Traffic New Rules: ವಾಹನ ಸವಾರರೇ ಎಚ್ಚರ, ಇಂದಿನಿಂದ ನಿಮ್ಮವಾಹನದ ಟೈರ್‌ ಮೇಲೆ ದಂಡ! ಸಾರಿಗೆ ಹೊಸ ನಿಯಮ ಜಾರಿ

Traffic new Rules : ಇನ್ಮುಂದೆ ಸವೆದುಹೋದ ಕಳಪೆ ಟೈರ್ ಇಟ್ಕೊಂಡು ಗಾಡಿ ಓಡಿಸಿದರೆ ಖಂಡಿತ ಬೀಳುತ್ತೆ ದುಬಾರಿ ದಂಡ. ದಿನೇ ದಿನೇ ರಸ್ತೆಗಳ ಗುಣಮಟ್ಟವು ಉತ್ತಮಗೊಳ್ಳುತ್ತಲೇ ಇದೆ. ಇವುಗಳ ಮಧ್ಯೆ ಅಪಘಾತಗಳ ಸಂಖ್ಯೆಯು ಹೆಚ್ಚುತ್ತಿದೆ. ಗುಣಮಟ್ಟದ ರಸ್ತೆಗಳ ಕಾರಣದಿಂದ ವೇಗದ ವಾಹನ ಚಾಲನೆ ಸಾಮಾನ್ಯ. ಹಾಗೆ ವಾಹನವನ್ನು ವೇಗವಾಗಿ ಓಡಿಸಲು ವಾಹನ ಸುಸ್ತಿತಿಯಲ್ಲಿರಬೇಕು, ಮುಖ್ಯವಾಗಿ ರೋಡ್ ಗ್ರಿಪ್ ನೀಡಲು ವಾಹನದ ಟೈಯರ್ ಗಳು ಸುಸ್ಥಿರವಾಗಿರಬೇಕು. ಇನ್ನು ಮುಂದೆ ವಾಹನದ ಟೈಯರ್ ಸವೆದಿದ್ದರೆ, ಸಪಾಟಾಗಿದ್ದರೆ ಅಡ್ಡಾದಿಡ್ಡಿಯಾಗಿ ಟೈಯರ್ ಇದ್ದರೆ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ (Traffic new Rules).

ಇತ್ತೀಚೆಗೆ ಉದ್ಘಾಟನೆಗೊಂಡ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಅಥವಾ ಮುಂಬೈ-ನಾಗುರ ಎಕ್ಸ್‌ಪ್ರೆಸ್‌ನಲ್ಲಿ ಕಳಪೆ ಗುಣಮಟ್ಟದ ಟೈರ್‌ಗಳೊಂದಿಗೆ ಚಾಲನೆ ಮಾಡಿದ್ದಕ್ಕಾಗಿ ಕಾರು ಮಾಲೀಕರು ಈಗ ದಂಡವನ್ನು ಎದುರಿಸಬೇಕಾಗಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ (RTO) ವಾಹನಗಳ ಫಿಟ್‌ನೆಸ್ ತಪಾಸಣೆ ಮಾಡುತ್ತಿದೆ, ಇದರಲ್ಲಿ ಟೈರ್‌ಗಳ ಜೀವಿತಾವಧಿಯನ್ನು ಪರಿಶೀಲಿಸುತ್ತಿದ್ದಾರೆ.

ಇತ್ತೀಚೆಗೆ ಮುಂಬೈ-ನಾಗ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಭೀಕರ ಅಪಘಾತಗಳ ನಂತರ ಟೈರ್ ಗುಣಮಟ್ಟವನ್ನು ಪರಿಶೀಲಿಸುವ ಕ್ರಮವು ಶುರುವಾಯಿತು. ಅದು ಮೊದಲಿಗೆ, ಮಿತಿಮೀರಿದ ವೇಗವನ್ನು ಅಂದರೆ, ಹೈ ಸ್ಪೀಡ್ ಕಾರಿಡಾರ್ ನಲ್ಲಿ 120 kmph ವೇಗದ ಮಿತಿಯನ್ನು ಹೊಂದಬಹುದು. ಅದಕ್ಕಿಂತ ಜಾಸ್ತಿ ವೇಗದಲ್ಲಿ ಕಾರನ್ನು ಚಲಾಯಿಸುವಂತಿಲ್ಲ. ದೂರವನ್ನು ಸುರಕ್ಷಿತವಾಗಿ ಹೋಗಲು ಕಾರು ಸೂಕ್ತ ಆಕಾರದಲ್ಲಿರಬೇಕು. ಮುಖ್ಯವಾಗಿ ಕಾರುಗಳ ಟೈಯರ್ ಗಳು ಸವೆಯದೆ ಒಳ್ಳೆಯ ಸ್ಥಿತಿಯಲ್ಲಿರಬೇಕು. MSRDC ಮತ್ತು RTO ಫಿಟ್‌ನೆಸ್ ತಪಾಸಣೆ ನಡೆಸುತ್ತಿರುವಾಗ ಟೈರ್ ಸವಕಳಿ ಕಂಡು ಬಂದರೆ ಶೀಘ್ರದಲ್ಲೇ 20,000 ವರೆಗೆ ದಂಡವನ್ನು ವಸೂಲಿ ಮಾಡಲಾಗುತ್ತದೆ.

ಈಗ ಹಲವಾರು ಹೊಸ ಎಕ್ಸ್ಪ್ರೆಸ್‌ಗಳು ದೇಶದ ಉದ್ದ ಮತ್ತು ಅಗಲದಲ್ಲಿ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಎಕ್ಸ್‌ಪ್ರೆಸ್‌ಗಳನ್ನು ವಾಹನಗಳನ್ನು ಹೆಚ್ಚಿನ ವೇಗದಲ್ಲಿ ಓಡಿಸಲು ಅನುವು ಮಾಡಿಕೊಡಲು ವಿನ್ಯಾಸಗೊಳಿಸಲಾಗಿದೆ, ಇದರರ್ಥ, ನಿಮ್ಮ ಕಾರು ಎಲ್ಲಾ ಸಮಯದಲ್ಲೂ ಆ ವೇಗವನ್ನು ಚಾಲನೆ ಮಾಡಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ. ಅದು ಟೈರ್ ಸವಕಳಿ ಮಾತ್ರವಲ್ಲ, ಒಟ್ಟಾರೆ ವಾಹನದ ಮೆಂಟೆನನ್ಸ್ ತೀರಾ ಅಗತ್ಯವಾಗಿದೆ. ಇಲ್ಲದೆ ಹೋದರೆ ಬಿಚ್ಚ ಬೇಕಾಗತ್ತೆ 20,000 ರೂಪಾಯಿವರೆಗೆ ದಂಡ.

 

ಇದನ್ನೂ ಓದಿ: BJP ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಭೀಕರ ಕೊಲೆ!

Leave A Reply

Your email address will not be published.