Home Health Rising Heatwave: ಏರುತ್ತಿರುವ ತಾಪಮಾನ, ಮಾರ್ಗಸೂಚಿ ಬಿಡುಗಡೆ ಮಾಡೇಬಿಡ್ತು ಆರೋಗ್ಯ ಇಲಾಖೆ!!!

Rising Heatwave: ಏರುತ್ತಿರುವ ತಾಪಮಾನ, ಮಾರ್ಗಸೂಚಿ ಬಿಡುಗಡೆ ಮಾಡೇಬಿಡ್ತು ಆರೋಗ್ಯ ಇಲಾಖೆ!!!

Rising Heatwave
Image source : Etv Bharat

Hindu neighbor gifts plot of land

Hindu neighbour gifts land to Muslim journalist

Rising Heatwave: ಇತ್ತೀಚೆಗೆ ತಾಪಮಾನ ವಿಪರೀತವಾಗಿದ್ದು (Rising Heatwave), ಜನಜೀವನ ಕಷ್ಟಕರವಾಗಿದೆ. ತಾಪಮಾನ ಏರಿಕೆ ಹಾಗೂ ಬಿಸಿಗಾಳಿಯಿಂದ ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಇನ್ನು ಮಕ್ಕಳು (children) , ವೃದ್ಧರು, ಗರ್ಭಿಣಿ (pregnant) ಯರಿಗೆ ಬಿಸಿಲಿನ ಪರಿಣಾಮ ಇತರ ಸಮಸ್ಯೆಗಳು ತಲೆದೋರುತ್ತಿವೆ. ಸಾಮಾನ್ಯವಾಗಿ ಬಿಸಿಗಾಳಿಯಿಂದ ನಿರ್ಜಲೀಕರಣ, ಶಾಖ ಸೆಳೆತ ಹಾಗೂ ಶಾಖಾಘಾತದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ. ಈ ಕಾರಣದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಬಿಸಿಗಾಳಿಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು :
ಶಾಖಾಘಾತ (Heat Stroke) ಅಂದರೆ ದೇಹದ ಉಷ್ಣತೆಯು 104 ಡಿಗ್ರಿಗಿಂತ ಅಥವಾ ಅದಕ್ಕಿಂತ ಹೆಚ್ಚಾಗುವುದು ಹಾಗೂ ಉಸಿರಾಟದಲ್ಲಿ ವ್ಯತ್ಯಯ ಹಾಗೂ ಪ್ರಜ್ಞೆ ತಪ್ಪುವುದಾಗಿದೆ.

ಶಾಖ ಸೆಳೆತ (Heat Cramps) ಅಂದರೆ ಎಡೆರ್ನಾ (ಊತ) ಮತ್ತು ಮೂರ್ಛ ಹೋಗುವುದು. ಸಾಮಾನ್ಯವಾಗಿ 102 ಡಿಗ್ರಿಗಿಂತ ಕಡಿಮೆ ಜ್ವರ ಕಂಡುಬರುವುದಾಗಿದೆ.

ಶಾಖದ ಬಳಲಿಕೆ ಅಂದರೆ ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ, ತಲೆನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವುದು.

ಬಿಸಿಗಾಳಿಯಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಲು ಈ ಕ್ರಮ ಪಾಲಿಸಿ :

ಮದ್ಯಪಾನ, ಕಾಫಿ ಅಥವಾ ಶೇಖರಿಸಿದ ಪಾನೀಯಗಳನ್ನು ಕುಡಿಯುವುದು ಸೂಕ್ತವಲ್ಲ. ಬಿಸಿಗಾಳಿಗೆ ತುತ್ತಾದವರ ಮೈ ಮೇಲೆ ತಂಪಾದ ಬಟ್ಟೆಯನ್ನು ಹಾಕುವ ಮೂಲಕ ದೇಹವನ್ನು ತಂಪಾಗಿಸುವುದು.

