V Somanna: ನಾಮಪತ್ರ ಹಿಂಪಡೆವ ಆಡಿಯೋ ವಿಚಾರ – ಯಾವುದೋ ನಾಯಿ ನರಿಗಳಿಗೆ ಮಾತಿಗೆ ಉತ್ತರಿಸೋ ಅಗತ್ಯ ಇಲ್ಲ – ವಿ. ಸೋಮಣ್ಣ ನಾಯಿ ನರಿ ಅಂದದ್ದು ಯಾರಿಗೆ ?
V Somanna New Audio: ರಾಜ್ಯ ವಿಧಾನಸಭೆಯ ಚುನಾವಣೆಗೆ(Karnataka Assembly Election) ದಿನಗಣನೆ ಶುರುವಾಗಿದೆ. ಕೆಲವು ಅಭ್ಯರ್ಥಿಗಳಿಗೆ ಸೋಲಿನ ಭೀತಿ ಎದುರಾದರೆ ಇನ್ನು ಕೆಲವರು ಈಗಲೇ ಗೆಲುವಿನ ನಗೆ ಬೀರುತ್ತಿದ್ದಾರೆ. ಈ ನಡುವೆ ನಾಮಪತ್ರ ವಾಪಸ್ಸು ಪಡೆಯುವಂತೆ ಜೆಡಿಎಸ್(JDS) ಅಭ್ಯರ್ಥಿ ಆಲೂರು ಮಲ್ಲು (ಮಲ್ಲಿಕಾರ್ಜುನಸ್ವಾಮಿ)ಗೆ ಸಚಿವ ವಿ.ಸೋಮಣ್ಣ ಆಮಿಷವೊಡ್ಡಿರುವ ಆಡಿಯೋ ಒಂದು ವೈರಲ್ ಆಗಿದೆ. ಇದರ ಬೆನ್ನಲೇ ಸೋಮಣ್ಣ( V Somanna New Audio ) ಕೂಡ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಹೌದು, ಚಾಮರಾಜನಗರದ(Chamarajanagara) ಜೆಡಿಎಸ್ ಅಭ್ಯರ್ಥಿ ಆಲೂರು ಮಂಜುಗೆ ನಾಮಪತ್ರ ವಾಪಸ್ ಪಡೆದುಕೊಳ್ಳಲು ಸಚಿವ ವಿ. ಸೋಮಣ್ಣ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದಕ್ಕೆ ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.
ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಅವರ ಬೆಂಬಲಿಗರಾದ ನಟರಾಜು ಹಾಗೂ ಸುದೀಪ್ ಎಂಬುವರು ಆಲೂರು ಮಲ್ಲು ಅವರಿಗೆ ದೂರವಾಣಿ ಕರೆ ಮಾಡಿ ನಾಮಪತ್ರ ವಾಪಸ್ಸು ಪಡೆದುಕೊಳ್ಳಿ. ನಿಮಗೆ 50 ಲಕ್ಷ ಹಾಗೂ ಸರ್ಕಾರ ಬಂದ ನಂತರ ಗೂಟದ ಕಾರು ಕೊಡಿಸುವುದಾಗಿಯೂ ಆಮಿಷವೊಡ್ಡಿದ್ದು ಈ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಇನ್ನು ಮುಂದುವರಿದ ಆಡಿಯೋದಲ್ಲಿ ಆಲೂರು ಮಲ್ಲು ಅವರು ನಾಮಪತ್ರ ವಾಪಸ್ಸು ಪಡೆಯಲು ಆಗಲ್ಲ, ಪಕ್ಷದಿಂದ ನಾಮಪತ್ರ ಸಲ್ಲಿಸಿರುವುದರಿಂದ ಸಮಸ್ಯೆಯಾಗುತ್ತದೆ. ಆದರೆ, ತಟಸ್ಥ ಆಗುತ್ತೇನೆ ಎಂದು ಹೇಳುತ್ತಾರೆ. ಈ ವೇಳೆ ಮಾತು ಮುಂದುವರಿಸುವ ನಟರಾಜು ಎಂಬುವರು ಚುನಾವಣೆ ಬಳಿಕ ಜೆಡಿಎಸ್ ಪಕ್ಷ ಇರಲ್ಲ ಎಂದು ಹೇಳುತ್ತಾರೆ. ಬಳಿಕ ಸುದೀಪ್ ಎಂಬುವರು 50 ಕ್ಕೆ ಒಪ್ಪಿಕೊಂಡಿದೆ. ಒಪ್ಪಿಸಿಬಿಟ್ಟು ವಿಥ್ ಡ್ರಾ ಮಾಡ್ಬಿಡಿ ಅಂತ ಹೇಳುತ್ತಾರೆ. ಆದರೆ, ಆಲೂರು ಮಲ್ಲು ಅವರು ವಿಥ್ ಡ್ರಾ ಮಾಡಲು ಆಗಲ್ಲ. ಬೇಕಾದರೆ ಕುಮಾರಣ್ಣ ಜೊತೆ ಮಾತಾಡಿ ಫೋನ್ ಮಾಡಿಸಿ ತೊಂದರೆ ಇಲ್ಲ ಎಂದು ಹೇಳುತ್ತಾರೆ.
