Siddaganga Mutt: ತುಮಕೂರು ಸಿದ್ಧಗಂಗಾ ಮಠಕ್ಕೆ ನೂತನ ಉತ್ತರಾಧಿಕಾರಿ: ಇವರೇ ನೋಡಿ ಮುಂದೆ ಮಠವನ್ನು ಮುನ್ನಡೆಸೋ ಸ್ವಾಮೀಜಿ

Siddaganga Mutt: ನಾಡಿನ ಹಿರಿಮೆ, ಎಲ್ಲೆಡೆಯೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ, ವಿಶ್ವವ್ಯಾಪಿ ತ್ರಿವಿಧ ದಾಸೋಹಿ ಮಠವೆಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ(Siddaganga Mutt) ಸದ್ಯದಲ್ಲೆ ನೂತನ ಉತ್ತರಾಧಿಕಾರಿ ನೇಮಕವಾಗಲಿದ್ದಾರೆ.

ಹೌದು, ನಾಡಿನೆಲ್ಲಡೆ ಪ್ರಸಿದ್ಧಿ ಹೊಂದಿರುವ ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿ ಹಾಗೂ ನಿರಂಜನ ಪಟ್ಟಾಧಿಕಾರಿ ಮಹೋತ್ಸವವನ್ನು ಏ.23ರ ಜಸವ ಜಯಂತಿಯಂದು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಶಿವಕುಮಾರ(Shivakumara Swamy) ಸ್ವಾಮೀಜಿಗಳಿಗೆ ಶಿಷ್ಯನಾಗಿದ್ದ ಮನೋಜ್‌(Manoj) ಎಂಬುವವರು ಮಠಕ್ಕೆ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಮಠದ ಆಡಳಿತ ಮಂಡಳಿಯು ತಿಳಿಸಿದೆ.

ಅಂದಹಾಗೆ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ, ಶ್ರಿ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯಾಗಿ ಸಿದ್ದಲಿಂಗ ಸ್ವಾಮೀಜಿ(Siddalinga Swamy) ಆಡಳಿತ ಮಾಡುತ್ತಿದ್ದಾರೆ. ಸದ್ಯ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. 2019, ಜ.21 ರಂದು ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಶ್ರೀಮಠವನ್ನು ಮುನ್ನಡೆಸುತ್ತಿದ್ದು ಅಂದಿನಿಂದಲೇ ತ್ರಿವಿಧ ದಾಸೋಹ ಪರಂಪರೆಯ ಶ್ರೀಮಠಕ್ಕೆ ಉತ್ತರಾಧಿಕಾರಿ ಶೋಧ ನಡೆದಿತ್ತು.

ಅಲ್ಲದೆ ಸಿದ್ದಗಂಗಾ ಮಠದ ಜತೆಗೆ ಶ್ರೀಮಠದ ಪರಂಪರೆಯ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೇಮಠ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಸವಕಲ್ಯಾಣ ಮಠಕ್ಕು ‘ಅಕ್ಷಯ ತೃತೀಯ’ ಪ್ರಸಿದ್ಧವಾದ ಬಸವಯಜಯಂತಿಯಂದೇ ಉತ್ತರಾಧಿಕಾರಿಗಳ ನೇಮಕ ಕಾರ್ಯಕ್ರಮವು ನಡೆಯಲಿದೆ.

ಶ್ರೀ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಯಾರು?
ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಮನೋಜ್‌ ಕುಮಾರ್‌ ಪಟ್ಟಾಧಿಕಾರ ಸ್ವೀಕರಿಸುವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಮೈಲನಹಳ್ಳಿ ಮೂಲದ ಷಡಕ್ಷರಿ ಎಂ.ಬಿ. ಮತ್ತು ವಿರುಪಾಕ್ಷಮ್ಮ ದಂಪತಿಯ ಪುತ್ರರಾಗಿದ್ದಾರೆ. 1987 ಜೂನ್‌ 2ರಂದು ಜನಿಸಿದ್ದು, ಬಿಎಸ್ಸಿ, ಬಿ.ಇಡಿ, ಎಂಎಸ್ಸಿ, ಎಂ.ಎ ವಿದ್ವತ್‌ ವಿದ್ಯಾರ್ಹತೆ ಹೊಂದಿರುವ ಇವರು ಸದ್ಯ ಶ್ರೀ ಸಿದ್ಧಗಂಗಾ ಪಾಲಿಟೆಕ್ನಿಕ್‌ ಕಾಲೇಜಲ್ಲಿಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನು ಶ್ರೀ ಕಂಚುಗಲ್ ಬಂಡೇಮಠಕ್ಕೆ ಎಂ.ಎ., ಸಂಸ್ಕೃತ ವ್ಯಾಸಾಂಗ ಮಾಡುತ್ತಿರುವ 25 ವರ್ಷದ ಕೆ.ಎಂ.ಹರ್ಷ ಅವರನ್ನು ನೇಮಿಸಲಾಗಿದೆ. ತುಮಕೂರು ತಾಲೂಕಿನ ಕಾಳೇನಹಳ್ಳಿ ಹರ್ಷ ಹುಟ್ಟೂರು. ಬಸವಕಲ್ಯಾಣ ಮಠಕ್ಕೆ ಮಂಡ್ಯ ಜಿಲ್ಲೆಯ ದುದ್ದ ಹೋಬಳಿಯ ಬಿಳುಗುಲಿಯ ಗೌರೀಶ್ ಕುಮಾರ್‌ರನ್ನು ನಿಯೋಜಿಸಲಾಗಿದೆ.

ಇದನ್ನು ಓದಿ: Hassan Politics: ಬಿಜೆಪಿ ರಣತಂತ್ರ ಬದಲು: ಹೊಳೆ ನರಸಿಪುರದಲ್ಲಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಟಕ್ಕರ್ ! 

 

 

Leave A Reply

Your email address will not be published.