Infosys Sudhamurthy: ನನ್ನಿಂದ ಗಂಡ ಉದ್ಯಮಿ ಆದಂತೆ, ಮಗಳಿಂದ ಅಳಿಯ ಪ್ರಧಾನಿ ಆದ ! ಬದುಕಿನ ಗುರುವಾರಗಳ ಕಥೆ ಹೇಳಿದ ಸುಧಾ ಮೂರ್ತಿ!

Infosys Sudhamurthy: ತಮ್ಮ ಸರಳ ವ್ಯಕ್ತಿತ್ವ, ಅದೇ ರೀತಿಯ ನಡೆ-ನುಡಿಗಳಿಂದ ಕನ್ನಡಿಗರ ಜನಮಾನಸದಲ್ಲಿ ಉಳಿದಿರುವ, ಸದಾ ಎಲ್ಲರ ಮನೆ ಮಾತಾಗಿಯುವ, ತಮ್ಮ ಮಾನವೀಯ ಕಾರ್ಯಗಳಿಂದಾಗಿ ದೇಶಾದ್ಯಂತ ತಮ್ಮದೇ ಆದಂತಹ ಅಭಿಮಾನಿ ವರ್ಗವನ್ನು ಹೊಂದಿರುವವರು ಇನ್‌ಫೋಸಿಸ್(Infosys Sudhamurthy) ಪ್ರತಿಷ್ಠಾನದ ಸುಧಾಮೂರ್ತಿ(Sudhamurthy) ಅವರು ಏನೇ ಮಾತನಾಡಿದರು ಅದಕ್ಕೊಂದು ಅರ್ಥವಿರುತ್ತದೆ. ಅಲ್ಲದೆ ಆ ಕೂಡಲೇ ಅದು ವೈರಲ್ ಆಗಿ ಜನರ ಮನ್ನಣೆಗೂ ಪಾತ್ರವಾಗುತ್ತದೆ. ಅಂತೆಯೇ ಇದೀಗ ಎಲ್ಲರ ಪ್ರೀತಿಯ ಸುದಮ್ಮ ತಮ್ಮ ಜೀವನದಲ್ಲಿ ಗುರುವಾರದ ವಿಶೇಷತೆಯನ್ನು ವಿವರಿಸಿ ಆಡಿರೋ ಮಾತುಗಳು ಸಾಕಷ್ಟು ವೈರಲ್ ಆಗುತ್ತಿದೆ.

ಹೌದು, ಬ್ರಿಟನ್‌ನ(Britain) ಅತಿ ಕಿರಿಯ ಪ್ರಧಾನಿ ಎನಿಸಿರುವ ರಿಷಿ ಸುನಕ್(Rishi Sunak) ಅವರು ತಮ್ಮ ಮಗಳಿಂದಾಗಿ ಆ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಅತ್ತೆ ಸುಧಾಮೂರ್ತಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾನು ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದೆ. ಆದರೆ ನನ್ನ ಮಗಳು ತನ್ನ ಗಂಡನನ್ನು ಪ್ರಧಾನಿಯನ್ನಾಗಿ ಮಾಡಿದಳು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಮಗಳು ಅಕ್ಷತಾ ಮೂರ್ತಿ ಮತ್ತು ಅಳಿಯ ರಿಷಿ ಸುನಕ್ ಅವರ ಕುರಿತು ಹೇಳುವ ವಿಡಿಯೋ ವೈರಲ್ ಆಗಿದೆ.