ದೇಹಕ್ಕೆ ಗಾಳಿ ಸೋಕುವ ಸಲುವಾಗಿ ಧರಿಸಿರುವ ಬಟ್ಟೆಗಳನ್ನು ಸಡಿಲಗೊಳಿಸುವುದು. ಸಾಧ್ಯವಾದಷ್ಟು ಮಟ್ಟಿಗೆ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೊರ ಹೋಗುವುದನ್ನು ತಪ್ಪಿಸುವು
ಮುಖ್ಯವಾಗಿ ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯುವುದು. ಹಗುರವಾದ, ಸಡಿಲವಾದ ತಿಳಿಬಣ್ಣದ ಹಾಗೂ ಹತ್ತಿ ಬಟ್ಟೆಗಳನ್ನು ಧರಿಸುವುದು. ಬಿಸಿಲಿಗೆ ಹೋಗುವಾದ ಕನ್ನಡಕ, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದು ಉತ್ತಮ.

ಇನ್ನು ಪ್ರಯಾಣದ ಸಮಯದಲ್ಲಿ ನೀರಿನ ಬಾಟಲಿಯನ್ನು ಜೊತೆ ಇರಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದು. ದೇಹ ನಿರ್ಜಲೀಕರಣಗೊಳಿಸುವ ಆಸ್ಕೋಹಾಲ್, ಕಾಫಿ, ಟೀ, ಚಹಾ ಹಾಗೂ ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸುವುದು.

ನಿಲ್ಲಿಸಿದ ವಾಹನಗಳಲ್ಲಿ ಪ್ರಾಣಿಗಳು ಹಾಗೂ ಮಕ್ಕಳನ್ನು ಬಿಡದೇ ಇರುವುದು. ಇನ್ನುಯಾರಾದರೂ ಮೂರ್ಛೆ ಹೋಗುವುದು ಅಥವಾ ಅನಾರೋಗ್ಯ ಕಾಣಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು. ನಿಂಬೆ ಪಾನಕ, ಮಜ್ಜಿಗೆಯಂತಹ ಮನೆಯಲ್ಲಿ ತಯಾರಿಸಿದ ಪಾನೀಯ ಅಥವಾ ಒಆರ್‌ಎಸ್ ಕುಡಿಯುವುದು.

ಮುಖ್ಯವಾಗಿ ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಅವುಗಳಿಗೆ ಕುಡಿಯಲು ನೀರು ಸಾಕಷ್ಟು ನೀಡುವುದು. ಮನೆಯನ್ನು ತಂಪಾಗಿರಿಸಲು ಪರದೆಗಳು ಶಟರ್‌ಗಳು ಅಥವಾ ಸನ್‌ಶೆಡ್‌ಗಳನ್ನು ಬಳಸುವುದು. ಬಿಸಿಗಾಳಿಗೆ ಸಂಬಂಧಿತ ಕಾಯಿಲೆಗೆ ಪ್ರಥಮ ಚಿಕಿತ್ಸೆ ನೀಡುವುದು.

ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿ ಅಥವಾ ತಂಪಾದ ಜಾಗಕ್ಕೆ ಸ್ಥಳಾಂತರಿಸುವುದು. ತಕ್ಷಣ ನೀರು ಅಥವಾ ಪುರ್ನಜಲೀಕರಣ ಪಾನೀಯವನ್ನು ನೀಡುವುದು. ವ್ಯಕ್ತಿಗೆ ತಂಪಾದ ಗಾಳಿ ಸೋಕುವಂತೆ ಮಾಡುವುದು. ರೋಗಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದವರೆಗೆ ಅದೇ ಪರಿಸ್ಥಿತಿ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ, ವೈದ್ಯರನ್ನು ಅಗತ್ಯವಾಗಿ ಸಂಪರ್ಕಿಸಿ.

ಈ ರೀತಿಯ ಕ್ರಮಗಳನ್ನು ಅನುಸರಿಸುವ ಮೂಲಕ ಬಿಸಿಗಾಳಿಯಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.

 

ಇದನ್ನು ಓದಿ: Career Tips: ಕಲಾ ವಿಭಾಗದ ವಿದ್ಯಾರ್ಥಿಗಳು ಈ ಕೋರ್ಸ್ಗಳನ್ನು ಮಾಡಿದರೆ ಕೈ ತುಂಬಾ ಸಂಬಳ ಗ್ಯಾರಂಟಿ!