್ಲಿ ಡಿಕೆ ಶಿವಕುಮಾರ್ ಬಚಾವ್ ಆಗಿದ್ದಾರೆ. ಈ ವಿಚಾರವನ್ನೀಗ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯಲ್ಲಿ ವಿಮರ್ಶೆ ಮಾಡಲಾಗುತ್ತಿದೆ. ಅನೇಕರು ಟೀಕೆ ಮಾಡುತ್ತಿದ್ದಾರೆ. ಬಜರಂಗದಳ ನಿಷೇಧಿಸುವುದಾಗಿ ಹೇಳಿದ ಒಂದೇ ಗಂಟೆಯಲ್ಲಿ ಜಟಾಯು ತಕ್ಕ ಪಾಠ ಕಲಿಸಿದ್ದಾನೆ. ಇದು ರಾಮ-ಹನುಮನ ಕೋಪ!, ಮತ್ತೆ ಕೆಲವೆಡೆ ಮುಂದಿನ ಚುನಾವಣೆಯಲ್ಲಿ ಸರ್ಕಾರ ಸೋಲುವುದಕ್ಕೆ ಇದು ಸಂಕೇತ ಎನ್ನುವ ಮಾತುಗಳು ಹರಿದಾಡುತ್ತಿವೆ.

ಅನೇಕರು ಇದು ರಾಮ-ಹನುಮನ ಕೋಪ. ಹನುಮನ ನಾಡಿನಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳಿದಕ್ಕೆ ಸ್ವತಃ ಜಟಾಯು ಡಿಕೆ ಶಿವಕುಮಾರ್ ಮೇಲೆ ಅಟ್ಯಾಕ್ ಮಾಡಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಜಟಾಯು ವಿಷ್ಟುವಿನ ವಾಹನ ಕಾಂಗ್ರೆಸ್​ನ ಭರವಸೆಗಳು ಭಗವಂತನಿಗೂ ಸಿಟ್ಟು ತರಿಸುತ್ತಿದೆ. ಇದು ಅಪಶಕುನ. ಜಟಾಯು ಅಧರ್ಮದ ಕೆಲಸದ ಬಗ್ಗೆ ಎಚ್ಚರಿಕೆ ನೀಡಲು ಬಂದತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಭಾರೀ ಸದ್ದು ಮಾಡುತ್ತಿದೆ.

ಇಷ್ಟೇ ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯ ಮುಂಚಿತವಾಗಿ 2016ರಲ್ಲಿ ವಿಧಾನಸೌಧದ ಎದುರು ನಿಲ್ಲಿಸಲಾಗಿದ್ದ ಸಿದ್ದರಾಮಯ್ಯ(Siddaramaiah) ಅವರ ಕಾರಿನ ಮೇಲೆ ಕಾಗೆ ಕೂತು, ತಿಳಿದೋ, ತಿಳಿಯದಯೋ ಸಿದ್ದು, ಕಾರನ್ನು ಬದಲಾಯಿಸಿದ್ದು ರಾಜ್ಯಾದ್ಯಂತ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿತ್ತು. ನಂತರ ಅದೇ ವೇಳೆ ಚುನಾವಣೆಯು ಎದುರಾಗಿ, ಸಿದ್ದು ಆಗಲಿ, ಕಾಂಗ್ರೆಸ್ ಆಗಲಿ ಹೀನಾಯವಾಗಿ ಸೋಲನುಭವಿಸಿದರು. ಅಂತೆಯೇ ಇದೀಗ ಡಿಕೆಶಿಯ ಘಟನೆಯನ್ನೂ ಇದಕ್ಕೆ ತಾಳೆ ಹಾಕಿ ನೋಡಲಾಗುತ್ತಿದೆ. ಸಿದ್ದರಾಮಯ್ಯನಿಗೆ ಆದ ಗತಿಯೇ ಡಿಕೆಶಿಗೂ ಬರಲಿದೆ. ಅದರ ಮುನ್ಸೂಚನೆ ಇದೆಂದು ಹೇಳಲಾಗ್ತಿದೆ. ಕಾಗೆ ಸೂಚನೆ ನೀಡಿದಂತೆ ರಣಹದ್ದು ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಮತ್ತೆ ನೆಲಕಚ್ಚಲಿದೆ ಎಂಬ ಚರ್ಚೆಗಳು ಜೋರಾಗಿವೆ.

ಇದನ್ನೂ ಓದಿ: ಮಾವಿನ ಸೀಸನ್​ ಮುಗಿದ ಮೇಲೂ ಈ ಹಣ್ಣನ್ನು ತಿನ್ಬೋದು, ಹೇಗಿದು ಸಾಧ್ಯ?

Leave A Reply

Your email address will not be published.