Aadhar Card Update: ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಬೇಕಾ? ಈ ವಿಧಾನ ಅನುಸರಿಸಿ!

Aadhar Card Update: ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ ನೀಡುವ ಉದ್ದೇಶದಿಂದ ಯುಐಡಿಎಐ Uiಇದನ್ನು ಸ್ಥಾಪಿಸಿದ್ದು, ಹೀಗಾಗಿ ಯುಐಡಿ ಮೂಲಕ ಅಸಲಿ ಹಾಗೂ ನಕಲಿ ಗುರುತನ್ನು ಸುಲಭವಾಗಿ ಪರಿಶೀಲನೆ ಮಾಡಬಹುದಾಗಿದೆ. ಆಧಾರ್ 12-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಇದನ್ನು ಗುರುತಿನ ಉದ್ದೇಶಗಳಿಗಾಗಿ ಭಾರತ ಸರ್ಕಾರವು ಹೊರತಂದಿದ್ದು ತಿಳಿದಿರುವ ವಿಚಾರವೇ!!.. ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ.

ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ, ಫೋಟೋ ಬದಲಿಸಬೇಕು ಎಂದರೆ ಏನು ಮಾಡಬೇಕು? ಆಧಾರ್ ನಲ್ಲಿ ಏನೆಲ್ಲ ಅಪ್ಡೇಟ್(Aadhar Card Update) ಮಾಡಬಹುದು? ಹೀಗೆ ಅನೇಕ ಗೊಂದಲಗಳು ಕಾಡುವುದು ಸಹಜ. ಈ ಕುರಿತ ಮಾಹಿತಿ ಇಲ್ಲಿದೆ.

ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
ಆಧಾರ್ ನಲ್ಲಿ ವೈಯಕ್ತಿಕ ಮಾಹಿತಿಗಳನ್ನು ನವೀಕರಿಸಲು ಎರಡು ಮಾರ್ಗಗಳಿದ್ದು, ಒಂದು ಸಮೀಪದ ಆಧಾರ್ ಸೇವಾ ಇಲ್ಲವೇ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾಡಬಹುದು. uidai.gov.in ವೆಬ್ ಸೈಟ್ ನಲ್ಲಿ ‘Locate an Enrolment Center’ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಸಮೀಪದ ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಇದರ ಜೊತೆಗೆ myAadhaar ಅಪ್ಲಿಕೇಷನ್ ಬಳಸಿ ಕೂಡ ಈ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು. ಆಧಾರ್ ನಲ್ಲಿ ವಿಳಾಸ ಅಪ್ಡೇಟ್ (update) ಮಾಡುವ ಸಲುವಾಗಿ ಯುಐಡಿಎಐ ಅಧಿಕೃತ ವೆಬ್ ಸೈಟ್ (website) ಇಲ್ಲವೇ ಆಧಾರ್ ನೋಂದಣಿ ಕೇಂದ್ರಕ್ಕೆ ಬೇಟಿ ನೀಡಬೇಕು.ಆಧಾರ್ ನಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಸಂಬಂಧದ ಸ್ಟೇಟಸ್ ಅನ್ನು ಅಪ್ಡೇಟ್ ಮಾಡಬಹುದು. ಅದೇ ರೀತಿ, ಕಣ್ರೆಪ್ಪೆ, ಬೆರಳಚ್ಚು ಹಾಗೂ ಮುಖದ ಫೋಟೋ ಕೂಡ ಅಪ್ಲೋಡ್ ಮಾಡಬಹುದು. ಇನ್ನು ಅಪ್ಡೇಟ್ (update) ಗಾಗಿ ವಿಳಾಸ ದೃಢೀಕರಣ ದಾಖಲೆಯನ್ನು ನೀಡಬೇಕಾಗುತ್ತದೆ. ಕೆಲವು ದಿನಗಳ ಬಳಿಕ ಆಧಾರ್ ನಲ್ಲಿ ನಿಮ್ಮ ವಿಳಾಸ ಅಪ್ಡೇಟ್( update) ಆಗಿರುವುದನ್ನು ಗಮನಿಸಬಹುದು.