ಅಂದಹಾಗೆ ಸುಧಾಮೂರ್ತಿಯವರ ಕುಟುಂಬ ಮಂತ್ರಾಲಯ ರಾಘವೇಂದ್ರ ರಾಯರ ದೊಡ್ಡ ಭಕ್ತರು. ಹೀಗಾಗಿ ಅವರ ಮನೆಯಲ್ಲಿ ಏನೇ ಹೊಸದು ಮಾಡುವುದಿದ್ದರೂ ಗುರುವಾರ ಮಾಡುತ್ತಾರಂತೆ. ಬಗ್ಗೆ ಸುಧಾಮೂರ್ತಿಯವರನ್ನು ಮಾತುಗಾರರೊಬ್ಬರು ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು ಹೌದು, ನಾರಾಯಣಮೂರ್ತಿಯವರು ಇನ್‌ಫೋಸಿಸ್ ಶುರು ಮಾಡಿದ್ದು, ಗುರುವಾರ, ಅಷ್ಟೇ ಅಲ್ಲ ನಮ್ಮ ಮಗಳನ್ನು ಲಗ್ನ ಆದ ಮೇಲೆ ನಮ್ಮ ಅಳಿಯ ( ರಿಷಿ ಸುನಕ್ ಪ್ರಸ್ತುತ ಇಂಗ್ಲೆಂಡ್ ಪ್ರಧಾನಿ) ಗುರುವಾರ ಉಪವಾಸ ಮಾಡುತ್ತಾನೆ. ಅವನು ಪಂಜಾಬಿ, ನೂರುನೂರೈವತ್ತು ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ನೆಲೆಸಿದವರು, ಆತನೂ ಬಹಳ ಧಾರ್ಮಿಕ ವ್ಯಕ್ತಿಯಾಗಿದ್ದಾನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಅಲ್ಲದೆ “ಆತ ಮಗಳನ್ನು ವಿವಾಹವಾದ ನಂತರ ನಿಮ್ಮ ಮನೆಯಲ್ಲಿ ಏನೇ ಮಾಡುವುದಿದ್ದರೂ ಒಟ್ಟು ಗುರುವಾರವೇ ಶುರು ಮಾಡುತ್ತಿರಲ್ಲ, ಯಾಕೆ? ಎಂದು ಒಂದು ಬಾರಿ ಕೇಳಿದ್ದ. ಅದಕ್ಕೆ ನಾವು ಗುರು ರಾಘವೇಂದ್ರ ಸ್ವಾಮಿಗಳ ಭಕ್ತರು ಎಂದು ಆತನಿಗೆ ಹೇಳಿದೆ. ಇದಾದ ಬಳಿಕ ಆತನೂ Thursday is the good day (ಗುರುವಾರ ಒಳ್ಳೆಯ ದಿನ) ಎಂದು ಪ್ರತಿ ಗುರುವಾರ ಉಪವಾಸ ಮಾಡುತ್ತಾನೆ. ನನ್ನ ಅಳಿಯನ ತಾಯಿ ಸೋಮವಾರ ಉಪವಾಸ ಮಾಡಿದರೆ ಅಳಿಯ ಗುರುವಾರ ಉಪವಾಸ ಮಾಡುತ್ತಾನೆ ಇದು ಹೆಂಡ್ತಿ ಮಹಿಮೆ” ಎಂದು ಸುಧಾಮೂರ್ತಿಯವರು ತಮಾಷೆಯಾಗಿ ಹೇಳಿದ್ದಾರೆ.

ಮತ್ತೆ ಮಾತನಾಡಿದ ಅವರು “ಹೆಂಡತಿ ಗಂಡನನ್ನು ಹೇಗೆ ಬದಲಿಸಬಹುದು ನೋಡಿ. ನನಗೆ ಮಾತ್ರ ನನ್ನ ಯಜಮಾನರನ್ನು ಬದಲಿಸಲು ಆಗಲಿಲ್ಲ. ಆಕೆ ತನ್ನ ಗಂಡನನ್ನು ಬದಲಿಸಿದಳು (ಆಹಾರದ ವಿಚಾರದಲ್ಲಿ). ನಾನು ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದೆ. ಆಕೆ ತನ್ನ ಗಂಡನನ್ನು ಪ್ರೈಮ್ ಮಿನಿಸ್ಟರ್ ಮಾಡಿದಳು” ಎಂದು ತಮಾಷೆಯಾಗಿ ಹೇಳಿದ್ದಾರೆ. ಆಗ ಅಲ್ಲಿದ್ದವರು ಚಪ್ಪಾಳೆ ತಟ್ಟಿ ನಕ್ಕಿದ್ದಾರೆ.

ಇನ್ನು ರಿಷಿ ಸುನಕ್ 2009ರಲ್ಲಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದು, 2022ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇಂಗ್ಲೆಂಡ್‍ನ ಆಧುನಿಕ ಇತಿಹಾಸದಲ್ಲಿ ಅವರು 42ನೇ ವಯಸ್ಸಿನಲ್ಲಿ ಪ್ರಧಾನಿಯಾದ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. ಪ್ರಧಾನಿಯಾಗುವ ಮೊದಲು ಏಳು ವರ್ಷ ಸಂಸದರಾಗಿ ರಿಷಿ ಸುನಾಕ್ ಕೆಲಸ ಮಾಡಿದ್ದರು.

 

 

ಇದನ್ನು ಓದಿ: Dr. G. Parameshwar: ತುಮಕೂರು ಪ್ರಚಾರ ವೇಳೆ ಡಾ ಜಿ ಪರಮೇಶ್ವರ್​ ಮೇಲೆ ಕಲ್ಲೆಸೆತ ; ಗಂಭೀರ ಗಾಯ ಆಸ್ಪತ್ರೆಗೆ ದಾಖಲು 

Leave A Reply

Your email address will not be published.