Bomb blast: ಒಳ್ಳೆಯ ಕಾಲೇಜಿಗೆ ಸೇರಿಸಲಿಲ್ಲ ಎಂದು ಬಾಯಲ್ಲಿ ಹೈಡ್ರೋಜನ್ ಬಾಂಬ್ ಇಟ್ಟು ಸ್ಫೋಟಿಸಿ ಆತ್ಮಹತ್ಯೆಗೈದ ಶಾಲಾ ಬಾಲಕ !
Bomb blast: ಒಳ್ಳೆಯ ಕಾಲೇಜಿಗೆ ತನ್ನನ್ನು ಸೇರಿಸಲಿಲ್ಲಎಂದು ಪಟಾಕಿ ಸಿಡಿಸಿಕೊಂಡು ಯುವಕ ಆತ್ಮಹತ್ಯೆ
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನಡೆದಿದೆ. ಇದೇ ಭಾನುವಾರ 17 ವರ್ಷದ ಹುಡುಗನೊಬ್ಬ ತನ್ನ ಬಾಯಲ್ಲಿ (Bomb blast) ಪಟಾಕಿ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಸಾವಿಗೆ ಆತ ಕಂಡು ಕೊಂಡ ವಿಧಾನ ಮಾತ್ರ ವಿಚಿತ್ರ ಮತ್ತು ಭಯಾನಕವಾಗಿದೆ.
ಆತ ತನ್ನನ್ನು ತಾನೇ ಎಷ್ಟು ಕ್ರೂರವಾಗಿ ಸಾಯಿಸಿಕೊಂಡಿದ್ದಾನೆ. ತನ್ನ ಬಾಯಲ್ಲಿ ಎರಡು ಹೈಡ್ರೋಜನ್ ಬಾಂಬ್ ಎಂದು ಕರೆಸಿಕೊಳ್ಳುವ ಪಟಾಕಿ ಇಟ್ಟುಕೊಂಡು ಸ್ಫೋಟಿಸಿ ಆತ ಸಾವನ್ನಪ್ಪಿದ್ದಾನೆ.
ಆ ಹುಡುಗನಿಗೆ ಒಳ್ಳೆಯ ಕಾಲೇಜಿಗೆ ಸೇರಿ ವಿದ್ಯಾಭಾಸ ಮಾಡಬೇಕೆಂದಿತ್ತು. ಆದರೆ ಮನೆಯಲ್ಲಿ ತೀರ ಬಡತನ. ಆದುದರಿಂದ ಮನೆಯವರಿಗೆ ಒಳ್ಳೆಯ ಕಾಲೇಜಿಗೆ ಸೇರಿಸಿ ಓದಿಸಲು ಆಗಿರಲಿಲ್ಲ. ಹುಡುಗ ಅದೇ ವಿಷಯದಲ್ಲಿ ಕೊರಗಿದ್ದ. ಹತ್ತನೆಯ ತರಗತಿಯಲ್ಲಿ ಒಳ್ಳೆಯ ಮಾರ್ಕು ಪಡೆದಿದ್ದ ಆತ ಪಟ್ಟಣದಲ್ಲಿರುವ ದೊಡ್ಡ ಕಾಲೇಜು ಸೇರಿಕೊಳ್ಳಲು ಬಯಸಿದ್ದ ಆತ. ಆದರೆ ಅದು ಆಗುವುದಿಲ್ಲ ಎಂದು ಮನೆಯಲ್ಲಿ ಹೇಳಿದ್ದರಿಂದ ತುಂಬಾ ನೊಂದುಕೊಂಡಿದ್ದ.
ನಿನ್ನೆ ಬೆಳಿಗ್ಗೆ 9 ಗಂಟೆಗೆ ಆತ ಶೌಚಾಲಯದಲ್ಲಿದ್ದಾಗ ದೊಡ್ಡ ಸ್ಫೋಟ ಸಂಭವಿಸಿದೆ. ಆತನ ಮನೆಯವರು ಮತ್ತು ಅಕ್ಕಪಕ್ಕದವರು ಓಡಿ ಬಂದು ನೋಡಿದಾಗ ಶೌಚಾಲಯ ಲಾಕ್ ಆಗಿತ್ತು. ತಕ್ಷಣ ಬಾಗಿಲನ್ನು ಒಡೆದು ಒಳನೋಡಿದ ಪ್ರಜಾಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಬಾಯಿ ಸಂಪೂರ್ಣವಾಗಿ ಚಿದ್ರವಾಗಿತ್ತು.
ಪಟಾಕಿ ಸಿಡಿಸಿಕೊಂಡ ನಂತರವೂ ಇವರು ಕೆಲ ಹೊತ್ತು ಬದುಕಿದ್ದ. ಆಸ್ಪತ್ರೆಗೆ ದಾಖಲಿಸುವ ವೇಳೆ ಆತ ಮೃತರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಆ ಹೈಡ್ರೋಜನ್ ಬಾಂಬ್ ಸಿಡಿದ ತೀವ್ರತೆಗೆ ಆತನ ದವಡೆಗಳು ಹರಿದು ಹೋಗಿದ್ದು, ಮೂಗು ಮತ್ತು ಕಿವಿಗಳ ಬಳಿ ಕೂಡಾ ಸ್ಫೋಟದ ಪರಿಣಾಮ ಉಂಟಾಗಿದೆ. ಸುತ್ತ ಮುತ್ತಲ ಎಲುಬುಗಳು ಪುಡಿಯಾಗಿವೆ ಎಂದು ಆತನ ಪೋಸ್ಟ್ ಮಾರ್ಟಮ್ ನೆರವೇರಿಸಿದ ಡಾಕ್ಟರ್ ದಿಲೀಪ್ ಸಿಂಘ್ ಸಿಕರ್ವಾರ್ ಹೇಳಿದ್ದಾರೆ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತರ ಹಿರಿಯ ಸಹೋದರ ಹೃದಯೇಶ್ ಮಾತನಾಡಿ ನಡೆದಿರುವ ಘಟನೆ ಬಗ್ಗೆ ವಿವರಿಸಿದ್ದಾರೆ.
ಇದನ್ನು ಓದಿ: PM Kisan: ಯೋಜನೆಯ ಹಣ ದುಪ್ಪಟ್ಟು! ಈ ಸಾರಿ ಖಾತೆಗೆ ಬೀಳಲಿದೆ 4000ರೂ.!