ATM – Anytime Liquor Machine: ಮದ್ಯ ಖರೀದಿಗೂ ಬಂತು ಎಟಿಎಂ – ಎನಿಟೈಮ್ ಲಿಕ್ಕರ್ ಮೆಷಿನ್ ..!
ATM – Anytime Liquor Machine: ಮದ್ಯ ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ. ಕಿಕ್ಕೇರಿಸೋ ಎಣ್ಣೆ ಖರೀಸೋದಕ್ಕೆ ಎಲ್ಲೆಂದರಲ್ಲಿ ಕಾಯಲೇ ಬೇಕಾಗಿಲ್ಲ. ಇಲ್ಲೊಂದೆಡೆ ಮದ್ಯಕ್ಕೂ ಬಂದಿದೆ ಎಟಿಎಂ ರೀತಿಯಲ್ಲಿ ಕಾರ್ಯನಿರ್ವಹಿಸುವ ಯಂತ್ರ ಅರೇ ಏನ್ ಹೇಳ್ತಿದ್ದಾರೆ ಅಂದಾ ಯೋಚ್ನೆ ಮಾಡ್ತಿದ್ದೀರಾ? ಇದು ನಿಜ.
ATM ಎಂದರೆ ಸ್ವಯಂಚಾಲಿತ ಟೆಲ್ಲರ್ ಮಿಷನ್. ಎಟಿಎಂನನ್ನು ಹೆಚ್ಚಾಗಿ ನಾವು ಹಣವನ್ನು ಪಡೆಯೋದಕ್ಕೆ ಬಳಕೆ ಮಾಡುವುದು ಎಲ್ಲರಿಗೂ ತಿಳಿದಿರೋ ವಿಚಾರವಾಗಿದೆ. ಇದೀಗ ಎಟಿಎಂ ಮಿಷನ್ ಗಳ ಮೂಲಕ ಇಡ್ಲಿ ಲಭ್ಯವಾಗುವುದನ್ನು ಬಹಳ ದಿನಗಳ ಹಿಂದೆಯೇ ಕೇಳಿರಬಹುದು ಅಥವಾ ಲೇಖನಗಳ ಮೂಲಕ ಓದಿರಬಹುದು ಇದೀಗ ಇಂತಹದ್ದೇ ಮಾದರಿಯ ಎನಿಟೈಮ್ ಲಿಕ್ಕರ್ ಮೆಷಿನ್ (ATM – Anytime Liquor Machine) ಆರಂಭವಾಗಿದೆ ಅರೇ ಎಲ್ಲಿ ಅಂತಾ ಯೋಚನೆ ಮಾಡ್ತಿದೀರಾ ಇಲ್ಲಿದೆ ಓದಿ…
ಹೌದು ಎನಿಟೈಮ್ ಲಿಕ್ಕರ್ ಮೆಷಿನ್ (ATM) ಆರಂಭಗೊಂಡಿದ್ದು ತಮಿಳುನಾಡಿನಲ್ಲಿ ಎಂದು ವರದಿಯಾಗಿದೆ. ಮದ್ಯ ಮಾರಾಟ ಯಂತ್ರವನ್ನ ಮೊದಲ ಬಾರಿಗೆ ಅಣ್ಣಾನಗರದಲ್ಲಿ ಚೆನ್ನೈ ನಗರದ ಮಾಲ್‌ನಲ್ಲಿರುವ ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (TASMAC) ಅಂಗಡಿಯಲ್ಲಿ ವಿಶೇಷ ಸ್ಥಾಪನೆ ಮಾಡಲಾಗಿದೆ.
ಹೇಗೆ ಕಾರ್ಯ ನಿರ್ವಹಣೆ :
ಯಾವುದೇ ಸಮಯದಲ್ಲಿ ಹಾಲ್ಕೋಹಾಲ್ ಖರೀದಿಸಬಹುದು.
ATMನಂತೆ ಕೆಲಸ ಮಾಡುವ ಎನಿಟೈಮ್ ಲಿಕ್ಕರ್ ಮೆಷಿನ್ ಆಗಿದೆ
ಮೊದಲಿಗೆ ಬ್ರಾಂಡ್’ಗಳಿಂದ ಬೇಕಾದ ಬ್ರಾಂಡ್ ಆಯ್ಕೆ ಮಾಡಿಕೊಳ್ಳಬೇಕು
ಯಂತ್ರವು ಬ್ರಾಂಡ್’ಗಳಿಗೆ ತಕ್ಕಂತಹ ತನ್ನ ಬೆಲೆಯನ್ನ ತೋರಿಸುತ್ತದೆ.
ಮೊತ್ತವನ್ನುಆನ್‌ಲೈನ್ ಮೂಲಕ ಪಾವತಿಯನ್ನು ಮಾಡಬಹುದಾಗಿದೆ.
ಮದ್ಯದ ಬಾಟಲಿಯು ಯಂತ್ರದ ಕೆಳಗಿನಿಂದ ಹೊರಬರುತ್ತದೆ.
ಈ ಹೊಸ ತಂತ್ರಜ್ಞಾನಕ್ಕೆ ತಮಿಳುನಾಡು ಸರಕಾರ ಜಾರಿಗೆ ತಂದಿದಲ್ಲದೇ ಇನ್ನಷ್ಟು ಯಂತ್ರಗಳನ್ನ ಸ್ಥಾಪಿಸಲು ಮುಂದಾಗಿದೆ. ಇದರಿಂದ ಆರಾಮದಾಯಕವಾಗಿ ಮದ್ಯ ಪ್ರಿಯರು ತನ್ನ ನೆಚ್ಚಿ ಮದ್ಯವನ್ನು ಆಯ್ಕೆ ಮಾಡಬಹುದು ತಿಳಿದು ಬಂದಿದೆ.
A liquor vending machine that has been introduced by Tasmac in Chennai. This is at an Elite Shop inside a mall @THChennai pic.twitter.com/gZlb1D3Gnt
— Sangeetha Kandavel (@sang1983) April 28, 2023
ಇದನ್ನು ಓದಿ: Depression in women: ಖಿನ್ನತೆಯು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ..! ಕಾರಣವೇನು ಗೊತ್ತಾ? ಇಲ್ಲಿದೆ ಓದಿ