ಅಲ್ಲದೆ “ನಮ್ಮ ಸರ್ಕಾರ ಬರುತ್ತದೆ. ಜೆಡಿಎಸ್ ಪಕ್ಷ ಇರಲ್ಲ. ನೀವು ಕಳೆದು ಹೋಗಬೇಡಿ. ಯಾರಿಗೂ ಗೊತ್ತಾಗದಂತೆ ವಿಥ್ ಡ್ರಾ ಕೊಟ್ಟು ಹೋಗಿಬಿಡಿ. ನಾವೆಲ್ಲ ಸಾಕ್ಷಿ ಇದಿವಿ ಎಂದು ಹೇಳುತ್ತಾರೆ. ಬಳಿಕ ಸುದೀಪ್ ಎಂಬುವರು ವಿ.ಸೋಮಣ್ಣ ಅವರಿಗೆ ಕಾನ್ಫರೆನ್ಸ್ ಹಾಕುತ್ತಾರೆ. ಆಗ ಸೋಮಣ್ಣ ಮಾತನಾಡಿ, ಏಯ್ ನಾಮಪತ್ರ ವಾಪಸ್ಸು ತಗೋ, ಆಮೇಲೆ ಮಾತಾಡ್ತಿನಿ. ಏನಯ್ಯ ನೀನು ಯಾವನ ಮಾತು ಕೇಳಿಕೊಂಡು, ನೀನು ಬದುಕೋಕೆ ಏನೋ ಬೇಕೋ ಎಲ್ಲವೂ ಮಾಡುತ್ತೇನೆ. ಮೊದಲು ವಾಪಸ್ಸು ತಗೋ ಆಮೇಲೆ ಬಾಕಿಯದು ಮಾತಾಡ್ತಿನಿ. ನಿನ್ನ ಎಲ್ಲಿ ತಗೊಂಡು ಹೋಗಿ ಬಿಡಬೇಕೋ ಅಲ್ಲಿ ಬಿಡುತ್ತೀನಿ. ಇರೋದು ಒಂದು ಗಂಟೆ ಬೇಗ ವಾಪಸ್ಸು ತಗೋ, ಸರ್ಕಾರ ಬರುತ್ತದೆ. ಗೂಟದ ಕಾರು ಕೊಡಿಸುತ್ತೇನೆ. ವಾಪಸ್ಸು ತಗೋ ಎಂದು ಆಮಿಷವೊಡ್ಡಿದ್ದಾರೆ. ಬಳಿಕ ಸುದೀಪ್ ಕೂಡ ಜಿ.ಟಿ.ದೇವೇಗೌಡರ ಕಡೆಯಿಂದ ಹೇಳಿಸುತ್ತೇನೆ ವಾಪಸ್ಸು ತಗೋ ಎಂದು ಹೇಳಿರುವುದು ಆಡಿಯೋದಲ್ಲಿದೆ. ಈ ಸಂಭಾಷಣೆ ನಾಮಪತ್ರ ವಾಪಸ್ಸು ಪಡೆಯಲು ಕೊನೆ ದಿನವಾಗಿದ್ದ ಸೋಮವಾರ ನಡೆದಿದೆ ಎನ್ನಲಾಗಿದೆ.
ಅಂದಹಾಗೆ ಈ ಆಡಿಯೋ ಬಗ್ಗೆ ವರುಣ ಕ್ಷೇತ್ರದಲ್ಲಿ ಮಾತನಾಡಿದ ವಿ.ಸೋಮಣ್ಣ, ಆಡಿಯೋಗೂ ನನಗೂ ಸಂಬಂಧವಿಲ್ಲ. ನನ್ನದು ಯಾವುದೇ ವಿಚಾರ ಸಿಗುತ್ತಿಲ್ಲ. ನಾನು ಯಾವುದೋ ನಾಯಿ ನರಿಗಳ ಮಾತಿಗೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ನಾನೇನೂ ದಡ್ಡ ಅಲ್ಲ. 45 ವರ್ಷ ರಾಜಕಾರಣ ಮಾಡಿದ್ದೇನೆ. ಚುನಾವಣಾ ಮುಗಿದ ಮೇಲೆ ಆಡಿಯೋ ಬಗ್ಗೆ ಮಾತನಾಡುತ್ತೇನೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಯಾರೋ ಹೊಟ್ಟೆ ಪಾಡಿಗಾಗಿ ಮಾಡಿರಬಹುದು ಎಂದು ಗುಡುಗಿದರು.
ನಂತರ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ ವಿ. ಸೋಮಣ್ಣ. ವರುಣಾದಲ್ಲಿ ನಿಲ್ಲೋ ಮೂಲಕ ನೀನು ಚಾಲೆಂಜ್ ಸ್ವೀಕಾರ ಮಾಡು ಎಂದು ಯಡಿಯೂರಪ್ಪ ಹೇಳಿದರು. ನನಗೆ ಈಗ 72 ವರ್ಷ ವಯಸ್ಸು. ಆಗ ನನಗೆ ಭಯ ಇತ್ತು. ಆದರೆ ಈಗ, ಆ ಪುಣ್ಯಾತ್ಮ ಹೇಳಿದ್ದು ನಿಜ ಅನಿಸುತ್ತಿದೆ. ಇಲ್ಲಿನ ಜನರ ಪ್ರೀತಿ ನೋಡಿ ಖುಷಿಯಾಗಿದೆ. ಅಭಿವೃದ್ಧಿ ಕೆಲಸ ಮಾಡುವವನಿಗೆ ಯಾವುದೇ ಜಾತಿ, ಗ್ರಾಮ ಇಲ್ಲ. ಬಸವಣ್ಣ ಅವರ ವಿಚಾರಧಾರೆ ಅಳವಡಿಸಿಕೊಂಡವನು ನಾನು ಎಂದರು.
ಇದನ್ನು ಓದಿ: Hair Care: ಕೂದಲಿನ ತುದಿ ಕತ್ತರಿಸಿದರೆ ಕೂದಲು ಉದ್ದ ಬೆಳೆಯುವುದೇ?