Home Breaking Entertainment News Kannada Actress Sridevi’s death mystery : ಕೊನೆಗೂ ನಟಿ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬಾಲ್ಯದ...

Actress Sridevi’s death mystery : ಕೊನೆಗೂ ನಟಿ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬಾಲ್ಯದ ಗೆಳತಿ! ಆಕೆಯ ಜೀವನ ಹಾಳಾಗಲು ತಾಯಿಯೇ ಕಾರಣ ಎಂದ ಕುಟ್ಟಿ ಪದ್ಮಿನಿ ಹೇಳಿದ್ದೇನು?

Actress Sridevi's death mystery
Image Source- Filmibeat

Hindu neighbor gifts plot of land

Hindu neighbour gifts land to Muslim journalist

Actress Sridevi: ಭಾರತೀಯ ಚಿತ್ರರಂಗದ ಮೋಹಕ ತಾರೆ, ಅತಿಲೋಕ ಸುಂದರಿಯಾಗಿ ಮಿಂಚಿದ್ದ ಶ್ರೀದೇವಿ(Actress Sridevi) ಮರೆಯಾಗಿ ಸುಮಾರು ಐದು ವರ್ಷಗಳು ಕಳೆದಿವೆ. ಆದರೂ ಆಕೆಯ ಸಾವಿನ ಅಸಲಿಯತ್ತು ಏನೆಂದು ತಿಳಿದಿಲ್ಲ. ಆದರೀಗ ಈ ನಡುವೆ ಶ್ರೀದೇವಿಯ ಬಾಲ್ಯದ ಗೆಳತಿ, ನಟಿ ಕುಟ್ಟಿ ಪದ್ಮಿನಿ(Kutti Padmini) ಅವರು ಶ್ರೀದೇವಿ ಜೀವನವನ್ನು ಆಕೆಯ ತಾಯಿಯೇ ಹಾಳು ಮಾಡಿದರು ಎಂದು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ದುಬೈನಲ್ಲಿ(Dubai) ಸಂಬಂಧಿಕರ ಮದುವೆಗೆಂದು ಹೋಗಿದ್ದ ಶ್ರೀದೇವಿ, ಅಲ್ಲೇ ಉಳಿದುಕೊಂಡಿದ್ದ ಹೋಟೆಲ್​ ರೂಮ್​ನ ಸ್ನಾನದ ಕೋಣೆಯ ಬಾತ್​ಟಬ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವೆಂದು ಹೇಳಲಾಗಿತ್ತು. ಆದರೆ ಇಂದೀಗೂ ಶ್ರೀದೇವಿ ಅಭಿಮಾನಿಗಳಿಗೆ ಮಾತ್ರ ಇಂದಿಗೂ ಅದು ಸಹಜ ಸಾವಲ್ಲ ಅನ್ನೋ ಅನುಮಾನ ಇದೆ. ನಟಿ ಶ್ರೀದೇವಿ (Sridevi) ನಿಧನ ಹೊಂದಿ ಐದು ವರ್ಷಗಳಾಗಿವೆ. ಆದರೆ ಅವರ ಸಾವು ಈಗಲೂ ರಹಸ್ಯಮಯವಾಗಿಯೇ ಉಳಿದಿರೋದು ದುರಂತ. ಇದೀಗ ನಟಿ ಹಾಗೂ ಶ್ರೀದೇವಿಯ ಬಾಲ್ಯದ ಗೆಳತಿ ಕುಟ್ಟಿ ಪದ್ಮಿನಿ ಶ್ರೀದೇವಿ ಬಗ್ಗೆ ಮಾತನಾಡಿದ್ದು, ಶ್ರೀದೇವಿಯ ಜೀವನ ಹಾಳಾಗಲು ಆಕೆಯ ತಾಯಿಯೇ ಕಾರಣ ಎಂದಿದ್ದಾರೆ.

ಅಂದಹಾಗೆ ನಟಿ ಪದ್ಮಿನಿ ಕುಟ್ಟಿ ಅವರು ಯೂಟ್ಯೂಬ್ ಚಾನೆಲ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಆರೋಪ ಮಾಡಿದ್ದು ‘ಶ್ರೀದೇವಿಯ ತಾಯಿಗೆ ಕುಡಿತದ ಚಟವಿತ್ತು. ಆಕೆ ಪ್ರತಿದಿನ ಕುಡಿಯುತ್ತಿದ್ದಳು, ಶ್ರೀದೇವಿ ಬೇಗ ಮತ್ತು ಗಾಢವಾದ ನಿದ್ದೆ ಮಾಡಲೆಂದು ಎಳವೆಯಲ್ಲಿಯೇ ಶ್ರೀದೇವಿಗೂ ಮದ್ಯ ಕುಡಿಸುತ್ತಿದ್ದಳು. ಆಕೆ ಹಣ ಗಳಿಸಲು ಶ್ರೀದೇವಿಯನ್ನು ಚೆನ್ನಾಗಿ ಬಳಸಿಕೊಂಡಳು, ಬಾಲನಟಿಯಾಗಿ, ನಾಯಕ ನಟಿಯಾಗಿ ಒಂದರ ಹಿಂದೆ ಒಂದು ಸಿನಿಮಾಗಳನ್ನು ಶ್ರೀದೇವಿ ಮಾಡಿಸುತ್ತಿದ್ದಳು, ಶ್ರೀದೇವಿ ಪರವಾಗಿ ಆಕೆಯ ತಾಯಿಯೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಳು. ಅತಿಯಾದ ಕೆಲಸದಿಂದ ದಣಿದ ಮಗಳಿಗೆ ಮದ್ಯವನ್ನು ಅಭ್ಯಾಸ ಮಾಡಿಸಿದಳು ಆಕೆಯ ತಾಯಿ. ಕೊನೆಗೆ ಅದೇ ಶ್ರೀದೇವಿಯ ಜೀವನ ಹಾಳಾಗಲು ಕಾರಣವಾಯ್ತು ಎಂದಿದ್ದಾರೆ.

