IPL 2023: ಲಕ್ಷ ಲಕ್ಷ ದಂಡ ಕಕ್ಕಿದ ವಿರಾಟ್ ಕೊಹ್ಲಿ: IPL ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆ, ಅಂತದ್ದು. ಎನ್ಮಾಡಿದ್ರು ಕೊಹ್ಲಿ ?!

Virat Kohli Fined : ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಮಾಜಿ ನಾಯಕ ಜೊತೆಗೆ ‘ರನ್ ಮಷಿನ್’ ಎಂಬ ಹೆಗ್ಗಳಿಕೆ ಹೊಂದಿರುವ ವಿರಾಟ್ ಕೊಹ್ಲಿ ಅವರ ಅಬ್ಬರಕ್ಕೆ ದೊಡ್ದ ಹೊಡೆತ ಬಿದ್ದಿದ್ದು, ದಂಡ ತೆರಬೇಕಾದ ಸ್ಥಿತಿಯನ್ನು ಕೊಹ್ಲಿ ( Virat Kohli Fined) ಬರಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅಂತದ್ದೇನಾಯಿತು? ವಿರಾಟ್ ವೀರಾವೇಶದ ಆಟಕ್ಕೆ ಹೀನಾಯ ಸೋಲಿನ ಪೆಟ್ಟು ಒಂದೆಡೆಯಾದರೆ, ಗಾಯದ ಮೇಲೆ ಬರೆ ಎಳೆದಂತೆ ಬಿಸಿಸಿಐನಿಂದ ಕೂಡ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಲಕ್ಷ ಲಕ್ಷ ದಂಡ ಕಕ್ಕಬೇಕಾದ ಸ್ಥಿತಿ ಎದುರಾಗಿದೆ.

ಎಲ್ಲರಿಗೂ ಗೊತ್ತಿರುವಂತೆ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023)ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ನಡುವೆ ಪಂದ್ಯಾಟ ಭಾರೀ ಕುತೂಹಲ ಹುಟ್ಟು ಹಾಕುವುದು ಸಹಜ. ಈ ಎರಡು ತಂಡಕ್ಕೂ ಭಾರೀ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ಈ ಪಂದ್ಯದ ಗೆಲುವನ್ನು ಕೌತುಕದಿಂದ ಎದುರು ನೋಡುತ್ತಿದ್ದ ಆರ್ ಸಿಬಿ(RCB)ಅಭಿಮಾನಿಗಳಿಗೆ ಬೇಸರದ ಸಂಗತಿ ಕಾದಿತ್ತು. ಹೈವೋಲ್ಟೇಜ್ ಪಂದ್ಯದಲ್ಲಿ ಆರ್ ಸಿಬಿ 8 ರನ್ಗಳಿಂದ ಸೋಲುಂಡಿದ್ದು ಒಂದೆಡೆಯಾದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಸಂದರ್ಭ ಐಪಿಎಲ್ (IPL 2023)ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆ ವಿರಾಟ್ ಕೊಹ್ಲಿ ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ದಂಡ ವಿಧಿಸಲಾಗಿದೆ,” ಎಂದು ಐಪಿಎಲ್‌ ತನ್ನ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದು ಹೀಗಾಗಿ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದ್ದು ಸುಳ್ಳಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ವಿರಾಟ್ ಕೊಹ್ಲಿಗೆ(Virat Kohli Fined)ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದ್ದು, ಕೊಹ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎದುರಾಳಿ ತಂಡದ ಬ್ಯಾಟ್ಸ್ಮನ್ ಶಿವಂ ದುಬೇ ವಿಕೆಟ್ ಒಪ್ಪಿಸಿದ ನಂತರ ವಿರಾಟ್ ಕೊಹ್ಲಿ ಆವೇಶಭರಿತರಾಗಿ ಸಂಭ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಐಪಿಎಲ್ ನೀತಿ ಸಂಹಿತೆ ಆರ್ಟಿಕಲ್‌ 2.2 ಅಡಿಯಲ್ಲಿ ಮೊದಲನೇ ಹಂತದ ಅಪರಾಧವನ್ನು ಮಾಡಿರುವುದಾಗಿ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದು, ಹೀಗಾಗಿ, ಯಾವುದೇ ವಿಚಾರಣೆ ಇರುವುದಿಲ್ಲ. ಪಂದ್ಯದ ರೆಫರಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದರು ಕೂಡ ಕೊಹ್ಲಿಗೆ ದಂಡ ವಿಧಿಸಿರುವುದಕ್ಕೆ ಸಂಬಂಧಿಸಿದ ನಿರ್ದಿಷ್ಟ ಘಟನೆಯನ್ನು ಉಲ್ಲೇಖ ಮಾಡಿಲ್ಲ ಎಂದು ತಿಳಿದುಬಂದಿದೆ.

ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಫಾಫ್ ಡು ಪ್ಲೆಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ಡೆವೊನ್ ಕಾನ್ವೆ ಮತ್ತು ಶಿವಂ ದುಬೆ ಅವರ ಸಹಾಯದಿಂದ 226 ರನ್ ಪಡೆದುಕೊಂಡಿತು. ರನ್-ಚೇಸ್ ಮಾಡುವ ಸಲುವಾಗಿ ಆರ್ ಸಿ ಬಿ ಆರಂಭಿಕ ಹಿನ್ನೆಡೆ ಉಂಟಾದರು ಕೂಡ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಕ್ರೀಡಾಂಗಣದಲ್ಲಿ ಅಬ್ಬರದಿಂದ , RCB ಪಂದ್ಯವನ್ನು ಗೆಲ್ಲುವ ಹಾದಿಗೆ ತಂದಿದ್ದರು. ಆದರೆ ಕೊನೆಯ ಐದು ಓವರ್ಗಳಲ್ಲಿ 58 ರನ್’ಗಳ ಅಗತ್ಯವಿದ್ದಾಗ ಅನುಭವಿ ದಿನೇಶ್ ಕಾರ್ತಿಕ್ ಕೆಲವು ಬೌಂಡರಿಗಳನ್ನು ಬಾರಿಸಿ ಪೆವಿಲಿಯನ್’ಗೆ ಮರಳಿದರು. ಈ ಪಂದ್ಯದಲ್ಲಿ ಚೆನ್ನೈ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 226 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಬೆಂಗಳೂರು ಪಡೆ ಗೆಲುವು ಸಾಧಿಸುವ ಪ್ರಯತ್ನ ನಡೆಸಿದರು ಕೂಡ 8 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 218 ರನ್‌ ಗಳಿಸಲು ಸಾಧ್ಯವಾಯಿತು.

Leave A Reply

Your email address will not be published.