Sleep quality: ನಿದ್ರೆಯ ಗುಣಮಟ್ಟದ ಕುರಿತು ಅಧ್ಯಯನ : ಈ ರೀತಿ ಮಲಗೋದ್ರಿಂದ ಹೆಚ್ಚು ವರ್ಷ ಬದುಕಬಹುದು ಅನ್ನುತ್ತಾರೆ ತಜ್ಞರು!

Sleep quality: ನಮ್ಮ ಆರೋಗ್ಯಕ್ಕಾಗಿ ಸರಿಯಾದ ಕ್ರಮದಲ್ಲಿ ಒಳ್ಳೆಯ ನಿದ್ದೆಯನ್ನು ನಾವು ಮಾಡಲೇಬೇಕು. ನಿದ್ದೆ ನಮ್ಮ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ದೇಹಕ್ಕೆ ವಿಶ್ರಾಂತಿ ಬೇಕಾಗುತ್ತದೆ. ಅದು ಆರಾಮದಾಯ ನಿದ್ದೆಯಿಂದ ಸಾಧ್ಯ. ಒಂದು ರಾತ್ರಿ ಸರಿಯಾದ ನಿದ್ದೆ ಮಾಡದ ಮನುಷ್ಯ ಯಾವುದೇ ರೀತಿಯಲ್ಲೂ ಚಟುವಟಿಕೆಯಿಂದ ಇರಲು ಸಾಧ್ಯ ಆಗುವುದಿಲ್ಲ.

 

ನಿದ್ದೆ ಮನುಷ್ಯನಿಗೆ ಎಷ್ಟು ಉತ್ತಮವೊ ಅಷ್ಟೇ ಆತ ನಡೆದುಕೊಳ್ಳುವ ಕ್ರಮ ಕೂಡ ಮುಖ್ಯವಾಗಿರುತ್ತದೆ. ಅಂದರೆ, ಒಬ್ಬ ಮನುಷ್ಯ ನಿದ್ದೆಯಿಂದ ಏಳುವುದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಹಾಗೆಯೇ ಯಾವ ರೀತಿಯ ಚಟುವಟಿಕೆ ಮೂಲಕ ಮಲಗುತ್ತಾನೆ ಎಂಬುದು ಕೂಡ ಅವಲಂಬಿಸಿರುತ್ತದೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ವರ್ಲ್ಡ್ ಕಾಂಗ್ರೆಸ್ ಆಫ್ ಕಾರ್ಡಿಯಾಲಜಿ ಜಂಟಿಯಾಗಿ ನಿದ್ರೆಯ ಗುಣಮಟ್ಟದ ಕುರಿತು ಅಧ್ಯಯನವೊಂದು ನಡೆಸಿದ್ದು, ಸಂಶೋಧಕರು 5 ಅಂಶಗಳನ್ನ ಪರಿಶೀಲಿಸಿದ್ದಾರೆ.

* ನಿದ್ರಿಸುವ ಸಮಯ (ಅವಧಿ).
* ವಾರದಲ್ಲಿ ಎರಡು ಬಾರಿ ಹೆಚ್ಚು ನಿದ್ರಿಸುವುದು ಕಷ್ಟ.
* ವಾರದಲ್ಲಿ ಎರಡು ಬಾರಿಕ್ಕೂ ಹೆಚ್ಚು ಬಾರಿ ನಿದ್ದೆ ಸಮಸ್ಯೆ
* ನಿದ್ರಿಸಲು ಔಷಧಿಗಳ ಅಗತ್ಯವಿಲ್ಲ
* ಎದ್ದ ನಂತರ ವಿಶ್ರಾಂತಿಯ ಭಾವನೆ

ಅಧ್ಯಯನದಲ್ಲಿ 1,72,000 ಜನರನ್ನ ನಾಲ್ಕು ವರ್ಷಗಳ ಕಾಲ ನಿದ್ರೆಯ ಗುಣಮಟ್ಟವನ್ನ(sleep quality) ಪರೀಕ್ಷಿಸಲು ಅಧ್ಯಯನ ಮಾಡಲಾಯಿತು. ಐದು ಅಂಶಗಳಲ್ಲಿ ಒಂದು ಅಥವಾ ಯಾವುದರ ಬಗ್ಗೆ ಧನಾತ್ಮಕವಾಗಿರುವ ಪುರುಷರು ಸರಾಸರಿ 4.7 ವರ್ಷಗಳ ಕಾಲ ಬದುಕುತ್ತಾರೆ ಎಂದು ಸಂಶೋಧನೆ ತೋರಿಸಿದೆ. ಅದೇ ಮಹಿಳೆಯರ ವಿಷಯದಲ್ಲಿ, ಸರಾಸರಿ ಜೀವಿತಾವಧಿಯು 2 ರಿಂದ 4 ವರ್ಷಗಳವರೆಗೆ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.

ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ನಿದ್ರೆಯನ್ನ ಸುಧಾರಿಸಲು ಕೆಲವೊಂದು ಕೆಲಸಗಳನ್ನ ಮಾಡುವುದರಿಂದ ಗುಣಮಟ್ಟ ಮತ್ತು ದೀರ್ಘಾಯುಷ್ಯ ಎರಡೂ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ಬನ್ನಿ ಆ ಕೆಲಸಗಳು ಯಾವುದು ಎಂದು ತಿಳಿಯೋಣ.

ದಿನಕ್ಕೆ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಿ:
ಚೆನ್ನಾಗಿ ನಿದ್ದೆ ಮಾಡಲು, ಪ್ರತಿದಿನ ಒಂದೇ ಸಮಯದಲ್ಲಿ ಮಲಗಿಕೊಳ್ಳಿ ಮತ್ತು ಏಳಿಕೊಳ್ಳಿ. ಮಲಗುವ ಮುನ್ನ ಕಂಪ್ಯೂಟರ್ ಮತ್ತು ಸೆಲ್ ಫೋನ್ ಪರದೆಗಳಿಂದ ಬರುವ ನೀಲಿ ಬೆಳಕನ್ನ ನೋಡುವುದನ್ನ ನಿಲ್ಲಿಸಬೇಕು. ಹಾಗೆಯೇ ಬೆಳಿಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತುಕೊಳ್ಳಿ. ಇದು ಉತ್ತಮ ನಿದ್ರೆಯನ್ನ ಉತ್ತೇಜಿಸುತ್ತದೆ. ಇದರಿಂದ ದೇಹಕ್ಕೆ ವಿಟಮಿನ್-ಡಿ ಸಿಗುತ್ತದೆ. ಇದು ಉತ್ತಮ ನಿದ್ರೆಯನ್ನ ಉತ್ತೇಜಿಸುತ್ತದೆ.ಇದರ ಜೊತೆಗೆ, ಹೆಚ್ಚಿನ ಶೇಕಡಾವಾರು ಕೆಫೀನ್ ಹೊಂದಿರುವ ಚಹಾ ಮತ್ತು ಕಾಫಿಯನ್ನ ಮಧ್ಯಾಹ್ನದ ನಂತರ ಸೇವಿಸಬಾರದು.

ವ್ಯಸನಗಳನ್ನ ತಪ್ಪಿಸಿ:
ನಿದ್ದೆಯಿಲ್ಲದೇ ಮಧ್ಯರಾತ್ರಿಯವರೆಗೆ ವ್ಯಸನಗಳಿಗೆ ಬಲಿಯಾಗುವುದನ್ನು ತಪ್ಪಿಸಿ. ಅವುಗಳನ್ನ ಬಿಡಲು ನಿಮ್ಮ ಕೈಲಾದಷ್ಟು ಕೆಲಸ ಮಾಡಿ.

ಕೊಠಡಿಯನ್ನ ಕತ್ತಲೆಯಲ್ಲಿಡಿ:
ಕತ್ತಲಿನ ರೂಮ್ ನಲ್ಲಿ ಮಲಗುವುದರಿಂದ ಒಳ್ಳೆಯ ನಿದ್ದೆಯನ್ನು ಮಾಡಬಹುದು. ಹಾಗೆಯೇ ಕಪ್ಪು ಪರದೆಗಳನ್ನ ಬಳಸಿ. ಮುಖ್ಯವಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನ ಸೈಲೆಂಟ್ ಮೋಡ್‌ನಲ್ಲಿ ಇರಿಸಿ.

ನಿದ್ದೆ ಮಾತ್ರೆ ಬಳಸದಿರಿ:
ನಿದ್ದೆಗಾಗಿ ಮಾತ್ರೆಗಳನ್ನ ಬಳಸಬೇಡಿ. ಹೀಗೆ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ಬದಲು ನಿದ್ರೆಯ ಮಾದರಿಗಳನ್ನ ಟ್ರ್ಯಾಕ್ ಮಾಡಲು ಮತ್ತು ನಿರ್ಣಯಿಸಲು ಸ್ಲೀಪ್ ಟ್ರ್ಯಾಕರ್ ಬಳಸಿ.

ಇದನ್ನೂ ಓದಿ: SBI ಬ್ಯಾಂಕಿನಲ್ಲಿ FD ಖಾತೆ ತೆರೆಯಬಹುದೇ? ಅಥವಾ ಅಂಚೆ ಕಚೇರಿಗಳಲ್ಲಿ? ಯಾವುದು ಬೆಸ್ಟ್​?

Leave A Reply

Your email address will not be published.