Mangalore: ಬಾಲಕನ ತಲೆಯ ಮೇಲೆ ಕಾರು ಹರಿದು ಸಾವು, ರಂಜಾನ್ ಹಬ್ಬದ ಸಂದರ್ಭ ನಡೆದ ಭೀಕರ ಅಪಘಾತ

Mangalore Accident: ಭೀಕರ ರಸ್ತೆ ಅಪಘಾತಕ್ಕೆ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆಯೊಂದು ಎ.22 ರಂದು ನಡೆದಿದೆ. ಈ ಘಟನೆ ಸೂರಿಂಜೆ ಎಂಬಲ್ಲಿ ಸಂಭವಿಸಿದೆ.

 

ಮೃತಪಟ್ಟ ಬಾಲಕನನ್ನು ಮಹಮ್ಮದ್‌ ಮುಸ್ಲಿಯಾರ್‌ ಮಗ ಎಂದು ಗುರುತಿಸಲಾಗಿದೆ. ಈ ಬಾಲಕ ವಯಸ್ಸು ಹದಿನಾರು ಎಂದು ವರದಿಯಾಗಿದೆ. ಈದುಲ್‌ ಫಿತ್ರ್‌ ಹಬ್ಬದ ಖುಷಿಯಲ್ಲಿದ ಬಾಲಕ ಸಂಜೆ ತನ್ನ ಗೆಳೆಯನ ಜೊತೆ ದ್ವಿಚಕ್ತ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಸ್ಕೂಟರ್‌ ಸ್ಕಿಡ್‌ ಆಗಿದ್ದರಿಂದ ಬಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಅದೇ ಸಂದರ್ಭ ಹಿಂಬದಿಯಿಂದ ಬಂದ ಕಾರೊಂದು ಬಾಲಕ ತಲೆಯ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸಹಸವಾರ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

Leave A Reply

Your email address will not be published.