Kota: ಸೈಕಲ್‌ಗೆ ಡಿಕ್ಕಿ ಹೊಡೆದ ಕಾರು! ಸೈಕಲ್‌ ಸವಾರ ಮೃತ್ಯು

Share the Article

Kota : ಸೈಕಲ್‌ಗೆ ಕಾರೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್‌ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮ ಡಿವೈನ್‌ ಪಾರ್ಕ್‌ ಎದುರುಗಡೆ ಶನಿವಾರದಂದು ನಡೆದಿದೆ.

ಸೈಕಲ್ ಸವಾರ ಗುಂಡ್ಮಿ ಭಗವತಿ ರಸ್ತೆಯ ಕೇಶವ ಮರಕಾಲ (41) ಮೃತ ದುರ್ದೈವಿ ಎಂದು ತಿಳಿದು ಬಂದಿದೆ (kota).

ಅತೀವೇಗ ಹಾಗೂ ಅಜಾಗರೂಕತೆಯಿಂದ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ, ಗುಂಡ್ಮಿಯಿಂದ ಸಾಲಿಗ್ರಾಮ ಕಡೆ ಹೋಗುತ್ತಿದ್ದ ಸೈಕಲ್‌ ಸವಾರನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಕಾರು ಪಲ್ಟಿ ಹೊಡೆದಿದ್ದು, ಸೈಕಲ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಈ ಚಿಹ್ನೆ ಕಂಡರೆ ವಾಹನ ನಿಲ್ಲಿಸಬೇಡಿ!

Leave A Reply