Anchor Anushree: ಸರಿಗಮಪ ಸೀಸನ್ 19: ಬೆಚ್ಚಿ ಬೀಳಿಸುತ್ತೆ ಚಿಟ್ ಪಟಾಕಿ ಕ್ರೇಜಿ ಗರ್ಲ್ ಅನುಶ್ರೀ ಪಡೀತಾ ಇರೋ ಸಂಭಾವನೆ !

Anchor Anushree Payment: ಕನ್ನಡದ ಬಹುಬೇಡಿಕೆಯ ನಿರೂಪಕಿ ಅನುಶ್ರೀ (Anchor Anushree ) ಅಂದರೆ ಎಲ್ಲರಿಗೂ ಇಷ್ಟಾನೇ ಬಿಡಿ. ಅನುಶ್ರೀ ನಿರೂಪಣೆ ಮಾಡೋಕೆ ಶುರು ಮಾಡಿದರೆ ಸಾಕು, ಜನರು ಶಿಳ್ಳೆ ಹೊಡೆಯುತ್ತಾ ಕಣ್ಣು ಬಾಯಿ ಬಿಟ್ಟು ಆಕೆಯ ನಿರೂಪಣೆಯನ್ನು ಎಂಜಾಯ್ ಮಾಡುತ್ತಾರೆ.

 

ಈಗಾಗಲೇ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿದ ಬಿಗ್ ಬಾಸ್ ( Kannada Big Boss) ಮನೆಗೆ ಎಂಟ್ರಿ ಕೊಟ್ಟು ತಮ್ಮ ಪರಿಚಯವನ್ನು ಸಕತ್ತಾಗೆ ಮಾಡಿಕೊಂಡ ಅನುಶ್ರೀ, ನಂತರ ಸರಿಗಮಪ, ಡಾನ್ಸ್ ಕರ್ನಾಟಕ ಡಾನ್ಸ್ ಮುಂತಾದ ರಿಯಾಲಿಟಿ ಶೋಗಳ ಹಲವು ಸೀಸನ್‌ಗಳನ್ನು ಅನುಶ್ರೀ ನಿರೂಪಣೆ (Anchor Anushree Payment) ಮಾಡಿಕೊಂಡು ಬರುತ್ತಿದ್ದು, ಇಡೀ ಕರ್ನಾಟಕದ ಜನರ ಪ್ರೀತಿ ಗಳಿಸಿಕೊಂಡಿದ್ದಾರೆ.

ನಿರೂಪಣೆ ಮಾಡೋದು ಅಂದ್ರೆ ಅಷ್ಟು ಸುಲಭವಲ್ಲ ಅನ್ನುವುದು ನಮಗೆ ಗೊತ್ತಿರುವ ವಿಚಾರ. ಅಂತೆಯೇ, ಅನುಶ್ರೀ ಅವರು ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾದಂತಹ ಸರಿಗಮಪ ಸೀಸನ್ 19 ಕ್ಕೆ (Sarigamapa Season 19) ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿರುವ ಇವರು ಪಡೆದ ಸಂಭಾವನೆ (Remuneration) ಎಷ್ಟು ಅನ್ನುವುದು ನೀವು ಊಹಿಸಲು ಕೂಡಾ ಸಾಧ್ಯವಿಲ್ಲ. ಆ ಮಟ್ಟಿಗೆ ಇದೆ ಆಕೆಯ ಸಂಬಳ.

ಆಕೆಯ ಸಂಬಳ ಎಷ್ಟು ಎಂದು ತಿಳಿದುಕೊಳ್ಳುವುದಕ್ಕೂ ಮೊದಲು ಅನುಶ್ರೀ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಕೆಲವೊಂದನ್ನ ನೀವು ತಿಳಿದುಕೊಳ್ಳಲೇಬೇಕು. ವಿಶೇಷ ಅಂದ್ರೆ, ಆಕೆ ಬೆಳಿಗ್ಗೆ 10 ಗಂಟೆಗೆ ಎಷ್ಟು ಎನರ್ಜಿಟಿಕ್ ಆಗಿರ್ತಾರೋ, ಮಧ್ಯರಾತ್ರಿ 2 ಗಂಟೆಗೆ ಮೈಕ್ ಕೊಟ್ಟರೂ ಅಷ್ಟೇ ಎನರ್ಜಿಟಿಕ್ ಇರ್ತಾರಂತೆ. ಎಲ್ಲೂ ಎನರ್ಜಿ ಕಳೆದುಕೊಳ್ಳದೆ, ಇನಿತೂ ಉತ್ಸಾಹ ಸೋರಿ ಹೋಗಲು ಬಿಡದೆ, ಮಾತಿನಲ್ಲೇ ಇಡೀ ಕರ್ನಾಟಕದ ಜನರನ್ನು ಮೋಡಿ ಮಾಡುವ ಕಲಾಕಾರ್ತಿ ಈ ಅನುಶ್ರೀ. ಇಷ್ಟೆಲ್ಲಾ ಪ್ರಯತ್ನ, ಕಲೆ ಮತ್ತು ಬೋನಸ್ ಆಗಿ ಸೌಂದರ್ಯ ಇದ್ದಲ್ಲಿ ಹಣ ಹುಡ್ಕೊಂದು ಬಾರದೆ ಇರ್ತದಾ ? ಅದ್ಕೇ ಇರ್ಬೇಕು, ಒಳ್ಳೆಯ ಸಂಬಳ ಎಣಿಸುತ್ತಿದ್ದಾರೆ. ನಮ್ಮ ನವರಸ ನಾಯಕ ಜಗ್ಗೇಶ್ ಅವರ ಭಾಷೆಯಲ್ಲಿ ಹೇಳೋದಾದ್ರೆ ‘ ಒಳ್ಳೆಯ ಟೋಕನ್ ವರ್ಕ್ ಔಟ್ ಆಗ್ತಿದೆ ‘ ಎನ್ನಬಹುದು.

