Bajarang Dal: ಕಾಂಗ್ರೆಸ್ ವಿರುದ್ಧ ಭಜರಂಗದಳ ಚಾಲೆಂಜ್! ಮೇ 4ರಂದು ರಾಜ್ಯದಾದ್ಯಂತ ಹನುಮಾನ್ ಚಾಲಿಸಾ ಪಠಣ!

Challenge of Bajrang Dal against Congress Manifesto

Congress Manifesto – Bajrang Dal : ಚುನಾವಣೆ ಕಾವು ಏರುತ್ತಿರುವ ಈ ಬಿರುಸಿನ ಸಂದರ್ಭದಲ್ಲಿ ಕಾಂಗ್ರೆಸ್ (Congress) ತನ್ನ ಪ್ರಾಣಾಳಿಕೆಯಲ್ಲಿ ಬಜರಂಗದಳವನ್ನು (Congress Manifesto – Bajrang Dal ) ನಿಷೇಧಿಸುವ ನಿರ್ಧಾರ ಘೋಷಣೆ ಮಾಡಿ, ವಿವಾದವನ್ನು ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳು ಕಾಂಗ್ರೆಸ್‌ಗೆ, ಹಿಂದೂ ಸಂಘಟನೆಯ ಶಕ್ತಿ ಏನು ಎಂಬುದನ್ನು ತೋರ್ಪಡಿಸಲು ಮಹತ್ವ ನಿರ್ಧಾರ ಕೈಗೊಂಡಿದೆ.

ಮಂಗಳವಾರ ಬಿಡುಗಡೆ ಮಾಡಿದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸಲಾಗಿದೆ ಎಂದು ಕಾಂಗ್ರೆಸ್‌ನ ಈ ಪ್ರಸ್ತಾಪಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕಾಂಗ್ರೆಸ್ ಅನ್ನು ಸೋಲಿಸಲು ಇಂದಿನಿಂದಲೇ ಬೀದಿಗೆ ಇಳಿಯುವಂತೆ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳಗಳು ತನ್ನ ಕಾರ್ಯಕರ್ತರಿಗೆ ಕರೆ ನೀಡಿವೆ.

ಹೌದು, ಭಜರಂಗದಳ ನಾಳೆ ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ನಡೆಸಲು ನಿರ್ಧರಿಸಿದೆ. ಇದು ಧರ್ಮಕ್ಕೆ ಸಂಕಟವಾಗಿರುವ ಸಮಯ. ಇದಕ್ಕೆ ಎಲ್ಲರೂ ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಬದಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ ಎಂದು ಕರೆ ಕೊಟ್ಟಿದೆ.

ಇದೇ ವೇಳೆ, ಮಂಗಳೂರಿನಲ್ಲಿ ಕಾರ್ಯದರ್ಶಿ ವಿಹಿಂಪ ಪ್ರಾಂತ ಶರಣ್ ಪಂಪ್‌ವೆಲ್, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ್ನು ಸೋಲಿಸಲು ಈಗಿನಿಂದಲೇ ನೇರವಾಗಿ ಚುನಾವಣಾ ಕಣಕ್ಕೆ ಇಳಿಯುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಬಿಜೆಪಿ ಮತ್ತು ಹಿಂದುತ್ವವನ್ನು ಬೆಂಬಲಿಸುವ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವಂತೆ ಸೂಚಿಸಲಾಗಿದೆ.

ಇನ್ನು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸೇರಿದಂತೆ ಇತರ ಹಿಂದೂಪರ ಸಂಘಟನೆಗಳ ನಾಯಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಾಂಗ್ರೆಸ್ ಪ್ರಣಾಳಿಕೆ ಮೂಲಕ ಭಾರತದ ಧರ್ಮಕ್ಕೆ ಅವಮಾನ ಮಾಡಲಾಗಿದೆ, ಶಾಂತವಾಗಿರುವ ನಮ್ಮನ್ನು ಕೆಣಕಿದರೆ ವಿನಾಶ ಖಂಡಿತ ಎಂದು ಗುಡುಗಿದ್ದಾರೆ.

ಅದಲ್ಲದೆ ಈ ಮಧ್ಯೆ, ಉಡುಪಿಯ ರಾಷ್ಟ್ರೀಯ ಹೆದ್ದಾರಿ 169ಎ ಕಡಿಯಾಳಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಭಜರಂಗ ಕಾರ್ಯಕರ್ತರು, ಕಾಂಗ್ರೆಸ್‌ನ ಪ್ರಾಣಾಳಿಕೆಯನ್ನು ಸುತ್ತು ಹಾಕಿದರು. ಈ ವೇಳೆ ಮಾತನಾಡಿದ ಭಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್ ತಾಕತ್ತಿಗೆ ಭಜರಂಗದಳವನ್ನು ನಿಷೇಧ ಮಾಡಿದರೆ, ಅದಕ್ಕೆ ತಕ್ಕ ಉತ್ತರವನ್ನು ನೀಡಲು ಸಿದ್ಧರಿದ್ದೇವೆ. ತಕ್ಷಣ ತಮ್ಮ ಪ್ರಾಣಾಳಿಕೆಯನ್ನು ಕಾಂಗ್ರೆಸ್ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.

 

ಇದನ್ನು ಓದಿ: Gas and Acidity Problems: ಇದನ್ನು ಬಾಯಿಗೆ ಹಾಕಿಕೊಂಡರೆ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ದೂರವಾಗುತ್ತದೆ 

Leave A Reply

Your email address will not be published.