Sampath Jayaram Death: ಅಗ್ನಿಸಾಕ್ಷಿ ನಟ ಸಂಪತ್ ಸಾವಿಗೆ ಅಸಲಿ ಕಾರಣ ಬಹಿರಂಗ: ಪತ್ನಿಯ ಜತೆ ಆಟ ತಂದಿಟ್ಟ ಸಾವು ?

Sampath Jayaram Death : ನಿನ್ನೆ(ಏಪ್ರಿಲ್ 23) ಕನ್ನಡ ಕಿರುತೆರೆಗೆ ದೊಡ್ಡ ಶಾಕ್ ಕಾದಿತ್ತು. ಯಾಕೆಂದರೆ ಒಂದು ಕಾಲದಲ್ಲಿ ಕಿರುತೆರೆ ಲೋಕದಲ್ಲಿ ಜನಮನ್ನಣೆ ಗಳಿಸಿದ್ದ ಧಾರವಾಹಿ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದ ಸಂಪತ್ ಜಯರಾಂ ಆತ್ಮಹತ್ಯೆಗೆ (Sampath Jayaram Death) ಶರಣಾಗಿದ್ದರು. 35 ವರ್ಷದ ನಟ ದಿಢೀರನೇ ಇಂತಹ ದುಡುಕಿನ ನಿರ್ಧಾರಕ್ಕೆ ಎಲ್ಲರೂ ಮರುಗಿದ್ದರು. ಜೊತೆಗೆ ಹಲವು ಊಹಾ ಪೋಹಗಳು ಹುಟ್ಟಿ, ಇದರ ಸುತ್ತ ಅನುಮಾದ ಹುತ್ತವೂ ಎದ್ದಿತ್ತು. ಆದರೀಗ ಈ ಸಾವಿನ ಸತ್ಯ ಬಹಿರಂಗವಾಗಿದೆ.

 

ಹೌದು, ಸಂಪತ್ ಜಯರಾಮ್ ಸಾವಿಗೆ ಅಸಲಿ ಕಾರಣವೇನು ಎಂಬುದನ್ನ ‘ಅಗ್ನಿಸಾಕ್ಷಿ’ ಖ್ಯಾತಿಯ ನಟ ರಾಜೇಶ್ ಧ್ರುವ ತಿಳಿಸಿದ್ದಾರೆ. ಇದರೊಂದಿಗೆ ಆಪ್ತ ಸ್ನೇಹಿತನ ಬಗ್ಗೆ ಕೆಟ್ಟ ಗಾಸಿಪ್‌ಗಳನ್ನ ಮಾಡಬೇಡಿ ಎಂದು ಮನವಿ ಮಾಡೋ ಮೂಲಕ ನೆಗೆಟಿವ್ ಸುದ್ದಿಗಳಿಗೆ ರಾಜೇಶ್ ಧ್ರುವ ಬ್ರೇಕ್ ಹಾಕಿದ್ದಾರೆ. ಹಾಗಿದ್ರೆ ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

ಅಂದಹಾಗೆ ಸಂಪತ್ ಮೂಲತಃ ಮಲೆನಾಡಿನ ಪ್ರತಿಭೆ, ಕಿರುತೆರೆ ಅಗ್ನಿಸಾಕ್ಷಿ ಸೀರಿಯಲ್ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ (Vaishnavi Gowda) ಅವರ ಅಣ್ಣನ ಪಾತ್ರದಲ್ಲಿ ಸಂಪತ್ ಮಿಂಚಿದ್ದರು. ನಟ ರಾಜೇಶ್ ಧ್ರುವ ಜೊತೆ ‘ಶ್ರೀ ಬಾಲಾಜಿ ಸ್ಟುಡಿಯೋ’ ಸೇರಿದಂತೆ ಹಲವು ಸೀರಿಯಲ್, ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಅಂತೆ ಕಂತೆ ಗಾಸಿಪ್‌ಗಳು ಶುರುವಾದವು. ಆದರೀಗ ಈ ಕುರಿತು ಮಾತನಾಡಿದ ಗೆಳೆಯ ರಾಜೇಶ್ ದ್ರುವ “ಗಂಡ-ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ ಹಾಗೆ ಹೀಗೆ ಎಂದು ಹೆದರಿಸಿದ್ದಾನೆ ಆಗ ಕುತ್ತಿಗೆ ಲಾಕ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೀಗೆ ಮಾಡಿರೋದು ಅಲ್ಲ, ಹೆದರಿಸಲು ಹೋಗಿ ಅಚಾನಕ್ ಆಗಿ ಹೀಗೆ ಆಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಪತ್ ಅವರ ಜೀವನ ಹಾಗೂ ಸಾವಿನ ಕಾರಣಗಳನ್ನು ವಿವರವಾಗಿ ವಿವರಿಸಿದ ರಾಜೇಶ್ “ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ನನಗೆ ಕರೆ ಬರುತ್ತೆ. ನಾನು ಕೂಡ ನಿದ್ರೆಯಲ್ಲಿದ್ದೆ. ಫೋನ್ ಸೈಲೆಂಟ್‌ನಲ್ಲಿ ಇರಲಿಲ್ಲ ರಿಂಗ್ ಆಗಿದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್ ಅಂತ ಹೇಳಿದರು. ಎದ್ದೋ ಬಿದ್ನೋ ಅಂತ ಓಡಿ ಹೋದೆ ಅಷ್ಟರಲ್ಲಿ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಅಂತ ವಿಚಾರಿಸಿದಾಗ ಅಲ್ಲಿ ಬಂದಂತ ಕಾಮನ್ ಉತ್ತರ ಇತ್ತೀಚಿಗೆ ಮದುವೆ ಮಾಡಿಕೊಂಡಿದ್ದ. ಒಂದು ವರ್ಷ ಕೂಡ ಆಗಿರಲಿಲ್ಲ ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ, ಇಂಟರ್ ಕಾಸ್ಟ್ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಲೀಡ್ ಮಾಡುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ ಮಾಡಿಕೊಟ್ಟಿದ್ದು. ಅವರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುವೆ. ಅವರ ಲವ್ ಸ್ಟೋರಿ ಪ್ರತಿಯೊಂದು ನನಗೆ ಗೊತ್ತು” ಎಂದು ರಾಜೇಶ್ ಹೇಳಿದ್ದಾರೆ.

