Bengaluru Reva College: ಕಾಲೇಜು ಫೆಸ್ಟ್ ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ! ವಿದ್ಯಾರ್ಥಿಯ ಭೀಕರ ಕೊಲೆ!!!

Bengaluru Reva College: ಶಾಲಾ ಕಾಲೇಜು ಎಂದು ಕೂಡ ಲೆಕ್ಕಿಸದೆ ಶಾಲಾ ವಠಾರದಲ್ಲಿ ರಕ್ತದ ಓಕುಳಿ ಚೆಲ್ಲಿದೆ. ಹೌದು, ಶಿಕ್ಷಣ, ಕ್ರೀಡೆ ಮತ್ತು ಮನೋರಂಜನೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಪ್ರಸಿದ್ಧಿಯನ್ನು ಹೊಂದಿರುವ ಕಾಲೇಜಿನ ಕಾರ್ಯಕ್ರಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿಯ ಕೊಲೆ ನಡೆದಿದೆ. ಗಲಾಟೆಯೂ ಕ್ಷುಲ್ಲಕ ಕಾರಣಕ್ಕೆ ಆರಂಭವಾಗಿದ್ದು, ವಿದ್ಯಾರ್ಥಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನ ರೇವಾ ಕಾಲೇಜಿನಲ್ಲಿ (Bengaluru Reva College) ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರತಿ ವರ್ಷದ ಆಚರಣೆಯಂತೆ ಶುಕ್ರವಾರ ರಾತ್ರಿ (ಏ.28ರಂದು) ಕಾಲೇಜು ಫೆಸ್ಟ್‌ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿಜೃಂಭಣೆಯಿಂದ ಕಾಲೇಜು ಉತ್ಸವ ನಡೆಯುತ್ತಿರುವ ವೇಳೆಯಲ್ಲೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರು ಮಾಡಿದ್ದ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಹೀಗೆ ತೀವ್ರ ವಿಕೋಪಕ್ಕೆ ತಿರುಗಿದ ಗಲಾಟೆಯಲ್ಲಿ ವಿದ್ಯಾರ್ಥಿಗಳ ಒಂದು ಗುಂಪು ಭಾಸ್ಕರ್ ಶೆಟ್ಟಿಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

ಕೊಲೆಯಾದ ವಿದ್ಯಾರ್ಥಿ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ (22) ರೇವಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಓದುತ್ತಿದ್ದನು ಎಂದು ಮಾಹಿತಿ ದೊರಕಿದೆ. ಸದ್ಯ ಭಾಸ್ಕರ್ ಜೆಟ್ಟಿ ಹತ್ಯೆ ಆಗಿರುವ ವಿಚಾರ ಪೋಷಕರಿಗೆ ತಿಳಿಸಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ತಿಳಿದ ಕೂಡಲೇ ರೇವಾ ಕಾಲೇಜಿನ ಸ್ಥಳಕ್ಕೆ ಬಾಗಲೂರು ಪೊಲೀಸರು ಆಗಮಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಲೇಜು ಫೆಸ್ಟ್‌ ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ. ಈಗ ಅನುಮಾನಸ್ಪದ ಯುವಕರನ್ನ ವಶಕ್ಕೆ ಪಡೆದಿರುವ ಬಾಗಲೂರು ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸದ್ಯ ಕಾಲೇಜಿನಲ್ಲಿರುವ ಸಿಸಿಟಿವಿ ಪರಿಶೀಲನೆ ಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪುತ್ತೂರು: ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ಆತ್ಮಹತ್ಯೆ!

Leave A Reply

Your email address will not be published.