ನೋಂದಣಿ ಕೇಂದ್ರಕ್ಕೆ ಹೋಗದೆ ವಿಳಾಸವನ್ನು ಅಪ್ಡೇಟ್ (update) ಮಾಡಲು ಸಾಧ್ಯವಿದೆ. ನೀವು ಆನ್ ಲೈನ್ (online) ಮೂಲಕ ಮಾಹಿತಿ ನವೀಕರಣ ಮಾಡಬಹುದಾಗಿದ್ದು, ಹೊಸ ಸ್ಥಳಗಳಿಗೆ ಬಂದಾಗ, ಮದುವೆಯ ನಂತರ ವಿಳಾಸ ಬದಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ ಈ ಮಾಹಿತಿಯನ್ನು ಆನ್ ಲೈನ್ ಮೂಲಕ ಕೂಡ ಅಪ್ಡೇಟ್ (update) ಮಾಡಬಹುದು.

ಫೋಟೋ ಬದಲಾಯಿಸುವ ವಿಧಾನ ಹೀಗಿದೆ:
ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾಯಿಸಲು ನೀವು ಸಮೀಪದ ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲವೇ https://appointments.uidai.gov.in ವೆಬ್ ಸೈಟ್ ನಲ್ಲಿ ಕೂಡ ನೀವು ಸಮೀಪದ ಆಧಾರ್ ನೋಂದಣಿ ಕೇಂದ್ರದ ಮಾಹಿತಿ ಪಡೆಯಬಹುದು.

ಆಧಾರ್ ಕಾರ್ಡ್ ನಲ್ಲಿ ಕೆಲವು ಮಾಹಿತಿಗಳನ್ನು ಆನ್ ಲೈನ್ ನಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲಾಗಿದ್ದು, ಆದರೆ, ಫೋಟೋ ಬದಲಾವಣೆ ಮಾಡಲು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಲೇ ಬೇಕಾಗುತ್ತದೆ.
• ಮೊದಲಿಗೆ ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆಗೆ ಸಂಬಂಧಿಸಿದ ಅರ್ಜಿ ಭರ್ತಿ ಮಾಡಿಕೊಂಡು ನೋಂದಣಿ ಕೇಂದ್ರಕ್ಕೆ ಸಲ್ಲಿಸಬೇಕು.
• ಈ ಕೇಂದ್ರದಲ್ಲಿರುವ ನಿರ್ವಾಹಕರು ನೀವು ನೀಡಿರುವ ಅರ್ಜಿಯಲ್ಲಿರುವ ಮಾಹಿತಿಯ ಅನುಸಾರ ಬಯೋಮೆಟ್ರಿಕ್ ಮೂಲಕ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.
• ನೀವು ಈ ಅರ್ಜಿಯಲ್ಲಿ ಫೋಟೋ ಬದಲಾವಣೆ ಬಗ್ಗೆ ಉಲ್ಲೇಖ ಮಾಡಿದ್ದರೆ ನಿರ್ವಾಹಕರು ನಿಮ್ಮ ಫೋಟೋವನ್ನೂ ತೆಗೆಯುತ್ತಾರೆ.
• ಅಪ್ಡೇಟ್ ಮನವಿ ಸಂಖ್ಯೆ (URN) ಹೊಂದಿರುವ ಸ್ವೀಕೃತಿ ಸ್ಲಿಪ್ ಅನ್ನು ರೆಫರೆನ್ಸ್ ಗಾಗಿ ಸೃಷ್ಟಿ ಮಾಡಲಾಗುತ್ತದೆ.

• ಫೋಟೋ ಅಪ್ಡೇಟ್ ಮಾಡಿದ ನಂತರ ನೀವು ಆಧಾರ್ ಕಾರ್ಡ್ ಡಿಜಿಟಲ್ (ಇ-ಆಧಾರ್) ಪ್ರತಿಯನ್ನು UIDAI ಅಧಿಕೃತ ವೆಬ್ ಸೈಟ್ uidai.gov.in ಮೂಲಕ ಡೌನ್ಲೋಡ್ ಮಾಡಬಹುದು.

 

ಇದನ್ನು ಓದಿ: Personal Finance: ಮೇ.1 ರಿಂದ ಆಗಲಿದೆ ಹಲವು ಹಣಕಾಸು ನಿಯಮಗಳಲ್ಲಿ ಬದಲಾವಣೆ, ಆಗುತ್ತಾ ಗ್ಯಾಸ್ ಸಿಲಿಂಡರ್ ದರದಲ್ಲಿ ಕಡಿತ ?! 

Leave A Reply

Your email address will not be published.