“ಅಲ್ಲದೆ ಸಂಪತ್ ಹೇಗೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ ಏಕೆಂದರೆ ಸಂಪತ್ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಆರ್ಥಿಕ ಸಮಸ್ಯೆ ಇತ್ತು ಗಂಡ-ಹೆಂಡತಿ ನೆಮ್ಮದಿಯಾಗಿ ಇರಲಿಲ್ಲ, ಅವಕಾಶ ಸಿಗಲಿಲ್ಲ ಎಂದು ಡಿಪ್ರೆಶನ್‌ನಲ್ಲಿದ್ದ ಅಂತಾ ವಿಡಿಯೋ ಹರಿದಾಡುತ್ತಿದೆ. ಚಾನ್ಸ್ ಇರಲಿಲ್ಲ ನಿಜ ಆದರೆ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್ ಸೃಷ್ಠಿ ಮಾಡಿಕೊಳ್ಳುತ್ತಿದ್ವಿ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಅವನಲ್ಲಿ ಇತ್ತು. ‘ಅಗ್ನಿಸಾಕ್ಷಿ’ ಧಾರಾವಾಹಿ ನೋಡಿ ಅನೇಕರು ಆತನ ನಟನೆ ಮೆಚ್ಚಿಕೊಂಡಿದ್ದರು. ಸಂಪತ್ ಎಂದಿಗೂ ಸೋಲು ಒಪ್ಪಿಕೊಳ್ಳುತ್ತಿರಲಿಲ್ಲ ತುಂಬಾ ಪ್ರಯತ್ನ ಮಾಡುತ್ತಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತಾ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಪರಿಣಾಮ ಬೀರಿದೆ. ದಯವಿಟ್ಟು ಕೆಟ್ಟ ಗಾಸಿಪ್ ಮಾಡಬೇಡಿ” ಎಂದು ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ.

“ನನ್ನ ಪ್ರಾಣ ಸ್ನೇಹಿತ, ನೆಚ್ಚಿನ ನಟ ಸಂಪತ್‌ ಜಯರಾಮ್ ಇವತ್ತು ನಮ್ಮನ್ನು ಬಿಟ್ಟು ಅಗಲಿದ್ದಾರೆ. ತುಂಬಾ ಬೇಜಾರ್ ಆಗ್ತಿದೆ ಏಕೆಂದ್ರೆ ಬಾಲಾಜಿ ಫೋಟೋ ಸ್ಟುಡಿಯೋ ಅನ್ನೋ ಸಿನಿಮಾ ಅವರ ಆಕ್ಟಿಂಗ್‌ಗೆ ತುಂಬಾ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಸಿನಿಮಾ ನೋಡಿರುವ ಪ್ರತಿಯೊಬ್ಬರೂ ಒಂದೊಳ್ಳೆ ನಟ ಸಿಕ್ಕಿದ್ದಾನೆ ನಮ್ಮ ಇಂಡಸ್ಟ್ರಿಗೆ ಎಂದು ತುಂಬಾ ಖುಷಿ ಪಟ್ಟಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಿಂದ ತುಂಬಾ ಒಳ್ಳೆ ಹೆಸರು ಪಡೆದುಕೊಂಡಿದ್ದರು. ಚಿಕ್ಕಮಗಳೂರು ಮತ್ತು ಕೊಪ್ಪ ಅವರ ಊರು, ಅವರಿಂದ ನನಗೆ ಆ ಊರು ತಂಬಾ ಹತ್ತಿರವಾಗಿದೆ. ಸಂಪತ್ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು..2013ರಿಂದ ಜೊತೆ ಜೊತೆಗೆ ಅಗ್ನಿಸಾಕ್ಷಿ ಸೀರಿಯಲ್ ಮಾಡಿದ್ದೀವಿ. ಪ್ರತಿಭೆನೇ ಸಂಪತ್‌ಗೆ ತುಂಬಾ ದೊಡ್ಡ ಆಸ್ತಿ. ಎಂಥಾ ಸಂದರ್ಭ ಕೊಟ್ಟರೂ ನಟಿಸುವ ಸಾಮರ್ಥ್ಯ ಇರುವಂತ ನಟ ಅದನ್ನು ತುಂಬಾ ಜನರು ಗುರುತು ಹಿಡಿದಿಲ್ಲ ಅನ್ನೋದು ಬೇಸರ ವಿಚಾರ” ಎಂದು ರಾಜೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Akanda Shinivasa murthy: ಕೊನೆಗೂ ಆ ಪಕ್ಷದಿಂದ ಅಕಾಡಕ್ಕಿಳಿದ ಅಖಂಡ ಶ್ರೀನಿವಾಸ ಮೂರ್ತಿ! ಪುಲಿಕೇಶಿ ನಗರದ ಜನತೆಗೆ ಶಾಕ್!

Leave A Reply

Your email address will not be published.