ಕುಡಿತದಿಂದ ಆದ ಅನಾಹುತದಿಂದಲೇ ಶ್ರೀದೇವಿಯ ಸಾವು ಸಂಭವಿಸಿದೆ ಎಂಬರ್ಥದ ಮಾತುಗಳನ್ನಾಡಿರುವ ನಟಿ ಕುಟ್ಟಿ ಪದ್ಮಿನಿ ಆಕೆಯ ತಾಯಿಯ ಮದ್ಯದ ಚಟ ಶ್ರೀದೇವಿಗೆ ವಿಪರೀತವಾಗಿ ಹತ್ತಿಕೊಂಡಿತ್ತು, ಶ್ರೀದೇವಿ ಸಹ ಪ್ರತಿದಿನ ಮದ್ಯ ಸೇವನೆ ಮಾಡುತ್ತಿದ್ದರು ಎಂದು ಹೇಳಿರುವುದು ಈಗಾಗಲೇ ಶ್ರೀದೇವಿಯ ಸಾವಿನ ಸುತ್ತ ಹುಟ್ಟಿರುವ ಅನುಮಾನಗಳಿಗೆ ಇಂಬು ನೀಡಿದಂತಾಗಿದೆ.

ಬಾಲನಟಿಯಾಗಿ ಚಿತ್ರ ರಂಗ ಪ್ರವೇಶಿಸಿದ ನಟಿ ಶ್ರೀದೇವಿ ಆ ಬಳಿಕ ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ನಾಯಕಿಯಾಗಿ ನಟಿಸಲು ಆರಂಭಿಸಿದರು. ಹಲವಾರು ಸಿನಿಮಾಗಳಲ್ಲಿ ನಟಿಸಿದ ಶ್ರೀದೇವಿ ತೆಲುಗು, ತಮಿಳು ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡರು, ಆ ಬಳಿಕ ಬಾಲಿವುಡ್​ಗೂ ಪದಾರ್ಪಣೆ ಮಾಡಿ ಅಲ್ಲಿಯೂ ಸ್ಟಾರ್ ಆದರು.

ಮುಂದೆ ನಿರ್ಮಾಪಕ ಬೋನಿ ಕಪೂರ್​ ಜೊತೆ ಗೆಳೆತನ ಬೆಳೆಸಿ ಮದುವೆಗೆ ಮುಂಚೆಯೇ ಗರ್ಭಿಣಿಯಾದರು ಬಳಿಕ ಬೋನಿ ಕಪೂರ್ ಅನ್ನೇ ವಿವಾಹವೂ ಆದರು. 1996 ರಲ್ಲಿ ಬೋನಿ ಕಪೂರ್ ಅನ್ನು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರಾದ ಶ್ರೀದೇವಿ ಆ ಬಳಿಕ 2012 ರಲ್ಲಿ ಬಿಡುಗಡೆ ಆದ ಇಂಗ್ಲೀಷ್-ವಿಂಗ್ಲೀಷ್ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದರು.

2018 ರಲ್ಲಿ ಕುಟುಂಬ ಸದಸ್ಯರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದ ಶ್ರೀದೇವಿ, ಪತಿ ಬೋನಿ ಕಪೂರ್, ತಾವು ದುಬೈಗೆ ಬರುತ್ತಿರುವುದಾಗಿ ಹೇಳಿದ್ದರಿಂದ ಮದುವೆ ಮುಗಿದ ಮೇಲೆಯೂ ಅಲ್ಲಿಯೇ ಉಳಿದರು. ಬೋನಿ ಕಪೂರ್, ಶ್ರೀದೇವಿಗೆ ಸರ್ಪ್ರೈಸ್ ನೀಡಲೆಂದು ಹೇಳಿದ್ದಕ್ಕಿಂತಲೂ ಎರಡು ದಿನ ಮೊದಲೇ ಶ್ರೀದೇವಿ ಇದ್ದ ಹೋಟೆಲ್​ಗೆ ಹೋದರು. ಬೋನಿ ಕಪೂರ್ ಹೇಳಿರುವಂತೆ, ಇಬ್ಬರೂ ಭೇಟಿಯಾಗಿ ಹೋಟೆಲ್​ ರೂಂನಲ್ಲಿ ಕೆಲ ಕಾಲ ಮಾತನಾಡಿದರು. ಅದಾದ ಬಳಿಕ ಶ್ರೀದೇವಿ ಸ್ನಾನಕ್ಕೆ ಹೋದರು, ಅಲ್ಲಿ ಬಾತ್​ರೂಂನ ಟಬ್​ನಲ್ಲಿ ಮುಳುಗಿ ಸಾವನ್ನಪ್ಪಿದರು.

ಇದನ್ನೂ ಓದಿ: Farmer Success Story: 40 ವರ್ಷ, ಒಬ್ಬೊಂಟಿಯಾಗಿ ಭೂಮಿ ಅಗೆದು ಕೆರೆ ನಿರ್ಮಿಸಿದ ಜಾರ್ಖಂಡ್‌ ರೈತ! ಇಲ್ಲಿದೆ ನೋಡಿ ಆಧುನಿಕ ಭಗೀರಥನ ಸಾಧನೆಯ ಕಥೆ!