Diploma Course: ವಿದ್ಯಾರ್ಥಿಗಳೇ ನೀವು ಡಿಪ್ಲೋಮಾ‌‌ ಮಾಡಲು ಬಯಸುವಿರಾ? ಅತಿ ಕಡಿಮೆ ಶುಲ್ಕದ ಶಿಕ್ಷಣ ನಿಮಗಾಗಿ!

Diploma Course: ಶಿಕ್ಷಣ ಪ್ರತಿಯೊಬ್ಬರ ಬಾಳಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. 2023 -24ನೇ ಸಾಲಿನಿಂದ ರಾಜ್ಯದಲ್ಲಿ 9 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನ ಕೈಗೊಂಡಿದ್ದು, ರಾಜ್ಯದ ಬಡ ವಿದ್ಯಾರ್ಥಿಗಳು ಅತಿ ಕಡಿಮೆ ಶುಲ್ಕದಲ್ಲಿ ಡಿಪ್ಲೋಮಾ ಕೋರ್ಸ್ ಗೆ ಪ್ರವೇಶ ಪಡೆಯಲು ಅನುವು ಮಾಡಿಕೊಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಕಾಲೇಜಿನಲ್ಲಿ ನಾಲ್ಕು ಕೋರ್ಸ್ ಗಳು, ಪ್ರತಿ ಕೋರ್ಸ್ ಗೆ 60 ಸೀಟುಗಳಂತೆ 9 ಕಾಲೇಜುಗಳಿಂದ 2160 ಸೀಟುಗಳಿಗೆ ಅನುಮತಿ ನೀಡಲು ಮನವಿ ಕೋರಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಗೆ ಪತ್ರ ಬರೆಯಲಾಗಿದೆ.

ರಾಜ್ಯದಲ್ಲಿ 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಜೊತೆಗೆ ಹೆಚ್ಚುವರಿಯಾಗಿ 9 ಕಾಲೇಜುಗಳು ನೂತನವಾಗಿ ಸೇರ್ಪಡೆಯಾಗಲಿದೆ. ಈ ಶೈಕ್ಷಣಿಕ ಸಾಲಿನಿಂದ 22,928 ಸೀಟುಗಳಲ್ಲದೆ ಹೊಸದಾಗಿ 2160 ಸೀಟುಗಳಿಗೆ ಅನುಮತಿ ಸಿಗುವ ಸಂಭವ ಹೆಚ್ಚಿದೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಕ್ಲೌಡ್ ಕಂಪ್ಯೂಟಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಪ್ರಾರಂಭ ಮಾಡಲಾಗುತ್ತದೆ ಎನ್ನಲಾಗಿದೆ.

2023 -24 ನೇ ಸಾಲಿನಲ್ಲಿ ಡಿಪ್ಲೋಮೋ ಕೋರ್ಸ್(Diploma Course) ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2,164 ಹೆಚ್ಚುವರಿ ಸೀಟು ಮತ್ತು ಪ್ರಚಲಿತ ಕೋರ್ಸುಗಳ ಆಯ್ಕೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ತುಮಕೂರು, ತಿಪಟೂರು, ಬೆಳಗಾವಿಯ ರಾಮದುರ್ಗ, ದೇವದುರ್ಗದ ಅರಕೇರ, ಮೈಸೂರಿನ ಪಿರಿಯಾಪಟ್ಟಣ, ಹಾವೇರಿಯ ಬ್ಯಾಡಗಿ, ಧಾರವಾಡದ ಕಮಡೋಹಳ್ಳಿ, ಗದಗದ ಹೊಳೆಆಲೂರು, ರಾಯಚೂರಿನ ಮಸ್ಕಿ, ವಿಜಯಪುರದ ಕೋಲಾರದಲ್ಲಿ ಡಿಪ್ಲೊಮಾ ಕಾಲೇಜುಗಳನ್ನು ಪ್ರಾರಂಭಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅನುಮತಿಗಾಗಿ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Indian railways: IRCTC ಯಿಂದ ರೈಲು ಪ್ರಯಾಣಿಕರಿಗೆ ವಾರ್ನಿಂಗ್! ಈ ನಕಲಿ ಅಪ್ಲಿಕೇಶನ್ ಬಳಸದಂತೆ ತಾಕೀತು!

Leave A Reply

Your email address will not be published.