Viral painting: ಅಯ್ಯೋ ಏನಿದು ಆಶ್ಚರ್ಯ! 150 ವರ್ಷ ಹಳೆಯ ಪೇಂಟಿಂಗ್​ನಲ್ಲಿರೋ ಹುಡುಗಿಯ ಕೈಲಿ ಸ್ಮಾರ್ಟ್​ಫೋನ್! ಶತಮಾನಗಳ ಹಿಂದೆಯೇ ಮೊಬೈಲ್ ಬಳಕೆ ಇತ್ತಾ?

Viral painting: ಅಬ್ಬಬ್ಬಾ ಏನಿದು ಆಶ್ಚರ್ಯ! ಮೊಬೈಲ್ ಫೋನ್ ಕಂಡು ಹಿಡಿದು ಮೊನ್ನೆ ಮೊನ್ನೆಗೆ 50 ವರ್ಷಗಳಾದವು ಎಂಬ ವಿಚಾರವನ್ನು ನಾವೆಲ್ಲರೂ ನೋಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲೊಂದೆಡೆ ಸುಮಾರು 150 ವರ್ಷಗಳ ಹಿಂದಿನ ಪೇಂಟಿಂಗ್​ ಒಂದರಲ್ಲಿರುವ ಹುಡುಗಿಯೊಬ್ಬಳು ಕೈಯಲ್ಲಿ ಸ್ಮಾರ್ಟ್​ಫೋನ್​ ಹಿಡಿದಿದ್ದಾಳೆ! ಈ ಚಿತ್ರಪಟವನ್ನು ನೋಡಿ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ.

ಬಹುಶಃ ಅಂದು ಸ್ಮಾರ್ಟ್​ಫೋನ್ ಹಾಗಿರಲಿ ಲ್ಯಾಂಡ್​ಲೈನ್ ಕೂಡ ಇರದ ಕಾಲವದು. ಆ ವೇಳೆ ಅಂದರೆ ಸುಮಾರು 150 ವರ್ಷಗಳ ಹಿಂದೆ ಚಿತ್ರಿಸಲಾದ ಪೇಂಟಿಂಗ್ ಒಂದು ಇದೀಗ ಭಾರಿ ಸುದ್ಧಿಯಲ್ಲಿದೆ. ಯಾಕೆಂದರೆ ಆ ಪೇಂಟಿಂಗ್​ನಲ್ಲಿದ್ದ ಹುಡುಗಿಯ ಕೈಯಲ್ಲಿ ಸ್ಮಾರ್ಟ್​ಫೋನ್ (Viral painting)​ ಇರುವುದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಹೌದು, ಜರ್ಮನಿಯ ಮ್ಯೂನಿಚ್‌ನಲ್ಲಿರುವ ನ್ಯೂ ಪಿನಾಕೊಥೆಕ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ, 1860 ರಲ್ಲಿ ಫರ್ಡಿನಾಂಡ್ ಜಾರ್ಜ್ ವಾಲ್ಡ್‌ಮುಲ್ಲರ್ ರಚಿಸಿರುವ, ದಿ ಎಕ್ಸ್‌ಪೆಕ್ಟೆಡ್ ಒನ್ ಪೇಂಟಿಂಗ್ ಅಲ್ಲಿ ಹುಡುಗಿಯೊಬ್ಬಳು ಸ್ಮಾರ್ಟ್‌ಫೋನ್ ನೋಡುತ್ತಾ ನಡೆದುಕೊಂಡು ಹೋಗುತ್ತಿದ್ದಾಳೆ, ಅಲ್ಲಿಯ ಪರಿಸರ, ಆಕೆಯ ಬಟ್ಟೆ ಎಲ್ಲವೂ ಹಳೆಯದೇ ಆದರೆ ಕೈಯಲ್ಲಿ ಮಾತ್ರ ಸ್ಮಾರ್ಟ್​ಫೋನ್ ಇದೆ. ಈ ಫೋಟೊ 150 ವರ್ಷ ಹಳೆಯದು.

ಮೊದಲ ಬಾರಿಗೆ ಈ ಪೇಂಟಿಂಗ್ 2017 ರಲ್ಲಿ ಎಲ್ಲರ ಕಣ್ಣಿಗೆ ಬಿದ್ದಿತ್ತು ಮತ್ತು ಅದರ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮತ್ತೊಮ್ಮೆ ಈ ಚಿತ್ರವು ಅದರ ವಿಚಿತ್ರ ಅಂಶದಿಂದಾಗಿ ಚರ್ಚೆಯಲ್ಲಿದೆ. ಫೋಟೋದಲ್ಲಿ, ಮಹಿಳೆಯೊಬ್ಬರು ಫುಟ್‌ಪಾತ್‌ನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಅದರ ಸುತ್ತಲೂ ಅನೇಕ ಮರಗಳು ಮತ್ತು ಸಸ್ಯಗಳಿವೆ ಮತ್ತು ಪರ್ವತಗಳು ಸಹ ಹಿಂದೆ ಗೋಚರಿಸುತ್ತವೆ.

