Bournvita: ದಾರಿ ತಪ್ಪಿಸೋ ಜಾಹೀರಾತುಗಳನ್ನು ತೆಗೆದುಹಾಕಿ” ಬೋರ್ನ್ವಿಟಾ ಕಂಪನಿಗೆ ಮಕ್ಕಳ ಹಕ್ಕುಗಳ ಸಂಸ್ಥೆ ಎಚ್ಚರಿಕೆ!!
Bournvita: ಬೋರ್ನ್ವಿಟಾದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ ಎಂದು ಆರೋಪಿಸಿ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಯೊಬ್ಬರು ವಿವಾದವನ್ನು ಹುಟ್ಟುಹಾಕಿದ ನಂತರ “ದಾರಿ ತಪ್ಪಿಸೋ ಜಾಹೀರಾತುಗಳನ್ನು ತೆಗೆದು ಹಾಕಿ” ಬೋರ್ನ್ವಿಟಾ (bournvita) ಕಂಪನಿಗೆ ಮಕ್ಕಳ ಹಕ್ಕುಗಳ ಸಂಸ್ಥೆ ನೋಟಿಸ್ ನೀಡಿದೆ.
ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸುಧಾರಿಸುವ ಆರೋಗ್ಯ ಪಾನೀಯವಾಗಿ ಬೋರ್ನ್ವಿಟಾ ತನ್ನನ್ನು ತಾನು ಉತ್ತೇಜಿಸುವ ಮೂಲಕ ಹೆಚ್ಚಿನ ಪ್ರಚಾರದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಳಕೆಯನ್ನು ಮಾಡುತ್ತಿದ್ದಾರೆ. ಬೋರ್ನ್ವಿಟಾ ಹೆಚ್ಚಿನ ಶೇಕಡಾವಾರು ಸಕ್ಕರೆ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಇತರ ವಸ್ತುಗಳನ್ನು ಒಳಗೊಂಡಿದೆ ಎಂದು ಆರೋಪಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಸಿಪಿಸಿಆರ್ ಕಾಯ್ದೆ, 2005 ರ ಸೆಕ್ಷನ್ 13 ರ ಅಡಿಯಲ್ಲಿ ಈ ವಿಷಯದ ಬಗ್ಗೆ ಸಮಿತಿಗೆ ತಿಳಿಸಲು ಏಳು ದಿನಗಳಲ್ಲಿ ವಿವರವಾದ ವಿವರಣೆ ಅಥವಾ ವರದಿಯನ್ನು cp.ncpcr@nic.in ಕಳುಹಿಸುವಂತೆ ಸೂಚಿಸಿದೆ.
ಈ ಕಾರಣದಿಂದಾಗಿ ಮೊಂಡೆಲೆಜ್ ಇಂಡಿಯಾ ಒಡೆತನದ ಬ್ರಾಂಡ್ ಬೋರ್ನ್ವಿಟಾ “ದಾರಿತಪ್ಪಿಸುವ” ಜಾಹೀರಾತುಗಳು, ಪ್ಯಾಕೇಜಿಂಗ್ ಮತ್ತು ಲೇಬಲ್ಗಳನ್ನು ಪರಿಶೀಲಿಸಲು ಮತ್ತು ಹಿಂತೆಗೆದುಕೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ಖಡಕ್ ವಾರ್ನಿಂಗ್ ನೀಡಿದೆ.
ಬೋರ್ನ್ವಿಟಾದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ ಎಂದು ಆರೋಪಿಸಿ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಯೊಬ್ಬರು ವಿವಾದವನ್ನು ಹುಟ್ಟುಹಾಕಿದ ನಂತರ ಬಹುತೇಕ ಬಳಕೆದಾರರಿಗೆ ಶಾಕ್ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಬಳಕೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದಕ್ಕೆ ಈ ಮಾಹಿತಿ ಸೂಕ್ತವಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರು ಹಂಚಿಕೊಂಡಿದ್ದಾರೆ. ಯಾವುದೇ ಆಹಾರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದು ಅವುಗಳನ್ನು ಪ್ರತಿನಿತ್ಯ ಸೇವನೆ ಮಾಡಿದ್ದರೆ ಕ್ರಮೇಣ ಆರೋಗ್ಯ ಹಾನಿಕರವಾಗುವುದಂತೂ ನಿಜ.
ಇದನ್ನೂ ಓದಿ: KSRTC And BMTC Bus Service : BMTC, KSRTC ಬಸ್ ಸೇವೆ 9 ದಿನಗಳ ಕಾಲ ವ್ಯತ್ಯಯ ಸಾಧ್ಯತೆ!