World’s Richest Cities: ವಿಶ್ವದ ಅಗ್ರ 10 ಶ್ರೀಮಂತ ನಗರಗಳ ಪಟ್ಟಿ ಬಿಡುಗಡೆ, ಯಾರು ಫಸ್ಟ್, ಬೆಂಗಳೂರು ಎಲ್ಲಿದೆ ?!

World’s Richest Cities: ಜಾಗತಿಕ ಸಂಪತ್ತನ್ನು ಲೆಕ್ಕ ಹಾಕುವ ಹೆನ್ಲಿ ಮತ್ತು ಪಾಲುದಾರ ಸಂಸ್ಥೆಯು ವಿಶ್ವದ ಟಾಪ್ 10 ಶ್ರೀಮಂತ ನಗರಗಳ (World’s Richest Cities) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಯಾವುದೇ ನಗರವು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ಸಂಪತ್ತಿನ ವಿಷಯದಲ್ಲಿ ಬೆಂಗಳೂರು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಎಂಬ ಕುತೂಹಲದ ಮಾಹಿತಿ ಲಭ್ಯವಾಗಿದೆ.

ವಿಶ್ವದ ಟಾಪ್ 10 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಈ ಎರಡು ದೇಶಗಳ ನಗರಗಳು ಪ್ರಾಬಲ್ಯ ಹೊಂದಿವೆ. ಅವು ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ.

ವಿಶ್ವದ ಟಾಪ್ 10 ಶ್ರೀಮಂತ ನಗರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ನ್ಯೂಯಾರ್ಕ್ ನಗರವು ವಿಶ್ವದ ಅತ್ಯಂತ ಶ್ರೀಮಂತ ನಗರ ಎಂದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು 3.4 ಲಕ್ಷ ಮಿಲಿಯನೇರ್‌ಗಳು, 724 ಸೆಂಟಿ-ಮಿಲಿಯನೇರ್‌ಗಳು ಮತ್ತು 58 ಬಿಲಿಯನೇರ್‌ಗಳಿಗೆ ನೆಲೆಯಾಗಿದೆ. ಇದು USA ಯ ಹಣಕಾಸು ಕೇಂದ್ರವಾಗಿದೆ ಮತ್ತು ಇದು ವಿಶ್ವದ NYSE ಮತ್ತು Nasdaq ಎಂಬ ಎರಡು ದೊಡ್ಡ ಸ್ಟಾಕ್ ಎಕ್ಸ್’ಚೇಂಜ್ ಗೆ ನೆಲೆಯಾಗಿದೆ.

ಪಟ್ಟಿಯಲ್ಲಿರುವ ಎರಡನೇ ನಗರ ಟೋಕಿಯೊ, ಇದು ಜಪಾನ್‌ನ ರಾಜಧಾನಿ ಮತ್ತು 290,300 ಮಿಲಿಯನೇರ್‌ಗಳು, 250 ಸೆಂಟಿ-ಮಿಲಿಯನೇರ್‌ಗಳು ಮತ್ತು 14 ಬಿಲಿಯನೇರ್‌ಗಳ ನೆಲೆಯಾಗಿದೆ. ಇದು ಏಷ್ಯಾದ ಶ್ರೀಮಂತ ದೇಶವಾಗಿದೆ.

ಯುನೈಟೆಡ್ ಕಿಂಗ್‌ಡಮ್‌ನ ರಾಜಧಾನಿಯಾಗಿರುವ ಲಂಡನ್, ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಈಗಲೂ ಯುರೋಪ್‌ನ ಅತ್ಯಂತ ಶ್ರೀಮಂತ ನಗರವಾಗಿದೆ. ಇದು 258,000 ಮಿಲಿಯನೇರ್‌ಗಳ ನೆಲೆವೀಡು, 384 ಸೆಂಟಿ-ಮಿಲಿಯನೇರ್‌ಗಳು ಮತ್ತು 36 ಬಿಲಿಯನೇರ್‌ಗಳಿಗೆ ತಾಯ್ನೆಲ.

ಇನ್ನು ಆಸ್ಟ್ರೇಲಿಯಾ ಖಂಡದಲ್ಲಿ, ನ್ಯೂ ಸೌತ್ ವೇಲ್ಸ್‌ನ ರಾಜಧಾನಿಯಾದ ಸಿಡ್ನಿ, ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ನಗರವಾಗಿದೆ. ಇದು 126,900 ಮಿಲಿಯನೇರ್‌ ಗಳ ಕರ್ಮಭೂಮಿ. 184 ಸೆಂಟಿ-ಮಿಲಿಯನೇರ್‌ಗಳು ಮತ್ತು 15 ಬಿಲಿಯನೇರ್‌ಗಳಿಗೆ ಆಸೀಸ್ ಜಾಗ ಮಾಡಿ ಕೊಟ್ಟು ಅವರನ್ನು ಪೋಷಿಸಿದೆ. ವಿಶ್ವದ ಶ್ರೀಮಂತ ನಗರಗಳ ಪಟ್ಟಿಯಲ್ಲಿ, ಸಿಡ್ನಿಯು 10 ನೇ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದ ಯಾವುದೇ ನಗರವು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದರೂ, ಸಂಪತ್ತಿನ ವಿಷಯದಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಹೊರಹೊಮ್ಮಿದೆ. ಬೆಂಗಳೂರು 2012 ರಿಂದ 2022 ರವರೆಗೆ ಸಂಪತ್ತಿನ ಬಲವಾದ ಬೆಳವಣಿಗೆಯನ್ನು ಕಂಡಿದೆ ಎಂದು ಕನ್ಸಲ್ಟೆಂಟ್ ಸಂಸ್ಥೆ ಹೇಳಿದೆ.

 

ಇದನ್ನು ಓದಿ : Ayanur Manjunath: ಬಿಜೆಪಿ ಕೈ ತಪ್ಪಿದಕ್ಕೆ ಆಯನೂರು ಮಂಜುನಾಥ್‌ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆ 

Leave A Reply

Your email address will not be published.