ಮುಂದೆ, ಪ್ರೇಮಿ ಕೈಯಲ್ಲಿ ಹೂವುಗಳೊಂದಿಗೆ ನೆಲದ ಮೇಲೆ ಮಂಡಿಯೂರಿ ಅವಳಿಗಾಗಿ ಕಾಯುತ್ತಿದ್ದಾನೆ. ಆದರೆ ಅಚ್ಚರಿಯ ವಿಷಯವೆಂದರೆ, ಜನರು ಸ್ಮಾರ್ಟ್ ಫೋನ್ ಎಂದು ಪರಿಗಣಿಸುತ್ತಿರುವುದನ್ನು ಮಹಿಳೆ ತನ್ನ ಎರಡೂ ಕೈಗಳಲ್ಲಿ ಹಿಡಿದಿದ್ದಾಳೆ. ಇಂದಿನ ಕಾಲಘಟ್ಟದಲ್ಲಿ ಜನರು ಬೀದಿಯಲ್ಲಿ ನಡೆಯುವಾಗಲೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಲೇ ಇರುವಂತೆ ಅವರ ಕಣ್ಣುಗಳು ಅದರ ಮೇಲೆಯೇ ನೆಟ್ಟಿವೆ. ಅಲ್ಲದೆ ಅವರು ಈ ಕಾಲ್ಪನಿಕ ಪರಿಕಲ್ಪನೆಯನ್ನು ನಿಜವೆಂದು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ.

ಏಕೆಂದರೆ ಈ ವರ್ಣ ಚಿತ್ರವನ್ನು ಜನರು ವೀಕ್ಷಿಸಲು ಪ್ರಾರಂಭಿಸಿದಾಗಿನಿಂದ ಎಲ್ಲರಲ್ಲೂ, ಇದು ಹೇಗೆ ಸಾಧ್ಯ? ಮೊಬೈಲ್ ಬಳಕೆ ಶುರುವಾದದ್ದೇ ಕೇವಲ 50 ವರ್ಷಗಳ ಹಿಂದೆ. ಆದರೆ ಶತಮಾನಗಳಷ್ಟು ಹಳೆಯದಾದ ಈ ಪೇಂಟಿಂಗ್ಅಲ್ಲಿ, ಈ ಬಾಲಕಿ ಮೊಬೈಲ್ ಹಿಡಿದಿದ್ದಾಳಲ್ಲಾ? ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಅಂದಹಾಗೆ ಈ ಚಿತ್ರಕಲೆಯ ಅಸಲಿಯತ್ತೇನು ಗೊತ್ತಾ? ಆದರೆ ಚಿತ್ರಕಲೆಯ ಸತ್ಯವನ್ನು ಅದನ್ನು ಇರಿಸಲಾಗಿರುವ ವಸ್ತುಸಂಗ್ರಹಾಲಯವೇ ಹೇಳಿದೆ. ಹುಡುಗಿಯ ಕೈಯಲ್ಲಿ ದೇವರಿಗೆ ಸಂಬಂಧಿಸಿದ ಪುಸ್ತಕ ಕೈಯಲ್ಲಿದ್ದು ಆಕೆ ಏನೋ ನೋಡುತ್ತಾ ಹೋಗುತ್ತಿದ್ದಾಳೆ. ಈ ಚಿತ್ರಕಲೆಯನ್ನು ಅವರವರ ರೀತಿಯಲ್ಲಿ ಜನರು ಅರ್ಥೈಸಿಕೊಳ್ಳುತ್ತಿದ್ದಾರೆ, ಇಂದಿನ ಕಾಲಕ್ಕೆ ತಕ್ಕಂತೆ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಯಾರ ಗಮನವೂ ಪುಸ್ತಕದ ಕಡೆಗೆ ಹೋಗದೆ ಫೋನ್ ಕಡೆಗೆ ಹೋಗಿದೆ.

 

ಇದನ್ನು ಓದಿ: Boiled Rice in Ration Card: ರೇಷನ್ ಕಾರ್ಡ್ ದಾರರಿಗೆ ಶೀಘ್ರವೇ ರೇಷನ್ ಜೊತೆ ಕುಚ್ಚಲಕ್ಕಿ ವಿತರಣೆ!

Leave A Reply

Your email address will not be published.