ಹೌದು, ಈಗಾಗಲೇ ಯಶಸ್ವಿಯಾಗಿ ಮುಗಿದು ಹೋಗಿರುವ ಸರಿಗಮಪ ಸೀಸನ್ 19ರ ನಿರೂಪಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮುಗಿಸಿದ ಅನುಶ್ರೀ ಒಂದು ಎಪಿಸೋಡ್ ಗೆ ಬರೊಬ್ಬರಿ 3 ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಒಂದು ದಿನದಲ್ಲಿ ಒಂದು ಎಪಿಸೋಡು ಶೂಟ್ ಆಗತ್ತೆ. ಏಳೆಂಟು ಗಂಟೆಗಳ ಕೆಲಸ. ವ್ಯಾನಿಟಿ ಫುಲ್ ಝಣ ಝಣ !!!

ಅಷ್ಟೇ ಅಲ್ಲ ಈಗಲೂ ಕೂಡ ಕನ್ನಡದ ಯಾವುದೇ ಸಿನಿಮಾಗಳ ಆಡಿಯೋ ಲಾಂಚ್, ಫ್ರೀ ರಿಲೀಸಿಂಗ್ ಇವೇಂಟ್ ಹೀಗೆ ಸಾಕಷ್ಟು ಇವೆಂಟ್ಗಳನ್ನು ಅದ್ಭುತವಾಗಿ ನಡೆಸಿಕೊಡುತ್ತಾರೆ. ಜೊತೆಗೆ ಅಡ್ವಟೈಸ್ ಹಾಗೂ ಪ್ರಮೋಷನ್ ನಲ್ಲಿಯೂ ಅನುಶ್ರೀ ಸಂಪಾದನೆ ಮಾಡುತ್ತಾರೆ.

ಒಟ್ಟಿನಲ್ಲಿ ಮಾತಿನ ಬಂಡವಾಳವೇ ಇಂದು ಅನುಶ್ರೀಯ ಕೈ ಹಿಡಿದಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಆಂಕರ್ ಅನುಶ್ರೀ ಅದನ್ನು ತೋರಿಸಿಕೊಟ್ಟಿದ್ದಾರೆ. ಕೇವಲ ಮಾತು ಮಾತ್ರವಲ್ಲ, ರೂಪದಲ್ಲಿ ಕೂಡಾ ಆಕೆ ಯಾವುದೇ ಸ್ಟಾರ್ ನಟಿಯರಿಗೂ ಕೂಡ ಕಡಿಮೆ ಇಲ್ಲ, ಬೆಂಕಿ ಪೊಟ್ಟಣ ಆಕೆಯ ಮೊದಲ ಸಿನಿಮಾಗಿದ್ದು, ಈ ಸಿನಿಮಾಗೆ NAK ಮೀಡಿಯಾದಿಂದ Best Debu actor ಎಂಬ ಅವಾರ್ಡ್ ಪಡೆದಿದ್ದಾರೆ. ಇನ್ನು ಮುರಳಿ ಮೀಟ್ಸ್ ಮೀರಾ ಸಿನಿಮಾದಲ್ಲೂ ಬಣ್ಣ ಹಚ್ಚಿ ಈ ಸಿನಿಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದಿದ್ದಾರೆ.

ಒಟ್ಟಿನಲ್ಲಿ ಈಗ ಅನುಶ್ರೀ ಟೈಂ ಚೆನ್ನಾಗಿದೆ. ಒಂದಾದ ಮೇಲೆ ಒಂದರಂತೆ ಸಾಕಷ್ಟು ಶೋಗಳನ್ನು ಮಾಡುತ್ತ ಹೋದಂತೆ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಸಿನಿಮಾಗಳಲ್ಲಿ ಕೂಡಾ ನಟಿಸಿರುವ ಅನುಶ್ರೀ ಅವರು ಇಂದು ಕನ್ನಡ ಕಿರುತೆರೆಯ ನಂಬರ್ ಒನ್ ಆಂಕರ್ ಆಗಿದ್ದು, ನಮ್ಮನ್ನೆಲ್ಲ ರಂಜಿಸಲು ಸದಾ ಸಿದ್ದರಾಗಿದ್ದಾರೆ.

Leave A Reply

Your email address will not be published.