Bengaluru-Tirupati E-buses: ಬೆಂಗಳೂರು -ತಿರುಪತಿಗೆ ಇ ಬಸ್‌ ಸಂಚಾರ! ಇ ಬಸ್‌ಗಳ ಸಮಯ, ದರದ ಕುರಿತು ಸಂಪೂರ್ಣ ವಿವರ ಇಲ್ಲಿದೆ!

Bengaluru-Tirupati E-buses: ಫ್ರೆಶ್ ಬಸ್ (Fresh bus) ಕಂಪನಿಯು ತನ್ನ ಮೊದಲ ಇಂಟರ್‌ಸಿಟಿ ಇಲೆಕ್ಟ್ರಿಕ್ ವೆಹಿಕಲ್ ಬಸ್ ಸೇವೆಯನ್ನು ಆರಂಭಿಸಿದ್ದು, ಈ ಬಸ್ ಬೆಂಗಳೂರು-ತಿರುಪತಿ ಮಾರ್ಗದಲ್ಲಿ (Bengaluru-Tirupati E-buses) ಸಂಚಾರವಾಗಲಿದೆ. ಬಸ್‌ನ ಫೀಚರ್ಸ್‌ ಮತ್ತು ದರದ ವಿವರ ಸೇರಿದಂತೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಇ-ಬಸ್ 12 ಮೀಟರ್ ಉದ್ದ ಇದ್ದು, 45 ಜನರಿಗಾಗುವಷ್ಟು ಆರಾಮದಾಯಕ ಸೀಟು ಇದೆ. ಕಂಪನಿ ಇಲೆಕ್ಟ್ರಿಕ್ ಬಸ್‌ಗಳ ಟಿಕೆಟ್‌ ದರ ಉದ್ಘಾಟನಾ ರಿಯಾಯಿತಿಯಾಗಿ 399 ರೂಪಾಯಿ ಇದೆ. ಈ ಬಸ್ ಗರಿಷ್ಠ 90 ಕಿಮೀ ವೇಗದಲ್ಲಿ ಚಲಿಸಲಿದೆ. ಸುಮಾರು ಎರಡು ಗಂಟೆಗಳಲ್ಲಿ 0-100 ಪ್ರತಿಶತದಷ್ಟು ಚಾರ್ಜ್ ಆಗಬಹುದು. ಇದು 400 ಕಿಮೀ ವರೆಗೆ ಸಂಚರಿಸಬಹುದು ಎನ್ನಲಾಗಿದೆ.

ಈ ಬಸ್‌ಗಳು ಪರಿಸರ ಸ್ನೇಹಿ ಮತ್ತು ಕಾರ್ಬನ್‌ ನ್ಯೂಟ್ರಲ್‌ ಆಗಿದೆ. ಶಬ್ದ-ಮುಕ್ತ ಸವಾರಿ, ಪ್ರೀಮಿಯಂ ಸೀಟ್‌ಗಳು ಮತ್ತು ವೈಯಕ್ತಿಕ ಚಾರ್ಜಿಂಗ್ ಡಾಕ್‌ ಹೊಂದಿದೆ. ಎಸಿ ಬಸ್ ಹೈ-ಸ್ಪೀಡ್ ವೈಫೈ, ಆಂಬಿಯೆಂಟ್ ಲೈಟಿಂಗ್ ಮತ್ತು ಅತ್ಯಾಧುನಿಕ ಗಾಳಿಯ ಗುಣಮಟ್ಟದ ಮಾನಿಟರಿಂಗ್ ನೀಡುತ್ತದೆ.

ನಾಯಂಡಹಳ್ಳಿ, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್ ಬಸ್ ನಿಲ್ದಾಣ, ಹಲಸೂರು, ಇಂದಿರಾನಗರ, ಸ್ವಾಮಿ ವಿವೇಕಾನಂದ, ಬೈಯ್ಯಪ್ಪನಹಳ್ಳಿ, ಟಿನ್ ಫ್ಯಾಕ್ಟರಿ, ಐಟಿಐ ಗೇಟ್, ಕೆಆರ್ ಪುರಂ, ಹೊಸಕೋಟೆ, ಬೆಂಗಳೂರಿನಿಂದ ಬೋರ್ಡಿಂಗ್ ಪಾಯಿಂಟ್‌ ಆಗಿದೆ.
ಹಾಗೆಯೇ ಹೊಸ DOT ಟ್ರಾವೆಲ್ಸ್ ತಿರುಪತಿಯಿಂದ ಬೋರ್ಡಿಂಗ್ ಪಾಯಿಂಟ್‌ ಆಗಿದೆ.

“ಪ್ರಯಾಣಿಕರಿಗೆ ಬಸ್‌ನ ರಿಯಲ್‌ ಟೈಮ್‌ ಅಸಿಸ್ಟೆನ್ಸ್‌ ಅನ್ನು ಕೂಡ ಒದಗಿಸುತ್ತದೆ. ಆಲ್ಕೋಹಾಲ್ ಮಟ್ಟ ತಪಾಸಣೆ ಮತ್ತು ಯಾದೃಚ್ಛಿಕ ಡ್ರಗ್ಸ್‌ ಸೇವನೆ ಪರೀಕ್ಷೆ ಸೇರಿ ಕಠಿಣ ಪ್ರಕ್ರಿಯೆಯ ಮೂಲಕ ಚಾಲಕರು ಕರ್ತವ್ಯ ನಿರ್ವಹಣೆಯ ಮೇಲೆ ನಿಗಾ ಇರಿಸಲಾಗುತ್ತದೆ. ಪ್ರಯಾಣದ ಸಮಯದಲ್ಲಿ ಎಲ್ಲ ಸಮಸ್ಯೆಗಳನ್ನು ನಿರ್ವಹಿಸಲು ನಿಯತ ತರಬೇತಿಗೆ ಸಿಬ್ಬಂದಿಯನ್ನು ಒಳಪಡಿಸಲಾಗುತ್ತದೆ” ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Hijab Vs Education: ಹಿಜಾಬ್’ಗಿಂತ ಶಿಕ್ಷಣವೇ ಮುಖ್ಯ ಎಂದ ಯುವತಿ ಈಗ PUC ಟಾಪರ್!

Leave A Reply

Your email address will not be published.