Hindu Culture: ಹಣೆಯ ಮೇಲೆ ಬೊಟ್ಟನ್ನು ಇಡುವುದರಿಂದ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಇದೆ ಪ್ರಯೋಜನ!

Hindu Culture: ಹಿಂದೂ ಸಂಪ್ರದಾಯದ ಪ್ರಕಾರ ಹಣೆಗ ಬೊಟ್ಟು ಇಟ್ಟುಕೊಳ್ಳೋದು ನಮ್ಮ ಸಂಸ್ಕೃತಿಯ(Hindu Culture) ಪ್ರತೀಕ. ಪ್ರತಿ ಹೆಣ್ಣಿಗೂ ಹಣೆಯಲ್ಲಿ ಬಿಂದಿ ಇದ್ರೇನೆ ಲಕ್ಷಣ. ಹಿಂದಿನ ಕಾಲದಲ್ಲಿ ಕೆಂಪು ಕುಂಕುಮವನ್ನೇ ಹಣೆಯ ಬೊಟ್ಟಾಗಿ ಬಳಕೆ ಮಾಡ್ತಾ ಇದ್ದರು. ಈಗ ಕಾಲ ಬದಲಾಗಿದೆ. ಕುಂಕುಮದ ಬೊಟ್ಟು ಇಡುವುದಕ್ಕಿಂತಲೂ ಸ್ಟಿಕ್ಕರ್ ಇಡದವರೇ ಅದೆಷ್ಟೋ ಮಂದಿ. ಆದ್ರೆ, ಹಣೆಯ ಮೇಲೆ ಬೊಟ್ಟನ್ನು ಇಡುವುದರಿಂದ ತುಂಬಾನೇ ಪ್ರಯೋಜನಗಳಿದೆ.

ಅದರಲ್ಲೂ ಮಹಿಳೆಯರಿಗೆ ಮಾತ್ರವಲ್ಲ, ಪುರಷರಿಗೂ ಇದರಿಂದ ಹಲವು ಲಾಭಗಳಿವೆ. ತಜ್ಞರ ಪ್ರಕಾರ, ಮಹಿಳೆಯರು ಬಿಂದಿ ಇಡುವ ಸ್ಥಳವನ್ನು ಆಜ್ಞಾ ಚಕ್ರ ಎಂದು ಕರೆಯಲಾಗುತ್ತದೆ. ಅಜ್ಞಾ ಚಕ್ರವನ್ನು ಮಾನವ ದೇಹದ ಆರನೇ ಮತ್ತು ಅತ್ಯಂತ ಶಕ್ತಿಶಾಲಿ ಚಕ್ರವೆಂದು ಪರಿಗಣಿಸಲಾಗಿದೆ. ಇದು ಹಲವು ಆರೋಗ್ಯ ಮತ್ತು ಚರ್ಮದ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ ಬೊಟ್ಟು ಇಡುವುದರಿಂದ ಹಣೆಯ ಮಧ್ಯಭಾಗ ಒತ್ತುತ್ತದೆ. ಇದು ತಲೆ, ಕಣ್ಣು, ಮೆದುಳು, ಪೀನಲ್ ಗ್ರಂಥಿ, ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸುತ್ತದೆ. ಹಾಗಿದ್ರೆ ಬನ್ನಿ ಬೊಟ್ಟನ್ನು ಇಡುವುದರಿಂದಾಗುವ ಆಗುವ ಪ್ರಯೋಜನಗಳನ್ನು ತಿಳಿಯೋಣ.

*ಹಣೆಯ ಮೇಲೆ ವೃತ್ತಾಕಾರದ ಬೊಟ್ಟು ಹಾಕುವುದರಿಂದ ಎಲ್ಲಾ ನರಗಳು ಚೆನ್ನಾಗಿ ಕೆಲಸ ಮಾಡುತ್ತದೆ.
*ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ತಲೆನೋವು ಕಡಿಮೆಯಾಗುತ್ತದೆ.
*ಸೈನಸ್ ಸಮಸ್ಯೆ ದೂರವಾಗುತ್ತದೆ. ದೃಷ್ಟಿ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮವು ತಾರುಣ್ಯದಿಂದ ಕೂಡಿರುತ್ತದೆ.
*ಖಿನ್ನತೆಯಿಂದ ದೂರ ಇಡುತ್ತದೆ.
*ಕೇಳುವಿಕೆಯು ಉತ್ತಮವಾಗುತ್ತದೆ.
*ನೆನಪಿನ ಶಕ್ತಿ ಚೆನ್ನಾಗಿದೆ. ಏಕಾಗ್ರತೆ ಹೆಚ್ಚುತ್ತದೆ.
*ಮೈಗ್ರೇನ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೀಗಾಗಿ ಬಿಂದಿ ಇಡುವ ಅಭ್ಯಾಸವನ್ನು ಇಟ್ಟುಕೊಳ್ಳೋದು ಅಗತ್ಯ. ಪುರುಷರು ಕೂಡ ಕುಂಕುಮ ಧರಿಸೋದು ಅತ್ಯಾವಶ್ಯಕ. ಹೀಗೆ ದಿನಕ್ಕೆ ಹಲವು ಬಾರಿ ಬಿಂದಿಯನ್ನು ಇಡುವ ಜಾಗವನ್ನು ಅನ್ನು ಒತ್ತುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

 

ಇದನ್ನು ಓದಿ: New feature in whatsapp: ಮತ್ತೊಂದು ಅದ್ಭುತ ಫೀಚರ್ ಹೊರತಂದ ವಾಟ್ಸಪ್!

Leave A Reply

Your email address will not be published.